More

    VIDEO| 75 ವರ್ಷಗಳ ನಂತರ ಭೇಟಿಯಾದ ಒಡಹುಟ್ಟಿದವರು!

    ಲಾಹೋರ್: ಒಡಹುಟ್ಟಿದವರು ಜೊತೆಯಾಗಿ ಬೆಳೆಯುತ್ತಾರೆ. ದೊಡ್ಡವರಾಗುತ್ತಾ ಉದ್ಯೋಗ, ವಿದ್ಯಾಭ್ಯಾಸ ಮತ್ತು ಇನ್ನಿತರ ಕೆಲಸದ ನಿಮಿತ್ತ ದೂರ ಇರಬೇಕಾದ ಸನ್ನಿವೇಶ ಬರುತ್ತದೆ. ಆದರೆ ಈ ಸಹೋದರ- ಸಹೋದರಿ ಬರೋಬ್ಬರಿ 75 ವರ್ಷಗಳ ನಂತರ ಭೇಟಿಯಾಗುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    1947ರ ಆಗಸ್ಟ್​ 15ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಮೇಲೆ ಭಾರತ ಮತ್ತು ಪಾಕಿಸ್ತಾನ ಎರಡು ದೇಶಗಳಾಗಿ ವಿಭಜನೆಗೊಂಡವು. ಬಂಗಾಳ ಮತ್ತು ಪಂಜಾಬ್​ ಪ್ರಾಂತ್ಯಗಳೂ ವಿಭಜನೆಗೊಂಡು ಪೂರ್ವ ಪಾಕಿಸ್ತಾನ ಮತ್ತು ಪಶ್ಚಿಮ ಪಾಕಿಸ್ತಾನ ದೇಶ ಎಂಬ ಹೊಸ ದೇಶಗಳು ರೂಪುಗೊಂಡವು. ಈ ಸಂದರ್ಭದಲ್ಲಿ ಅನೇಕ ಕುಟುಂಬ ಸದಸ್ಯರು ಬೇರ್ಪಟ್ಟರು.
    ವಿಭಜನೆಯ ಸಮಯದಲ್ಲಿ, ಪಂಜಾಬ್‌ನ ಭಾರತದ ಭಾಗದಿಂದ ಸರ್ದಾರ್ ಭಜನ್ ಸಿಂಗ್ ಅವರ ಕುಟುಂಬವು ದುರಂತವಾಗಿ ಹರಿದುಹೋಯಿತು, ಅಜೀಜ್ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಸ್ಥಳಾಂತರಗೊಂಡಾಗ ಅವರ ಇತರ ಕುಟುಂಬ ಸದಸ್ಯರು ಭಾರತದಲ್ಲಿಯೇ ಇದ್ದರು.

    ಇದನ್ನೂ ಓದಿ: ವಾತಾವರಣದ ವಿಚಿತ್ರ ಆಟ; ಈ ಬಾರಿ ಬೆಂಗಳೂರಲ್ಲಿ ಗಾಳಿ ಮಳೆಗೆ ಮರಗಳು ಉರುಳಿದ್ದು ಯಾಕೆ ಗೊತ್ತಾ?

    ದೇಶ ವಿಭಜನೆಯ ಸಂದರ್ಭದಲ್ಲಿ ಪಂಜಾಬ್​ನ ​ಸರ್ದಾರ್​ ಭಜನ್​ ಸಿಂಗ್​ ಕುಟುಂಬವು ಹರಿದು ಹಂಚಿಹೋಗಿತ್ತು. ಸಾಮಾಜಿಕ ಜಾಲತಾಣದ ಮೂಲಕವೇ ಈ ಸುದ್ದಿ ತಿಳಿದ ಕುಟುಂಬಸ್ಥರು ಒಡಹುಟ್ಟಿದವರನ್ನು ಒಂದಾಗಿಸಿದರು. ನಂತರ ಎರಡೂ ಕುಟುಂಬದವರು ಕರ್ತಾರಪುರದ ಗುರುದ್ವಾರ ದರ್ಬಾರ್​ ಸಾಹಿಬ್​ಗೆ ಭೇಟಿ ಕೊಟ್ಟು ಒಟ್ಟಿಗೆ ಊಟ ಮಾಡಿದರು. ಪುನರ್ಮಿಲನದ ಈ ಸಂದರ್ಭದಲ್ಲಿ ಪರಸ್ಪರ ಉಡುಗೊರೆಗಳನ್ನು ಕೊಟ್ಟುಕೊಂಡರು.

    ಭಾರತೀಯಾಗಿರುವ ಪ್ರಜೆ-ಸೋದರಿ 81 ವರ್ಷದ ಮಹೇಂದ್ರ ಕೌರ್, ಪಾಕ್​ ಆಕ್ರಮಿತ ಕಾಶ್ಮೀರದ ಪ್ರಜೆ-ಸೋದರ 78 ವರ್ಷದ ಶೇಖ್​ ಅಬ್ದುಲ್​ ಅಜೀಜ್​ ಕರ್ತಾರಪುರದ ಕಾರಿಡಾರಿನಲ್ಲಿ ಭೇಟಿಯಾಗಿದ್ದಾರೆ. 1947ರ ವಿಭಜನೆಯ ಸಮಯದಲ್ಲಿ ಬೇರ್ಪಟ್ಟ ಒಡಹುಟ್ಟಿದವರು ಮತ್ತೆ ಜತೆಯಾಗಿದ್ದು, ಸಂತೋಷ ಎಂದು ನೆಟ್ಟಿಗರು ಈ ಪೋಸ್ಟ್​ಗೆ ಕಾಮೆಂಟ್​​ ಮಾಡಿದ್ದಾರೆ.

    ಒಂದೇ ಬಾರಿಗೆ 5 ಹೆಣ್ಣು ಮಕ್ಕಳಿಗೆ ಜನ್ಮ ಕೊಟ್ಟ ಮಹಿಳೆ; ತಾಯಿ, ಮಕ್ಕಳು ಸುರಕ್ಷಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts