ಸಿನಿಮಾ

ಕೆಮ್ಮಿನ ಸಿರಪ್ ರಫ್ತಿಗೆ ಪರೀಕ್ಷೆ ಕಡ್ಡಾಯ; ಕೇಂದ್ರ ಸರ್ಕಾರ

ನವದೆಹಲಿ: ಕಳೆದ ವರ್ಷ ಕೆಮ್ಮಿನ ಸೀರಪ್​ ಸೇವಿಸಿ ಸಾವು- ನೋವು ಸಂಭವಿಸಿದ್ದವು. ಈ ಕುರಿತಾಗಿ ಕೇಂದ್ರ ಸರ್ಕಾರ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಂಡಿದ್ದು, ಕೆಮ್ಮಿನ ಸಿರಪ್ ರಫ್ತಿಗೆ ಮುನ್ನ ಪರೀಕ್ಷೆ ಕಡ್ಡಾಯ ಎನ್ನುವ ಆದೇಶವನ್ನು ಹೊರಡಿಸಲಾಗಿದೆ.

ಕಳೆದ ವರ್ಷ ಭಾರತದ ಕೆಮ್ಮಿನ ಸಿರಪ್ ಸೇವಿಸಿದ ಬಳಿಕ ಗ್ಯಾಂಬಿಯಾ ಹಾಗೂ ಉಜ್ಬೇಕಿಸ್ತಾನದಲ್ಲಿ ಹಲವು ಮಕ್ಕಳ ಸಾವಾಗಿತ್ತು. ಗ್ಯಾಂಬಿಯಾದ 70 ಹಾಗೂ ಉಜ್ಬೇಕಿಸ್ತಾನದ 19 ಮಕ್ಕಳ ಸಾವಾಗಿತ್ತು. ಮಕ್ಕಳ ಸಾವಿಗೆ ಭಾರತದ ಕಂಪನಿಗಳು ತಯಾರಿಸಿದ್ದ ಕೆಮ್ಮಿನ ಸಿರಪ್‌ಗಳ ಸಂಬಂಧವಿದೆ ಎಂದು ತಿಳಿದು ಬಂದಿತ್ತು. ಈ ಘಟನೆಯ ಬಳಿಕ ಇದೀಗ ಭಾರತ ಸರ್ಕಾರ ಕೆಮ್ಮಿನ ಸಿರಪ್‌ಗಳನ್ನು ವಿದೇಶಕ್ಕೆ ರಫ್ತು ಮಾಡುವ ಮೊದಲು ಅದನ್ನು ಪರೀಕ್ಷೆಗೆ ಒಳಪಡಿಸುವುದು ಕಡ್ಡಾಯಗೊಳಿಸಿದೆ.

 ಇದನ್ನೂ ಓದಿ: ಅಂತಾರಾಷ್ಟ್ರೀಯ ಬಾಸ್ಕೆಟ್‌ಬಾಲ್ ಫೆಡರೇಷನ್​ ಅಧ್ಯಕ್ಷರಾಗಿ ಕನ್ನಡಿಗ ಗೋವಿಂದರಾಜ್​ ಆಯ್ಕೆ

ಔಷಧಿಯನ್ನು ವಿದೇಶಕ್ಕೆ ಕಳುಹಿಸುವ ಮೊದಲು ಪರೀಕ್ಷಿಸಲು ಸರ್ಕಾರ ಆದೇಶಿಸಿದೆ. ಆದ್ದರಿಂದ, ಈಗ ಕೆಮ್ಮಿನ ಸಿರಪ್ ರಫ್ತುದಾರರು ತಮ್ಮ ಉತ್ಪನ್ನಗಳನ್ನು ವಿದೇಶಕ್ಕೆ ಕಳುಹಿಸುವ ಮೊದಲು ಗೊತ್ತುಪಡಿಸಿದ ಸರ್ಕಾರಿ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಬೇಕಾಗುತ್ತದೆ.ಈ ನಿಯಮಗಳು ಜೂನ್ 1 ರಿಂದ ಜಾರಿಗೆ ಬರಲಿವೆ ಎಂದು ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್  ಅಧಿಸೂಚನೆ ಹೊರಡಿಸಿದೆ.

ಮೊದಲು ಉತ್ಪನ್ನದ ಮಾದರಿಯನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಬೇಕಾಗುತ್ತದೆ. ಆಗ ಮಾತ್ರ ಕೆಮ್ಮಿನ ಸಿರಪ್ ರಫ್ತು ಮಾಡಲು ಅನುಮತಿಸಲಾಗುತ್ತದೆ. ಯಾವುದೇ ಕೆಮ್ಮಿನ ಸಿರಪ್ ಅನ್ನು ರಫ್ತು ಮಾಡುವುದಕ್ಕೂ ಮೊದಲು ಸರ್ಕಾರಿ ಪ್ರಯೋಗಾಲಯ ನೀಡಿದ ವಿಶ್ಲೇಷಣೆಯ ಪ್ರಮಾಣಪತ್ರವನ್ನು ಹೊಂದಿರುವುದು ಕಡ್ಡಾಯವಾಗಿದೆ. ಹೊಸ ನಿಯಮ ಜೂನ್ 1 ರಿಂದ ಜಾರಿಗೆ ಬರಲಿದೆ.

ತಾಯಿಗಾಗಿ ಪುಟಾಣಿ ಬಾವಿ ಕೊರೆದು ನೀರುಕ್ಕಿಸಿದ 14ರ ಪೋರ!

ಎಐಸಿಸಿ ಎಲ್ಲವನ್ನೂ ಗಮನಿಸುತ್ತೆ | ಎಂಬಿ ಪಾಟೀಲ್ ಹೇಳಿಕೆ ನಂತರ ಖಡಕ್ ಸಂದೇಶ ರವಾನೆ!

Latest Posts

ಲೈಫ್‌ಸ್ಟೈಲ್