

ಬೆಂಗಳೂರು: ಕರೊನಾ ಸೋಂಕಿತೆಯೊಬ್ಬಳು ಬೆಂಗಳೂರಿನಲ್ಲಿ ಆಂಬ್ಯುಲೆನ್ಸ್ ಹತ್ತಿ ದೆಹಲಿ ತಲುಪಿರುವ ವಿಚಿತ್ರ ಘಟನೆ ನಡೆದಿರುವ ಬಗ್ಗೆ ಕಳೆದ ವಾರ ವರದಿಯಾಗಿತ್ತು.
ಬೆಂಗಳೂರಿನ ಬೊಮ್ಮನಹಳ್ಳಿಯ 28 ವರ್ಷದ ಯುವತಿ ದೆಹಲಿಯಲ್ಲಿ ಪತ್ತೆಯಾಗಿರುವ ಘಟನೆ ಇದಾಗಿದೆ. ಆಸ್ಪತ್ರೆಗೆ ಹೋಗಿದ್ದ ಯುವತಿ, ಆಸ್ಪತ್ರೆಯನ್ನೂ ಸೇರದೆ, ಮನೆಗೂ ಬಾರದೇ ಕಂಗಾಲಾಗಿರುವ ಪಾಲಕರು ಪೊಲೀಸರಿಗೆ ದೂರು ನೀಡಿದಾಗ ಯುವತಿ ದೆಹಲಿಯಲ್ಲಿ ಪತ್ತೆಯಾಗಿದ್ದಾಳೆ ಎನ್ನಲಾಗಿತ್ತು.
ತಮ್ಮ ಮಗಳಿ ಕರೊನಾ ಸೋಂಕು ಕಾಣಿಸಿಕೊಂಡಿತ್ತು. ನಂತರ ಮನೆಯ ಸಮೀಪ ಇರುವ ಆಸ್ಪತ್ರೆಯ ಆಂಬ್ಯುಲೆನ್ಸ್ ಒಂದು ಮನೆಯ ಬಾಗಿಲಿಗೆ ಬಂದು ನಿಂತಿತ್ತು. ಕರೊನಾ ಸೋಂಕು ಇರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಯುವತಿಯನ್ನು ದಾಖಲು ಮಾಡಬೇಕು ಎಂದು ಅದರ ಚಾಲಕ ಹೇಳಿದ್ದ. ಆಂಬ್ಯುಲೆನ್ಸ್ ಮೇಲೆ ಕೋವಿಡ್ ಕರ್ತವ್ಯದಲ್ಲಿರುವ ಆಂಬ್ಯುಲೆನ್ಸ್ ಎಂದು ಸ್ಟಿಕ್ಕರ್ ಹಾಕಲಾಗಿತ್ತು. ಪಿಪಿಇ ಕಿಟ್ ಧರಿಸಿ ಬಂದಿರುವ ಇಬ್ಬರು ಮಗಳನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಪಾಲಕರು ಹೇಳಿದ್ದರು.
ನಂತರ ಆಸ್ಪತ್ರೆಗೆ ಹೋಗಿ ನೋಡಿದಾಗ ತಮಗೆ ಮಗಳು ಕಾಣಿಸಲೇ ಇಲ್ಲ. ಆಸ್ಪತ್ರೆಯಲ್ಲಿ ವಿಚಾರಿಸಿದಾಗ ಅಂಥ ಹೆಸರಿನ ಯಾರೂ ದಾಖಲಾಗಿಲ್ಲ ಎಂದು ಹೇಳಲಾಯಿತು. ಭಯಗೊಂಡ ತಾವು ಬಿಬಿಎಂಪಿ ಅಧಿಕಾರಿಗಳ ಬಳಿ ವಿಚಾರಿಸಿದೆವು. ಆದರೆ ಅವರು ತಾವು ಯಾವುದೇ ಆಂಬ್ಯುಲೆನ್ಸ್ ಕಳುಹಿಸಲಿಲ್ಲ. ಈ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದರು. ಕರೊನಾ ವೈರಸ್ ಖಚಿತವಾದ ರೋಗಿಗೆ ನಾವು ಮೊದಲು ಮೊಬೈಲ್ಗೆ ಎಸ್‌ಎಂಎಸ್ ಕಳಿಸುತ್ತೇವೆ. ಅವರನ್ನು ಕರೆದುಕೊಂಡು ಹೋಗಲು ಬರುವ ಆಂಬ್ಯುಲೆನ್ಸ್ ವಿವರಗಳನ್ನು ಒಂದು ಗಂಟೆ ಮುಂಚಿತವಾಗಿಯೇ ಎಸ್‌ಎಂಎಸ್ ಮಾಡುತ್ತೇವೆ. ಅದರಲ್ಲಿ ಆಂಬ್ಯುಲೆನ್ಸ್ ಚಾಲಕನ ಹೆಸರು, ನಂಬರ್ ಕಳಿಸಲಾಗುತ್ತದೆ ಎಂದಾಗ ತಮಗೆ ತೀರಾ ಗಾಬರಿಯಾಯಿತು ಎಂದು ಪಾಲಕರು ಹೇಳಿದ್ದರು.
ಆದರೆ ಅಸಲಿಯತ್ತೇನು?
ವಿವಾಹಿತೆಯಾಗಿರುವ ಯುವತಿ ಸ್ವಯಂ ಅಪಹರಣದ ನಾಟಕ ಮಾಡಿದ್ದಳು ಎಂದು ತಿಳಿದುಬಂದಿದೆ. ಪತಿಯಿಂದ ದೂರವಾಗಿದ್ದ ಈಕೆ, ಸ್ವಯಂ ಅಪಹರಣದ ನಾಟಕ ಮಾಡಿದ್ದು, ಇದೀಗ ದೆಹಲಿಯಲ್ಲಿ ಸುರಕ್ಷಿತವಾಗಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಕಸ್ಟಮರ್ ಸರ್ವಿಸ್ ಎಕ್ಸಿಕ್ಯೂಟಿವ್ ಆಗಿರುವ ಪತಿಯೊಂದಿಗೆ ವೈಯುಕ್ತಿಕ ವಿವಾದವಿದ್ದ ಕಾರಣ ಮನೆಯನ್ನು ತೊರೆಯಲು ಅಪಹರಣದ ನಾಟಕವಾಡಿದ್ದಾಳೆ, ಇದಕ್ಕಾಗಿ ಸ್ನೇಹಿತನ ಸಹಾಯ ಪಡೆದಿರುವುದಾಗಿ ತಿಳಿದುಬಂದಿದೆ.
ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿರುವ ಆಕೆ ತಾನು ಸುರಕ್ಷಿತವಾಗಿದ್ದು, ಪತಿಯೊಂದಿಗೆ ಇರುವ ಸಮಸ್ಯೆಯನ್ನು ಮಾತನಾಡಿ ಬಗೆಹರಿಸಿಕೊಳ್ಳುವುದಾಗಿ ತಿಳಿಸಿದ್ದಾಳೆ. ಅಲ್ಲದೇ ಆಕೆಯ ಫೋನ್ ಕರೆಯ ಧ್ವನಿಯನ್ನು ರೆಕಾರ್ಡ್ ಮಾಡಿ ಪೊಲೀಸರು ಆಕೆಯ ಪತಿಗೆ ಕೇಳಿಸಿದ್ದು, ಆ ಧ್ವನಿ ತನ್ನ ಪತ್ನಿಯದ್ದು ಎಂದು ಆತ ದೃಢಪಡಿಸಿದ್ದಾರೆ ಎನ್ನಲಾಗಿದೆ.
ಈ ಕುರಿತು ಸ್ಪಷ್ಟನೆ ನೀಡಿರುವ ಪೊಲೀಸರು, ಯುವತಿ ನಾಟಕವಾಡಿದ್ದು, ಸಾರ್ವಜನಿಕರು ಅನಗತ್ಯವಾಗಿ ಭೀತಿಗೆ ಒಳಗಾಗದೇ ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳಬಹುದು ಎಂದಿದ್ದಾರೆ.
ಕುಟುಂಬದ ವೈಯುಕ್ತಿಕ ಸಮಸ್ಯೆಯಿಂದ ಘಟನೆ ನಡೆದಿದೆ. ಕಾಣೆಯಾದ ಮಹಿಳೆ ತಾನು ಸ್ವ-ಇಚ್ಛೆಯಿಂದ ಪರಿಚಿತರ ಸಹಾಯದೊಂದಿಗೆ ತೆರಳಿರುವುದು ಖಚಿತವಾಗಿದೆ. ಇದಕ್ಕೂ ಕರೊನಾ ಪರೀಕ್ಷೆ ನಡೆಸುವ ಬಿಬಿಎಂ
ವಿಷಯ ತಿಳಿದಿದ್ದರೂ ಇವುಗಳ ಬಗ್ಗೆ ಹೇಳದೆ ತಪ್ಪು ಮಾಹಿತಿ ನೀಡಿರುವ ಕುಟುಂಬಸ್ಥರ ವಿರುದ್ಧ ಕೇಸು ದಾಖಲಿಸುವಂತೆ ಒತ್ತಾಯ ಕೇಳಿಬರುತ್ತಿರುವುದಾಗಿ ತಿಳಿದುಬಂದಿದೆ.