'ಮೊಘಲ್​ ಮ್ಯೂಸಿಯಂ' ಹೆಸರನ್ನು 'ಛತ್ರಪತಿ ಶಿವಾಜಿ ಮ್ಯೂಸಿಯಂ' ಎಂದು ಬದಲಿಸಿದ ಯೋಗಿ ಆದಿತ್ಯನಾಥ್​

Yogi Adityanath
Published on

ಲಖನೌ: ಆಗ್ರಾದಲ್ಲಿ ನಿರ್ಮಾಣ ಹಂತದಲ್ಲಿರುವ ಮೊಘಲ್​ ಮ್ಯೂಸಿಯಂ ಹೆಸರನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಬದಲಿಸಿದ್ದಾರೆ. ನಾವು ಭಾರತೀಯರು..ನಮಗೆ ಮೊಘಲರು ಎಂದಿಗೂ ಆದರ್ಶವಲ್ಲ ಎಂದು ಹೇಳಿದ ಯೋಗಿ, ಮ್ಯೂಸಿಯಂಗೆ 'ಛತ್ರಪತಿ ಶಿವಾಜಿ ಮಹಾರಾಜ'ರ ನಾಮಕರಣ ಮಾಡಿದ್ದಾರೆ.

ಇಂದು ಆಗ್ರಾ ವಿಭಾಗದ ಅಭಿವೃದ್ಧಿ ಕಾರ್ಯಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಅನುಮೋದನೆ ನೀಡಿದ ಸಿಎಂ ಯೋಗಿ ಆದಿತ್ಯನಾಥ್​ ಅವರು, ಸದ್ಯ ನಿರ್ಮಾಣ ಹಂತದಲ್ಲಿರುವ ಮೊಘಲ್​ ಮ್ಯೂಸಿಯಂ ಹೆಸರು ಬದಲಾವಣೆ ಆಗುತ್ತದೆ. ಛತ್ರಪತಿ ಶಿವಾಜಿ ಮಹಾರಾಜ್​ ಮ್ಯೂಸಿಯಂ ಎಂಬ ಹೆಸರಿನಲ್ಲಿ ಸ್ಥಾಪಿತವಾಗುತ್ತದೆ. ರಾಷ್ಟ್ರೀಯತೆ ಸಿದ್ಧಾಂತಗಳನ್ನು ಪೋಷಿಸುವುದು ಉತ್ತರ ಪ್ರದೇಶ ಸರ್ಕಾರದ ಮೊದಲ ಆದ್ಯತೆ. ನಮ್ಮ ರಾಷ್ಟ್ರದ ಹೆಮ್ಮೆ ಉಂಟು ಮಾಡುವ ವಿಚಾರಗಳನ್ನು ಉತ್ತೇಜಿಸುವ ಅವಶ್ಯಕತೆ ಇದೆ. ಹಾಗೇ ಗುಲಾಮಗಿರಿ ಮನಸ್ಥಿತಿಯನ್ನು ತೊಡೆದುಹಾಕಬೇಕು ಎಂದು ಹೇಳಿದ್ದಾರೆ.  ಇದನ್ನೂ ಓದಿ: 15 ದಿನ ಶಿರಾದಲ್ಲೇ ಮೊಕ್ಕಾಂ ಹೂಡಲಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ

ಅಷ್ಟೇ ಅಲ್ಲ, ಮೊಘಲರು ಯಾವತ್ತೂ ನಮ್ಮ ನಾಯಕರು ಅಲ್ಲ...ಶಿವಾಜಿ ಮಹಾರಾಜ ನಮ್ಮ ನಿಜವಾದ ಹೀರೋ ಎಂದು ಯೋಗಿ ತಿಳಿಸಿದ್ದಾರೆ. ಈ ಮ್ಯೂಸಿಯಂನಲ್ಲಿ ಛತ್ರಪತಿ ಶಿವಾಜಿ ಮಹಾರಾಜರಿಗೆ ಸಂಬಂಧಪಟ್ಟ ವಸ್ತುಗಳು, ದಾಖಲೆಗಳನ್ನೂ ಇಡಲಾಗುವುದು. ಅದಕ್ಕೆ ಸಂಬಂಧಪಟ್ಟಂತೆ ಗ್ಯಾಲರಿ ನಿರ್ಮಾಣ ಮಾಡುವಂತೆ ಪ್ರವಾಸೋದ್ಯಮ ಇಲಾಖೆ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಮಾರ್​ ಮತ್ತು ಆಗ್ರಾ ಪ್ರವಾಸೋದ್ಯಮ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ವಿವರಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net