More

    ತಾಯಿಗಾಗಿ ಪುಟಾಣಿ ಬಾವಿ ಕೊರೆದು ನೀರುಕ್ಕಿಸಿದ 14ರ ಪೋರ!

    ಪಾಲ್ಘರ್: ಮನೆಗೆ ನೀರು ತರಲು ತನ್ನ ತಾಯಿ ಪ್ರತಿದಿನ ಬಿಸಿಲಿನಲ್ಲಿ ನಡೆಯುವುದನ್ನು ನೋಡಿ ದುಃಖಿತನಾದ 14 ವರ್ಷದ ಪೋರ ಪ್ರಣವ್ ರಮೇಶ್ ಸಾಲ್ಕರ್, ತನ್ನ ಗುಡಿಸಲಿನ ಬಳಿ ಪುಟ್ಟದೊಂದು ಬಾವಿ ತೋಡಿದ್ದು ಎಲ್ಲರಿಗೂ ಆಶ್ಚರ್ಯದ ವಿಚಾರವಾಗಿದೆ. ಇನ್ನು ಕೆಲ್ವೆ ಹಳ್ಳಿಯಿಂದ ಆ ತಾಯಿ ಪ್ರತಿದಿನ ನೀರು ತರಲು ನದಿಗೆ ನಡೆದು ಹೋಗಬೇಕಾಗಿಲ್ಲ.

    ಆದರ್ಶ್ ವಿದ್ಯಾ ಮಂದಿರದ ಒಂಬತ್ತನೇ ತರಗತಿಯ ಆದಿವಾಸಿ ವಿದ್ಯಾರ್ಥಿಯು ಸ್ವತಃ ಬಾವಿಯನ್ನು ತೋಡಿದ್ದಾನೆ ಎಂದು ಅವರ ತಂದೆ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ತಂದೆ, “ಆರಂಭದಲ್ಲಿ ಕೆಲ ಕಲ್ಲುಗಳನ್ನು ತೆರವುಗೊಳಿಸಲು ಮಾತ್ರ ಸಹಾಯ ಮಾಡಿದ್ದೆ. ಉಳಿದ ಯಾವ ಕೆಲಸವನ್ನೂ ನಾನು ಮಾಡಿಲ್ಲ” ಎಂದು ಹೇಳಿದರು. ಬಾವಿ ಅಗೆದಾಗ ಕೊನೆಗೆ ಶುದ್ಧ ನೀರು ಭೂಮಿಯಿಂದ ಹೊರಸೂಸಲು ಪ್ರಾರಂಭಿಸಿದಾಗ ಹುಡುಗನ ಸಂತೋಷಕ್ಕೆ ಮಿತಿಯೇ ಇರಲಿಲ್ಲ.

    “ನನ್ನ ತಾಯಿ ಹತ್ತಿರದ ತೊರೆಯಿಂದ ನೀರು ತರುವುದು ನನಗೆ ಇಷ್ಟವಿರಲಿಲ್ಲ. ಅಡುಗೆ ಮತ್ತು ಇತರ ಮನೆಕೆಲಸಗಳಿಗೂ ಮೊದಲು ಅವಳು ಪ್ರತಿದಿನ ಬೆಳಿಗ್ಗೆ ಮನೆಗೆ ನೀರನ್ನು ತರುತ್ತಿದ್ದಳು. “ಆಯಿ ಇನ್ನು ಮುಂದೆ ನದಿಗೆ ದಿನಾಲು ನೀರು ತರಲು ಹೋಗಬೇಕಾಗಿಲ್ಲ ಎಂದು ನನಗೆ ಸಂತೋಷವಾಗಿದೆ” ಎಂದು ಬಾಲಕ ಹೇಳಿದ್ದಾನೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿದ ತಂದೆ ರಮೇಶ್, “ಅಗೆಯುವ ಪ್ರಕ್ರಿಯೆಯಲ್ಲಿ ಕಲ್ಲುಗಳನ್ನು ತೆಗೆದುಹಾಕಲು ಮಾತ್ರ ನಾನು ಅವನಿಗೆ ಸಹಾಯ ಮಾಡಿದೆ, ನಾನು ಬೇರೆ ಏನನ್ನೂ ಮಾಡಲಿಲ್ಲ. ನೀರನ್ನು ನೋಡಿ ಖುಷಿಯಾಗುತ್ತಿದೆ’ ಎಂದರು.

    “ಪ್ರಣವ್ 15 ನಿಮಿಷಗಳ ಊಟದ ವಿರಾಮ ತೆಗೆದುಕೊಂಡು ದಿನವಿಡೀ ಭೂಮಿಯನ್ನು ಅಗೆಯುತ್ತಿದ್ದನು” ಎಂದು ಅವನ ತಂದೆ ರಮೇಶ್ ಹೇಳಿದರು. ಇನ್ನು ಬಾಲಕನ ಸಾಹಸದ ಫಲಾನನನುಭವಿ ತಾಯಿ ದರ್ಶನಾ, “ಈಗ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ನಿಟ್ಟುಸಿರು ಬಿಡಬಹುದು” ಎಂದಿದ್ದಾರೆ.(ಏಜೆನ್ಸೀಸ್) 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts