

ಹೊನ್ನಾವರ: ಗೇರುಸೊಪ್ಪ ಬಂಗಾರಮಕ್ಕಿಯ ಶ್ರೀ ವಿಶ್ವವೀರಾಂಜನೇಯ ಧಾರ್ವಿುಕ ಹಾಗೂ ದತ್ತಿ ಸಂಸ್ಥೆ ಪ್ರತಿಷ್ಠಾ ಮಹೋತ್ಸವ ಹಾಗೂ ಜಾತ್ರಾ ಮಹೋತ್ಸವ ಮಾರ್ಚ್ 31ರಿಂದ ಏಪ್ರಿಲ್ 13ರವರೆಗೆ ನಡೆಯಲಿದೆ ಎಂದು ಶ್ರೀ ಮಾರುತಿ ಗುರೂಜಿ ಹೇಳಿದರು.
ಪಟ್ಟಣದ ದತ್ತ ಮಂದಿರದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾಹಿತಿ ನೀಡಿದರು. ಮಾರ್ಚ್ 31ರಂದು ಧಾರ್ವಿುಕ ಕಾರ್ಯಕ್ರಮ ಪ್ರಾರಂಭವಾಗಲಿದೆ. ಏಪ್ರಿಲ್ 3ರಂದು ಶ್ರೀ ವಿರಾಂಜನೇಯ ದೇವರ ಪ್ರತಿಷ್ಠೆ, ಸ್ವರ್ಣಕಲಶ ಪ್ರತಿಷ್ಠೆ, ಶ್ರೀ ಮಹಾಗಣಪತಿ ಪ್ರತಿಷ್ಠೆ, ನಾಗಬನದಲ್ಲಿ ಶ್ರೀ ಸುಬ್ರಹ್ಮಣ್ಯ ಪ್ರತಿಷ್ಠೆ, ಶ್ರೀ ಚೌಡೇಶ್ವರಿ ಪ್ರತಿಷ್ಠೆ, ನವಗ್ರಹ ಪ್ರತಿಷ್ಠೆ, ಏಪ್ರಿಲ್ 4 ರಂದು ಪುಷ್ಪರಥೋತ್ಸವ, 5 ರಂದು ಬ್ರಹ್ಮರಥೋತ್ಸವ, 6ರಂದು ಶ್ರೀರಾಮ ನವಮಿ, 7ರಂದು ಶರಾವತಿ ಆರತಿ, ಶರಾವತಿ ಕುಂಭ, ಏಪ್ರಿಲ್ 11ರಂದು ಪುಷ್ಪ ರಥೋತ್ಸವ, ಏಪ್ರಿಲ್ 12ರಂದು ಹನುಮ ಜಯಂತಿ ಹಾಗೂ ಮಹಾಸ್ಯಂದನ ಬ್ರಹ್ಮ ರಥೋತ್ಸವ ನಡೆಯಲಿದೆ. ಸ್ಥಳೀಯ ಹಾಗೂ ರಾಜ್ಯದ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಸಂಸ್ಥೆಯ ಗಣಪತಿ ಹೆಗಡೆ, ರಾಮಕೃಷ್ಣ ಹೆಗಡೆ ಉಪಸ್ಥಿತರಿದ್ದರು.