ಮೋದಿ-ತಕೈಚಿ ಮಾತುಕತೆ ಫಲ: ಭಾರತದಲ್ಲಿ ಜಪಾನ್​ 10 ಬಿಲಿಯನ್ ಡಾಲರ್ ಹೂಡಿಕೆ; AI, ಸೆಮಿಕಂಡಕ್ಟರ್ ಸೇರಿ 120 ಉದ್ಯಮಗಳಿಗೆ ಬೆಂಬಲ! Japan Investment In India

ಭಾರತದಲ್ಲಿ ಜಪಾನ್‌ನಿಂದ 10 ಬಿಲಿಯನ್ ಡಾಲರ್ ಹೂಡಿಕೆ
ಭಾರತದಲ್ಲಿ ಜಪಾನ್‌ನಿಂದ 10 ಬಿಲಿಯನ್ ಡಾಲರ್ ಹೂಡಿಕೆ
Published on

ಪ್ರಮುಖ ಮುಖ್ಯಾಂಶಗಳು

  • ಭಾರತ-ಜಪಾನ್ ದ್ವಿಪಕ್ಷೀಯ ಮಾತುಕತೆ ಯಶಸ್ವಿ!
  • ಭಾರತದಲ್ಲಿ ಜಪಾನ್‌ನಿಂದ 10 ಬಿಲಿಯನ್ ಡಾಲರ್ ಹೂಡಿಕೆ
  • AI, ಸೆಮಿಕಂಡಕ್ಟರ್ ಮತ್ತು 1000 ಬಯೋ-ಗ್ಯಾಸ್ ಪ್ಲಾಂಟ್‌ಗಳ ಸ್ಥಾಪನೆಗೆ ಮೋದಿ-ತಕೈಚಿ ಮೆಗಾ ಪ್ಲಾನ್
ನವದೆಹಲಿ: ಗುರುವಾರ (ಜು.2) ನವದೆಹಲಿಯ ಹೈದರಾಬಾದ್ ಹೌಸ್​ನಲ್ಲಿ ನಡೆದ ಭಾರತ ಮತ್ತು ಜಪಾನ್​ ನಡುವಿನ ದ್ವಿಪಕ್ಷೀಯ ಮಾತುಕತೆಯಲ್ಲಿ ಭಾರತದ ಸುಮಾರು 120 ಉದ್ಯಮಗಳಲ್ಲಿ ಜಪಾನ್​ ಸರಿಸುಮಾರು ಹತ್ತು ಬಿಲಿಯನ್​ ಡಾಲರ್​ ಹೂಡಿಕೆ (Japan Investment In India) ಮಾಡಲಿದೆ ಎಂದು ವರದಿಯಾಗಿದೆ.

ಜಪಾನ್​ ಮತ್ತು ಭಾರತದ ಹೂಡಿಕೆ ಸಂಬಂಧ ಗಟ್ಟಿಯಾಗುತ್ತಿದೆ

ಜಪಾನಿನ ಪ್ರಧಾನಿ ಸನೇ ತಕೈಚಿ (Sanae Takaichi) ಜೊತೆ ಮಾತನಾಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ, ಭಾರತದ ಸುಮಾರು 120 ಉದ್ಯಮಗಳಿಗೆ ಜಪಾನ್​ ಹತ್ತು ಬಿಲಿಯನ್​ ಡಾಲರ್​ ಹೂಡಿಕೆ ಮಾಡಲು ಮುಂದಾಗಿದೆ ಎಂದಿದ್ದಾರೆ. ಈ ಮೂಲಕ ಭಾರತದ ಮತ್ತು ಜಪಾನ್​ ನಡುವಿನ ಹೂಡಿಕೆ ಸಂಬಂಧಗಳು ಇನ್ನಷ್ಟು ಗಟ್ಟಿಯಾಗಲಿದೆ ಎಂದಿದ್ದಾರೆ.
ಮುಂದಿನ ವರ್ಷಗಳಲ್ಲಿ ಈ ಹೂಡಿಕೆ ಪ್ರಮಾಣವನ್ನು ಹತ್ತು ಟ್ರಿಲಿಯನ್​ ಯೆನ್​ನನ್ನು ಭಾರತಕ್ಕೆ ಹೂಡಿಕೆ ರೂಪದಲ್ಲಿ ತರುವುದು ಮತ್ತು ಮುಂದಿನ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಜಪಾನಿ ಕಂಪನಿಗಳ ಸಂಖ್ಯೆಯನ್ನು ಡಬಲ್ ಮಾಡುವುದು ನಮ್ಮ ಗುರಿಯಾಗಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ದಿನಗಳಲ್ಲಿ ಭಾರತ ಮತ್ತು ಜಪಾನ್​ ಇಬ್ಬರು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಹೊಂದಿರುವ ದೇಶಗಳಾಗಿವೆ. ಈ ಸಂದರ್ಭದಲ್ಲಿ ಒಬ್ಬರಿಗೊಬ್ಬರು ಸಹಾಯ, ಸಹಕಾರವನ್ನು ನಾವು ನೀಡಿದರೆ, ಇಬ್ಬರೂ ಮುಂದುವರಿಯಬಹುದೆಂದು ಪ್ರಧಾನಿ ಮೋದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಚೀನಾಕ್ಕೆ ನಡುಕ? ಇಂಡೋ-ಪೆಸಿಫಿಕ್‌ನಲ್ಲಿ ಹೊಸ ಪವರ್ ಗೇಮ್!

ಜಪಾನ್ ಪ್ರಧಾನಿ ತಕೈಚಿ ಅವರ ಈ ಭೇಟಿಯೊಂದಿಗೆ ನಮ್ಮ ಸ್ನೇಹದಲ್ಲಿ ಹೊಸ ಅಧ್ಯಾಯ ಶುರುವಾಗಿದೆ, ಎಂದು ಮೋದಿ ಹೇಳಿದ್ದಾರೆ. ಜಗತ್ತಿನ ಅತಿ ದೊಡ್ಡ ಆರ್ಥಿಕ ಶಕ್ತಿಗಳಾಗಿರುವ ಭಾರತ ಮತ್ತು ಜಪಾನ್, ಮುಕ್ತ ಮತ್ತು ನಿಯಮ ಆಧಾರಿತ ಇಂಡೋ-ಪೆಸಿಫಿಕ್' ಪ್ರದೇಶಕ್ಕಾಗಿ ಕೈಜೋಡಿಸಿವೆ. ಇದು ಈ ಭಾಗದಲ್ಲಿ ಶಾಂತಿ ಮತ್ತು ಪ್ರಗತಿಗೆ ಹೊಸ ದಾರಿ ಮಾಡಿಕೊಡಲಿದ್ದು, ಪರೋಕ್ಷವಾಗಿ ಶತ್ರು ದೇಶಗಳಿಗೆ ತಕ್ಕ ಸಂದೇಶ ರವಾನಿಸಿದೆ.
AI ಮತ್ತು ಸೆಮಿಕಂಡಕ್ಟರ್‌ ಕ್ಷೇತ್ರದಲ್ಲಿ ಭಾರತದ್ದೇ ಹವಾ!
ಕೇವಲ ಸಾಂಪ್ರದಾಯಿಕ ಉದ್ಯಮ ಮಾತ್ರವಲ್ಲ, ಭವಿಷ್ಯದ ಟೆಕ್ನಾಲಜಿಯಲ್ಲೂ ಭಾರತ-ಜಪಾನ್ ಧೂಳೆಬ್ಬಿಸಲಿವೆ. ಇದಕ್ಕಾಗಿ ಎರಡು ದೇಶಗಳು ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಜಂಟಿ ಒಪ್ಪಂದ ಮಾಡಿಕೊಂಡಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಎಷ್ಟೇ ಏರುಪೇರಾದರೂ ತಡೆದುಕೊಳ್ಳಲು ಸೆಮಿಕಂಡಕ್ಟರ್ಸ್ (ಚಿಪ್ಸ್), ಕ್ವಾಂಟಮ್ ತಂತ್ರಜ್ಞಾನ ಮತ್ತು ಸುಧಾರಿತ ಮೆಟೀರಿಯಲ್ಸ್ ಉತ್ಪಾದನೆಯಲ್ಲಿ ಹೊಸ ರೋಡ್‌ಮ್ಯಾಪ್ ಸಿದ್ಧಪಡಿಸಲಾಗಿದೆ.

ಭಾರತದ ಹಳ್ಳಿ ಹಳ್ಳಿಗಳಿಗೂ ಜಪಾನ್ ಟೆಕ್ನಾಲಜಿ!

ಯುದ್ಧ ಅಥವಾ ತೈಲ ಬಿಕ್ಕಟ್ಟಿನಂತಹ ತುರ್ತು ಸಂದರ್ಭಗಳನ್ನು ಎದುರಿಸಲು ಎನರ್ಜಿ ರೆಸಿಲಿಯನ್ಸ್ ಯೋಜನೆಯನ್ನು ತರಲಾಗಿದೆ. ಬ್ಯಾಟರಿಗಳು, ಗ್ರೀನ್ ಹೈಡ್ರೋಜನ್ ಮತ್ತು ಪರಮಾಣು ಶಕ್ತಿಯಲ್ಲಿ ಜಂಟಿ ಸಹಕಾರದ ಜೊತೆಗೆ, ಭಾರತದ ಹಳ್ಳಿಗಳನ್ನು ಶ್ರೀಮಂತಗೊಳಿಸಲು ಮಾಸ್ಟರ್ ಪ್ಲಾನ್ ರೆಡಿಯಾಗಿದೆ.
ಭಾರತ-ಜಪಾನ್ ಜೈವಿಕ ಅನಿಲ ಯೋಜನೆಯಡಿ ದೇಶದಾದ್ಯಂತ 1000 ಬಯೋ-ಗ್ಯಾಸ್ ಮತ್ತು ಸಾವಯವ ಗೊಬ್ಬರ ಪ್ಲಾಂಟ್‌ಗಳನ್ನು ಸ್ಥಾಪಿಸಲಾಗುವುದು. ಇದು ಭಾರತ ಸರ್ಕಾರದ 'ಗೋಬರ್ಧನ್' ಯೋಜನೆಗೆ ಬಲ ತುಂಬಲಿದ್ದು, ಹಳ್ಳಿಗಳ ಜನರಿಗೆ ಹೊಸ ಉದ್ಯೋಗ ಮತ್ತು ಆದಾಯದ ಮೂಲ ಸೃಷ್ಟಿಸಲಿದೆ ಎಂದು ಮಾಹಿತಿಯನ್ನು ಹಂಷಿಕೊಳ್ಳಲಾಗಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net