blank

ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದ ಅನುದಾನ ಕಡಿತ ಸಂಭವ | Bhadra Upper Project

blank

ನವದೆಹಲಿ: “ಭದ್ರಾ ಮೇಲ್ದಂಡೆ ಯೋಜನೆಗೆ (Bhadra Upper Project) ಈ ಹಿಂದೆ ಘೋಷಣೆ ಮಾಡಿದ್ದ 5,300 ಕೋಟಿ ರೂ. ಅನುದಾನ ಬಿಡುಗಡೆ ಸೇರಿದಂತೆ ಕರ್ನಾಟಕದ ನೀರಾವರಿ ಯೋಜನೆಗಳು ಹಾಗೂ ಪೆನ್ನಾರ್ ನದಿಯ ಉಪನದಿ ಮಾರ್ಕಂಡೇಯ ನದಿಗೆ ಅಣೆಕಟ್ಟು ನಿರ್ಮಾಣಕ್ಕೆ ತಮಿಳುನಾಡು ಎತ್ತಿರುವ ತಕರಾರಿನ ಕುರಿತು ಕೇಂದ್ರ ಸಚಿವ ವಿ.ಸೋಮಣ್ಣ ಅವರ ಜತೆ ಚರ್ಚೆ ನಡೆಸಲಾಯಿತು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಇದನ್ನೂ ಓದಿ: ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ಜಾತ್ರೆ ಮಾ. 31ರಿಂದ

ಇಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವ ವಿ. ಸೋಮಣ್ಣ ಅವರ ಭೇಟಿ ಬಳಿಕ ದೆಹಲಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, “ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಣೆ ಮಾಡಿದ್ದ ಹಣವನ್ನು ಕಡಿತಗೊಳಿಸಲಾಗುವುದು ಎನ್ನುವ ಸುದ್ದಿಯಿದೆ. ಇದರ ಬಗ್ಗೆ ಇನ್ನೂ ಸ್ಪಷ್ಟವಾದ ಮಾಹಿತಿಯಿಲ್ಲ. ಅನುದಾನ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಯೋಜನೆಯ ವಿವರಗಳನ್ನು ಕಳುಹಿಸಲಾಗಿದ್ದು, ಇದರ ಬಗ್ಗೆ ಹೆಚ್ಚಿನ ಗಮನ ಹರಿಸಲಾಗಿದೆ” ಎಂದು ಹೇಳಿದರು.

“ತಮಿಳುನಾಡಿನವರು ಪೆನ್ನಾರ್ ನದಿ ನೀರಿನ ವಿಚಾರವಾಗಿ ಕಳೆದ 2ನೇ ತಾರೀಕಿನಂದು ಅಫಿಡವಿಟ್ ಸಲ್ಲಿಸಿದ್ದಾರೆ. ಮೂರು ವಾರದಲ್ಲಿ ತೀರ್ಮಾನ ಮಾಡಬೇಕಿರುವ ಕಾರಣಕ್ಕೆ ಅಫಿಡವಿಟ್ ಸಲ್ಲಿಕೆ ಮಾಡಲು ತಿಳಿಸಿದ್ದರು. ವಿಧಾನಸಬೆ ಚಳಿಗಾಲದ ಅಧಿವೇಶನವಿದ್ದ ಕಾರಣಕ್ಕೆ ನಮ್ಮಿಂದ ವಿಳಂಬವಾಯಿತು. ನಾವು ದಿನಾಂಕ ವಿಸ್ತರಣೆ ಮಾಡಿ ಎಂದು ಮನವಿ ಮಾಡಿದ್ದೇವೆ” ಎಂದರು.

“ಎರಡು ರಾಜ್ಯಗಳ ಪ್ರತಿನಿಧಿಗಳನ್ನು ಸೇರಿಸಿ ಮಾತುಕತೆ ನಡೆಸಬೇಕಿರುವ ಕಾರಣಕ್ಕೆ ಶೀಘ್ರದಲ್ಲೇ ಸಭೆಗೆ ಒಂದು ದಿನಾಂಕವನ್ನು ಅಂತಿಮಗೊಳಿಸುವುದಾಗಿ ಹೇಳಿದ್ದಾರೆ. ಪೆನ್ನಾರ್ ನದಿ ನೀರಿನ ವಿಚಾರವಾಗಿ ನಿಮ್ಮಲ್ಲೇ ಚರ್ಚೆ ನಡೆಸಿ ಬಗೆಹರಿಸಿಕೊಳ್ಳಿ ಎನ್ನುವ ಸುಪ್ರೀಂ ಕೋರ್ಟ್ ನಿರ್ದೇಶನವಿದೆ” ಎಂದರು.

ಇದನ್ನೂ ಓದಿ: ನ್ಯಾಯಾಲಯದ ಮುಂದೆ ಸ್ಯಾಂಡಲ್​ವುಡ್​ ಕ್ವೀನ್​​​ ರಮ್ಯಾ ದಿಢೀರ್​​​​ ಪ್ರತ್ಯಕ್ಷ; ಕಾರಣ ಏನು ಗೊತ್ತಾ? | Actress Ramya

“ಈ ನದಿ ನೀರಿನ ವಿಚಾರದಲ್ಲಿ ತಮಿಳುನಾಡಿಗೆ ಯಾವುದೇ ತೊಂದರೆಯಾಗುವುದಿಲ್ಲ. ಅಲ್ಲದೇ ಕೋಲಾರದ ನೀರಿನ ಸಮಸ್ಯೆ ಬಗ್ಗೆ ಎಲ್ಲರಿಗೂ ಅರಿವಿದೆ. ಕೋಲಾರದ ಕೆರೆಗಳಿಗೆ ವೃಷಭಾವತಿ ಸೇರಿದಂತೆ ಕೆ.ಸಿ ವ್ಯಾಲಿ ಯೋಜನೆಯಿಂದ ಬಳಕೆಯಾದ ನೀರನ್ನು ಶುದ್ದೀಕರಿಸಿ ತುಂಬಿಸಲಾಗುತ್ತಿದೆ. ಈ ಯೋಜನೆಯ ಬಗ್ಗೆ ಈ ಹಿಂದೆ ಕೇಂದ್ರ ಸರ್ಕಾರವೂ ಮೆಚ್ಚುಗೆ ವ್ಯಕ್ತಪಡಿಸಿತ್ತು” ಎಂದರು.

“ಪೆನ್ನಾರ್ ನದಿ ನೀರಿನ ವಿವಾದ ಕುರಿತು ಟ್ರಿಬ್ಯೂನಲ್ ಮೂಲಕ ಹೋದರೆ ತಡವಾಗುತ್ತದೆ ಹಾಗೂ ಕೋರ್ಟ್ ಮತ್ತು ವಕೀಲರ ವೆಚ್ಚ ದುಬಾರಿಯಾಗುತ್ತದೆ. ಆದ ಕಾರಣಕ್ಕೆ ಸರ್ಕಾರದ ಮಟ್ಟದಲ್ಲೇ ಬಗೆಹರಿಸಿಕೊಳ್ಳಲು ನಾವು ನೋಡುತ್ತಿದ್ದೇವೆ. ಈಗಾಗಲೇ ಅರಣ್ಯ ಇಲಾಖೆಯವರು ಅನುಮತಿ ನೀಡುತ್ತೇವೆ ಎಂದು ಹೇಳಿದ್ದಾರೆ. ಈ ವಿಚಾರವಾಗಿ ಮಾತನಾಡಲು ಪ್ರಹ್ಲಾದ್ ಜೋಶಿ ಅವರನ್ನು ಭೇಟಿಯಾಗಬೇಕಿತ್ತು. ಅವರು ಲಭ್ಯವಿಲ್ಲ. ಇದರ ನಡುವೆ ಇತರೇ ಸಚಿವರನ್ನು ಇನ್ನೊಮ್ಮೆ ಬಂದು ಭೇಟಿಯಾಗುವೆ. ಇಲಾಖೆಯ ಬಜೆಟ್ ಕೆಲಸವಿರುವ ಕಾರಣಕ್ಕೆ ಕೇಂದ್ರ ಜಲಶಕ್ತಿ ಸಚಿವರೂ ಭೇಟಿಗೆ ಸಿಗಲಿಲ್ಲ” ಎಂದು ಹೇಳಿದರು.

ಇದನ್ನೂ ಓದಿ: ಎಚ್​ಎಂಪಿ ವೈರಸ್​ನಿಂದ ದೂರ ಉಳಿಯಲು ಈ 5 ಆಹಾರಗಳ ಸೇವನೆಯಿಂದ ಮೊದಲು ದೂರವಿರಿ | HMPV

“ಕರ್ನಾಟಕಕ್ಕೆ ಸಂಬಂಧಿಸಿದ ನೀರಾವರಿ ಕೆಲಸಗಳು ಹಾಗೂ ಕಡತಗಳು ಸಚಿವರಾದ ವಿ.ಸೋಮಣ್ಣ ಅವರ ಗಮನಕ್ಕೆ ತರಬೇಕು ಎನ್ನುವ ನಿರ್ದೇಶನವಿರುವ ಕಾರಣಕ್ಕೆ ಅವರನ್ನು ಭೇಟಿ ಮಾಡಿ ರಾಜ್ಯದ ನೀರಾವರಿ ಕೆಲಸಗಳ ಬಗ್ಗೆ ವಿವರಣೆ ನೀಡಿದೆ” ಎಂದು ತಿಳಿಸಿದರು. ಮೇಕೆದಾಟು ವಿಚಾರ ಚರ್ಚೆಯಾಯಿತೆ ಎಂದು ಕೇಳಿದಾಗ, “ಅದರ ಬಗ್ಗೆ ಮಾಹಿತಿ ಬಹಿರಂಗಗೊಳಿಸಲು ಆಗುವುದಿಲ್ಲ” ಎಂದರು.

ಎಚ್​ಎಂಪಿ ವೈರಸ್​ನಿಂದ ದೂರ ಉಳಿಯಲು ಈ 5 ಆಹಾರಗಳ ಸೇವನೆಯಿಂದ ಮೊದಲು ದೂರವಿರಿ | HMPV

 

Share This Article

ಪ್ರತಿದಿನ ಹಣೆಗೆ ವಿಭೂತಿ ಹಚ್ಚಿಕೊಂಡರೆ ಏನಾಗುತ್ತದೆ ಗೊತ್ತಾ? significance of vibhuti

significance of vibhuti:  ಸಾಮಾನ್ಯವಾಗಿ ಹಿಂದೂಗಳು ಹಣೆಯ ಮೇಲೆ ಹಚ್ಚೆ ಹಾಕಿಸಿಕೊಂಡಿರುವುದನ್ನು ನೋಡುತ್ತೇವೆ. ಮಹಿಳೆಯರು  ತಿಲಕವನ್ನು…

ಬಿಸಿಲಲ್ಲಿ ಸೆಖೆ ತಾಳಲಾರದೆ ICE ನೀರು ಕುಡಿದ್ರೆ ಜೀವಕ್ಕೆ ಅಪಾಯ ಖಂಡಿತ! Summer Health

Summer Health: ನೀರು ಮನುಷ್ಯರಿಗೆ ಬಹಳ ಅವಶ್ಯಕ. ನಾವು ಅನ್ನ ತಿನ್ನದೆ ಬದುಕಬಹುದು, ಆದರೆ ನೀರು…

ತಾಳಲಾರದ ಬೇಗೆ, ತಡೆಯುವುದು ಹೇಗೆ? ಎಸಿ, ಕೂಲರ್ ಈ ಎರಡರಲ್ಲಿ ಯಾವುದು ಬೆಸ್ಟ್​? ಇಲ್ಲಿದೆ ನೋಡಿ ಉತ್ತರ | Summer

Summer: ಇದು ಬೇಸಿಗೆ ಕಾಲ. ಕೇವಲ ಬೇಸಿಗೆ ಅಲ್ಲ ಮುಂದಿನ ಎರಡು ತಿಂಗಳಲ್ಲಿ ಬಿರು ಬೇಸಿಗೆ…