

ಬೆಂಗಳೂರು: ಐ ಮಾನಿಟರಿ ಅಡ್ವೈಸರಿ (ಐಎಂಎ) ಬಹುಕೋಟಿ ರೂ. ವಂಚನೆ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎನ್ನಲಾದ ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್, ಅಜಯ್ ಹಿಲೋರಿ ಹಾಗೂ ಇತರ ಪೊಲೀಸ್ ಸಿಬ್ಬಂದಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಸರ್ಕಾರ ಅನುಮತಿ ನೀಡಿದೆ.
ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್, ಅಜಯ್ ಹಿಲೋರಿ, ಸಿಐಡಿ ಡಿವೈಎಸ್‌ಪಿ ಆಗಿದ್ದ ಇ.ಬಿ.ಶ್ರೀಧರ್, ಕಮರ್ಷಿಯಲ್ಸ್ಟ್ರೀಟ್ ಠಾಣೆ ಇನ್ಸ್‌ಪೆಕ್ಟರ್ ಆಗಿದ್ದ ಎಂ.ರಮೇಶ್, ಸಬ್ ಇನ್ಸ್‌ಪೆಕ್ಟರ್ ಪಿ. ಗೌರಿಶಂಕರ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸರ್ಕಾರ ಅನುಮತಿ ನೀಡಿದೆ. ಕೆಲ ದಿನಗಳಲ್ಲೇ ಇವರ ವಿರುದ್ಧ ಸಿಬಿಐ ಅಧಿಕಾರಿಗಳು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲಿದ್ದಾರೆ. ಇದನ್ನೂ ಓದಿ: ‘ಮೊಘಲ್ ಮ್ಯೂಸಿಯಂ’ ಹೆಸರನ್ನು ‘ಛತ್ರಪತಿ ಶಿವಾಜಿ ಮ್ಯೂಸಿಯಂ’ ಎಂದು ಬದಲಿಸಿದ ಯೋಗಿ ಆದಿತ್ಯನಾಥ್
ಇದೀಗ ಹೇಮಂತ್ ನಿಂಬಾಳ್ಕರ್, ಅಜಯ್ ಹಿಲೋರಿ ಹಾಗೂ ಇತರ ಪೊಲೀಸ್ ಸಿಬ್ಬಂದಿಗೆ ಸಿಬಿಐ ಭೀತಿ ಎದುರಾಗಿದ್ದು, ಅಪರಾಧ ಸಾಬೀತಾದರೆ ಇಬ್ಬರಿಗೂ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಲಿದೆ. ಮುಂದೆ ಇವರು ಕೋರ್ಟ್‌ನಲ್ಲೇ ಕಾನೂನು ಹೋರಾಟ ನಡೆಸಬೇಕಿದೆ. ಆರೋಪಿಗಳು ಲಂಚ ಪಡೆದು ಐಎಂಎ ಪರ ವರದಿ ನೀಡಿರುವ ಸಂಬಂಧ ಸಿಬಿಐ ಮಹತ್ವದ ಸಾಕ್ಷ್ಯ ಕಲೆ ಹಾಕಿದ್ದು, ಚಾರ್ಜ್‌ಶೀಟ್‌ನಲ್ಲಿ ಈ ಬಗ್ಗೆ ಎಳೆಎಳೆಯಾಗಿ ಉಲ್ಲೇಖಿಸಲು ಮುಂದಾಗಿದೆ.