ಮುಂಬೈನಲ್ಲಿ ಮಳೆ ಆರ್ಭಟಕ್ಕೆ ಮತ್ತೊಂದು ಬಲಿ: ತೆರೆದ ಒಳಚರಂಡಿಗೆ ಬಿದ್ದು 60 ವರ್ಷದ ವೃದ್ಧ ದುರ್ಮರಣ! Mumbai Manhole Tragedy

ತೆರೆದ ಒಳಚರಂಡಿಗೆ ಬಿದ್ದು ವೃದ್ಧ ದುರ್ಮರಣ
ತೆರೆದ ಒಳಚರಂಡಿಗೆ ಬಿದ್ದು ವೃದ್ಧ ದುರ್ಮರಣ
Published on

ಪ್ರಮುಖ ಮುಖ್ಯಾಂಶಗಳು

  • ಮುಂಬೈ ಮಳೆಗೆ ದುರಂತ!
  • ರಸ್ತೆಯಲ್ಲಿ ತೆರೆದಿದ್ದ ಗಟಾರಕ್ಕೆ ಬಿದ್ದು 60 ವರ್ಷದ ವೃದ್ಧರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ
  • ಬಿಎಂಸಿ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ.
ಚಾಂಡಿ ವಾಲಿ: ಮುಂಬೈನಲ್ಲಿ ನಿರಂತರ ಮಳೆ ಸುರಿಯುತ್ತಿರುವ ಹಿನ್ನಲೆ ಬಾಯಿತೆರೆದಿದ್ದ ಒಳಚರಂಡಿಗೆ ವ್ಯಕ್ತಿಯೊಬ್ಬ ಬಿದ್ದು ಮೃತಪಟ್ಟಿರುವ (Mumbai Manhole Tragedy) ಘಟನೆ ಮುಂಬೈನ ಚಾಂಡಿ ವಾಲಿ ಪ್ರದೇಶದಲ್ಲಿ ಗುರುವಾರ (ಜು.2) ವರದಿಯಾಗಿದೆ.
ರಾಜ್ಯದಲ್ಲಿ ಭೀಕರ ಮಳೆ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ಮ್ಯಾನ್​ಹೋಲ್​ ತೆರೆದಿರುವುದು ವ್ಯಕ್ತಿಯ ಗಮನಕ್ಕೆ ಬಂದಿಲ್ಲ. ಒಳಚರಂಡಿಯಲ್ಲಿ ಬಿದ್ದ ವ್ಯಕ್ತಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾಗಿ ತಿಳಿದು ಬಂದಿದೆ.

ಶವ ತೆಗೆದ ರಕ್ಷಣಾ ಸಿಬ್ಬಂದಿ!

ಘಟನೆ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ, ಸ್ಥಳಕ್ಕೆ ದಾವಿಸಿದ ರಕ್ಷಣಾ ತಂಡ ಹಾಗೂ ಅಗ್ನಿಶಾಮಕ ಸಿಬ್ಬಂದಿ ಒಳಚರಂಡಿಯಲ್ಲಿ ಇಳಿದು ಮೃತ ವ್ಯಕ್ತಿಯ ಶವವನ್ನು ಹೊರಕ್ಕೆ ತೆಗೆದಿದ್ದಾರೆ. ಮೃತ ವ್ಯಕ್ತಿಯನ್ನು 60 ವರ್ಷದ ಅಸ್ಲಂ ಶೇಖ್​​ ಎಂದು ಗುರುತಿಸಲಾಗಿದೆ.
ಈ ಅನಾಹುತ ನಡೆಯಲು ಗುತ್ತಿಗೆದಾರನೇ ಕಾರಣ ಎಂದು ಹೇಳಲಾಗುತ್ತಿದ್ದು, ಗುತ್ತಿಗೆದಾರನ ವಿರುದ್ಧ ಪ್ರಕರಣವನ್ನು ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುತ್ತೆವೆಂದು ಪಾಲಿಕೆ ಉಪ ಮೇಯರ್​​ ಸಂಜಯ್ ಘಾಡಿ ಹೇಳಿದ್ದಾರೆ.

ಸರ್ಕಾರದ ಭ್ರಷ್ಟಾಚಾರವೇ ಇದಕ್ಕೆ ಕಾರಣ!

ಈ ಘಟನೆಗೆ ಪ್ರತಿಕ್ರಿಯಸಿರುವ ಕಾಂಗ್ರೆಸ್​ ನಾಯಕ ನಾನಾ ಪಟೋಲೆ, ಬಿಜೆಪಿ ಸರ್ಕಾರದ ಭ್ರಷ್ಟತೆಗೆ ಇನ್ನೊಂದು ಜೀವ ಬಲಿಯಾಗಿದೆ. ಮೊನ್ನೆ ಮರ ಬಿದ್ದು ಮುಗ್ದ ಮಕ್ಕಳು ಸಾವನ್ನಪ್ಪಿದ್ದರು, ಇಂದು ಮ್ಯಾನ್​ಹೋಲ್​ಗೆ ಬಿದ್ದು ವೃದ್ಧನ ಸಾವಾಗಿದೆ. ವ್ಯವಸ್ಥೆ ಸಂಪೂರ್ಣ ಭ್ರಷ್ಟವಾಗಿದೆ ಎಂದು ಕಿಡಿಕಾರಿದ್ದಾರೆ.

ಕೆಲದಿನಗಳ ಮಕ್ಕಳ ದುರ್ಮರಣ!

ಮಹಾರಾಷ್ಟ್ರದ ರಾಜಧಾನಿ ಮುಂಬೈ ನಗರದಲ್ಲಿ ಮಂಗಳವಾರ(ಜೂ. 30) ಧಾರಾಕಾರ ಮಳೆ ಸುರಿದಿದ್ದು, ಈ ವೇಳೆ ರಸ್ತೆಯಲ್ಲಿ ತೆರಳುತ್ತಿದ್ದ ಶಾಲಾ ಬಸ್​ವೊಂದರ ಮೇಲೆ ದೊಡ್ಡ ಮರ ಬಿದ್ದ ಪರಿಣಾಮ ಓರ್ವ ಬಾಲಕ ಮೃತಪಟ್ಟು, ನಾಲ್ವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಪೊಲೀಸರ ಪ್ರಕಾರ, ಮಧ್ಯಾಹ್ನ ಚೆಂಬೂರ್ ರಸ್ತೆ ಸಂಖ್ಯೆ 11 ರಲ್ಲಿ ಶಾಲಾ ಬಸ್ ಪ್ರಯಾಣಿಸುತ್ತಿದ್ದಾಗ ಬಸ್ ಮೇಲೆ ದೊಡ್ಡ ಮರ ಬಿದ್ದಿದೆ. ಈ ವೇಳೆ ಬಸ್​​ನಲ್ಲಿ 13 ವಿದ್ಯಾರ್ಥಿಗಳಿದ್ದರು. ಮರ ಬಿದ್ದ ಬಳಿಕ ಬಸ್ ಕಂಡಕ್ಟರ್ ಮತ್ತು ಸ್ಥಳೀಯರು ತಕ್ಷಣಾ ರಕ್ಷಣಾ ಕಾರ್ಯಾಚರಣೆ ನಡೆಸಿ ಹಾನಿಗೊಳಗಾದ ಬಸ್ಸಿನಿಂದ ಮಕ್ಕಳನ್ನು ಹೊರತೆಗೆದು ರಕ್ಷಿಸಿದ್ದು, ಗಾಯಗೊಂಡ ಐವರು ವಿದ್ಯಾರ್ಥಿಗಳನ್ನು ಹತ್ತಿರದ ಝೆನ್​ ಆಸ್ಪತ್ರೆಗೆ ದಾಖಲಿಸಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net