ಇನ್ಮುಂದೆ ಸಾರ್ವಜನಿಕರು ತಮ್ಮ ಸಮಸ್ಯೆಗಳು, ದೂರುಗಳು ಅಥವಾ ಪ್ರತಿಭಟನೆಯ ಅರ್ಜಿಗಳನ್ನು ಹಿಡಿದು ಅಲ್ಲಿ-ಇಲ್ಲಿ ಅಲೆಯುವ ಅಗತ್ಯವಿಲ್ಲ. ಜನರ ಕಷ್ಟ ಆಲಿಸಲು ಸರ್ಕಾರ ಹೊಸದಾಗಿ ‘ಪ್ರಜಾಸೇವೆ’ ಎಂಬ ವ್ಯವಸ್ಥೆಯನ್ನು ತಂದಿದ್ದು, ಒಬ್ಬ ಸಚಿವರಿಗೆ ಇದರ ಸಂಪೂರ್ಣ ಜವಾಬ್ದಾರಿ ವಹಿಸಲಾಗುತ್ತಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಪ್ರತಿ ಜಿಲ್ಲಾ ಉಸ್ತುವಾರಿ ಸಚಿವರು ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ತಿಂಗಳಿಗೆ ಕಡ್ಡಾಯವಾಗಿ 2 ದಿನ ಈ ಪ್ರಜಾಸೇವೆ ಅಭಿಯಾನ ನಡೆಸಬೇಕೆಂದು ಸಿಎಂ ಆದೇಶಿಸಿದ್ದಾರೆ.