More

    ಜನ್ಮದಿನ ಆಚರಿಸಿಕೊಳ್ಳುವವರಿಗೆ ವಂಡರ್ಲಾದಲ್ಲಿ ಉಚಿತ ಟಿಕೆಟ್​; ಇಲ್ಲಿದೆ ವಿವರ..

    ಬೆಂಗಳೂರು: ಭಾರತದ ಅತಿದೊಡ್ಡ ಅಮ್ಯೂಸ್‌ಮೆಂಟ್ ಪಾರ್ಕ್ ಎನ್ನಲಾದ ವಂಡರ್ಲಾ ಹಾಲಿಡೇಸ್ ಸಾರ್ವಜನಿಕರಿಗೆ ವಿಶೇಷ ಆಫರ್ ನೀಡಿದೆ. ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ವಂಡರ್‌ಲಾ ಸ್ಪೆಷಲ್ ಆಫರ್ ಕೊಡುತ್ತಿದೆ. ಅರ್ಥಾತ್, ಜನ್ಮದಿನ ಆಚರಿಸಿಕೊಳ್ಳುವ ಪ್ರತಿಯೊಬ್ಬರಿಗೂ ಉಚಿತ ಟಿಕೆಟ್​ ನೀಡುವುದಾಗಿ ವಂಡರ್ಲಾ ಘೋಷಿಸಿದೆ.

    ಹುಟ್ಟುಹಬ್ಬ ಆಚರಿಸಿಕೊಳ್ಳುವ ವ್ಯಕ್ತಿಗೆ ಆ ದಿನ ವಂಡರ್ಲಾದ ಟಿಕೆಟ್ ಉಚಿತವಾಗಿ ಸಿಗಲಿದೆ. ಒಂದು ವೇಳೆ ಅಂದು ಹೋಗಲಾಗದಿದ್ದರೆ ಜನ್ಮದಿನದ ಹಿಂದಿನ ಅಥವಾ ಮುಂದಿನ ಐದು ದಿನಗಳಲ್ಲಿ ಯಾವ ದಿನವಾದರೂ ಈ ಆಫರ್ ಪ್ರಯೋಜನ ಪಡೆಯಬಹುದು. ಜನ್ಮದಿನಾಚರಣೆಗೆ ಉಚಿತ ಟಿಕೆಟ್ ಬಯಸುವವರು ಆನ್‍ಲೈನ್‍ನಲ್ಲಿ ಟಿಕೆಟ್ ಬುಕ್ ಮಾಡಿಕೊಳ್ಳಬಹುದು. ಈ ಮೂಲಕ ನಿಮ್ಮ ಪ್ರೀತಿ ಪಾತ್ರರೊಂದಿಗೆ ನಿಮ್ಮ ಜನ್ಮದಿನವನ್ನು ಹಬ್ಬದ ರೀತಿ ಆಚರಿಸಿಕೊಳ್ಳಬಹುದು.

    ಇದನ್ನೂ ಓದಿ: ಆದಿತ್ಯ ಎಲ್​-1: ಇಸ್ರೋದಿಂದ ಸೂರ್ಯಯಾನದ ದಿನಾಂಕ ನಿಗದಿ; ಇಲ್ಲಿದೆ ವಿವರ..

    ಸಾರ್ವಜನಿಕರು ಜನ್ಮದಿನದಂದು ವಂಡರ್ಲಾನಲ್ಲಿ ರೋಮಾಂಚನಕಾರಿ ಸವಾರಿಗಳನ್ನು ಆನಂದಿಸಬಹುದು. ಪಾರ್ಕ್‌ಗಳಲ್ಲಿ ಪ್ರೀತಿಪಾತ್ರರ ಜೊತೆಗೆ ಹುಟ್ಟುಹಬ್ಬ ಆಚರಿಸಿಕೊಳ್ಳಬಹುದು. ಲ್ಯಾಂಡ್ ಮತ್ತು ವಾಟರ್ ರೈಡ್ ಎರಡಕ್ಕೂ ಅನಿಯಮಿತ ಪ್ರವೇಶದೊಂದಿಗೆ ಹುಟ್ಟುಹಬ್ಬದ ಸಂಭ್ರಮ ಆಚರಿಸಲು ಇದು ಪರಿಪೂರ್ಣ ಸ್ಥಳವಾಗಿದೆ.

    ಒಂದು ದಿನದ ಟ್ರಿಪ್​​ ಇದು ಅತ್ಯುತ್ತಮ ಸ್ಥಳ. ಎಲ್ಲ ವಯೋಮಾನದವರು ಅತ್ಯಾಧುನಿಕ ರೈಡ್ಸ್ ಜೊತೆಗೆ ಅನಿಯಮಿತ ಪ್ರವೇಶ, ಲೈವ್ ಪ್ರದರ್ಶನ, ಎಲ್ಲಾ ದಿನಗಳಲ್ಲಿ ಓಪನ್ ಏರ್, ರೈನ್ ಡಾನ್ಸ್ ಮತ್ತು ವಾರಾಂತ್ಯದಲ್ಲಿ ಡಿಜೆ ಬೀಟ್‌ ಕೇಳಬಹುದು. ಫುಡ್ ಫೆಸ್ಟ್ ಸಹ ಇರುವುದರಿಂದ ಆಹಾರಪ್ರಿಯರು ರುಚಿಕರವಾದ ಭಕ್ಷ್ಯಭೋಜನಗಳನ್ನು ಸವಿಯಬಹುದು ಎಂದು ವಂಡರ್ಲಾ ತಿಳಿಸಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ವಂಡರ್‌ಲಾ ಹಾಲಿಡೇಸ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಅರುಣ್ ಚಿಟ್ಟಿಲಪಿಲ್ಲಿ, ‘ನಮ್ಮ ರೋಮಾಂಚಕ ಕೊಡುಗೆಗಳೊಂದಿಗೆ ವಂಡರ್ಲಾ ಎಂಜಾಯ್ ಮಾಡಿ, ಉಚಿತ ಟಿಕೆಟ್‍ನೊಂದಿಗೆ ನಿಮ್ಮ ಜನ್ಮದಿನವನ್ನು ಆಚರಿಸಿ, ಓಪನ್ ಏರ್, ರೈನ್ ಡಾನ್ಸ್ ಆನಂದಿಸಿ. ರುಚಿಕರವಾದ ತಿನಿಸುಗಳನ್ನು ಸವಿಯಿರಿ. ವಂಡರ್ಲಾದಲ್ಲಿ ನಿಮ್ಮ ನೆನಪುಗಳನ್ನು ಸದಾ ಹಚ್ಚಹಸಿರಾಗಿಡಲು ಪ್ರಯತ್ನಿಸಿ. ಈ ಅವಕಾಶವನ್ನು ಕಳೆದುಕೊಳ್ಳಬೇಡಿ’ ಎಂದು ತಿಳಿಸಿದ್ದಾರೆ.

    ನಿಮ್ಮ ಹುಟ್ಟುಹಬ್ಬದ ಆಫರ್ ಟಿಕೆಟ್‍ಗಳನ್ನು ಮುಂಚಿತವಾಗಿ ಬುಕ್ ಮಾಡಲು ಈ ಕೆಳಗಿನ ಲಿಂಕ್ ಕ್ಲಿಕ್​ ಮಾಡಿ

    https://www.wonderla.com/offers/birthdays-at-wonderla.html

    ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ

    ಬೆಂಗಳೂರು: +91 80372 30333, +91 80350 73966
    ಹೈದರಾಬಾದ್: 0841 4676333, +91 91000 63636
    ಕೊಚ್ಚಿ: 0484-3514001, +91 7593853107

    ಚಂದ್ರಯಾನ-3 ಲ್ಯಾಂಡರ್ ವಿನ್ಯಾಸ ನಂದೇ, ನಾನು ಇಸ್ರೋ ವಿಜ್ಞಾನಿ ಎಂದ; ಆಮೇಲೆ ಗೊತ್ತಾಯ್ತು, ಈತ ಬಿಕಾಂ ಪದವೀಧರ!

    ಈಗ ‘ಎಕ್ಸ್’​ನಲ್ಲೇ ಕೆಲಸವೂ ಸಿಗಲಿದೆ: ಲಿಂಕ್ಡ್​ಇನ್​ಗೆ ಪೈಪೋಟಿ?

    ರಾಜ್ಯೋತ್ಸವ ರಸಪ್ರಶ್ನೆ - 20

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts