ಐಐಟಿ ಬಾಂಬೆ ಕ್ಯಾಂಪಸ್‌ಗೆ ನುಗ್ಗಿದ ಚಿರತೆ: ನಾಯಿಯನ್ನು ಕಚ್ಚಿ ಹೊತ್ತೊಯ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆ; ವಿಡಿಯೋ ವೈರಲ್​! Leopard In IIT Bombay

ಐಐಟಿ ಬಾಂಬೆ ಕ್ಯಾಂಪಸ್‌ನ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ನುಗ್ಗಿದ ಚಿರತೆ
ಐಐಟಿ ಬಾಂಬೆ ಕ್ಯಾಂಪಸ್‌ನ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ನುಗ್ಗಿದ ಚಿರತೆ
Published on

ಪ್ರಮುಖ ಮುಖ್ಯಾಂಶಗಳು

  • ಐಐಟಿ ಬಾಂಬೆ ಕ್ಯಾಂಪಸ್‌ನ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ನುಗ್ಗಿದ ಚಿರತೆ
  • ನಾಯಿಯನ್ನು ಬೇಟೆಯಾಡಿ ಕಚ್ಚಿ ಹೊತ್ತೊಯ್ದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
  • ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್
ಮುಂಬೈ: ಇತ್ತೀಚೆಗೆ ಐಐಟಿ ಬಾಂಬೆ ಕ್ಯಾಂಪಸ್​ನ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯವೊಂದು ಕಾಲೇಜಿನ ವಿದ್ಯಾರ್ಥಿಗಳ ಹಾಗೂ ಅಕ್ಕ-ಪಕ್ಕದ ಮನೆಯವರ ಭಯಕ್ಕೆ ಕಾರಣವಾಗಿದೆ.
ಕಾಲೇಜಿನ ಕ್ಯಾಂಪಸ್​ಗೆ ಎಂಟ್ರಿಕೊಟ್ಟ ಚಿರತೆಯೊಂದು ನಾಯಿಯನ್ನು ಕೊಂದು ಹೊತ್ತುಕೊಂಡು ಹೋಗಿರುವ ವಿಡಿಯೋ (Leopard In IIT Bombay) ಸೋಷಿಯಲ್​ ಮೀಡಿಯಾನಲ್ಲಿ ಸಖತ್ ವೈರಲ್​ ಆಗುತ್ತಿದೆ.

ವಿಡಿಯೋನಲ್ಲೇನಿದೆ?

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿರುವ ವಿಡಿಯೋನಲ್ಲಿ, ವಿದ್ಯಾರ್ಥಿಗಳ ವಸತಿ ನಿಲಯದಲ್ಲಿದ್ದ ನಾಯಿಯೊಂದರ ಮೇಲೆ ಚಿರತೆ ದಾಳಿ ಮಾಡಿದೆ. ಕ್ಷಣಾರ್ಧದಲ್ಲಿ ದಾಳಿ ನಡೆಸಿದ ಚಿರತೆ ನಾಯಿಯನ್ನು ಕೊಂದು ಬಾಯಲ್ಲಿ ಕಚ್ಚಿಕೊಂಡು ಹೋಗುತ್ತಿರುವ ವಿಡಿಯೋ ವಿದ್ಯಾರ್ಥಿಗಳ ಮತ್ತು ಸುತ್ತಮುತ್ತಲಿರುಬ ಜನರ ಮನದಲ್ಲಿ ಆತಂಕವನ್ನು ಮೂಡಿಸಿದೆ.
ನಮಗೆ ಭಯವಾಗುತ್ತಿದೆ!
ಈ ವಿಡಿಯೋ ಹರಿದಾಡುತ್ತಿದ್ದಂತೆ, ಐಐಟಿ ಕ್ಯಾಂಪಸ್​ ಸುತ್ತ ಮನೆಗಳಲ್ಲಿ ವಾಸಿಸುತ್ತಿರುವ ಜನರು ಭಯಭಿತರಾಗಿದ್ದಾರೆ. ಹೀಗೆ ರಾತ್ರಿ ಹೊತ್ತು ಕಾಡು ಪ್ರಾಣಿಗಳು ಜನನಿಬಿಡ ಪ್ರದೇಶಕ್ಕೆ ಬಂದರೆ ನಾವು ಇಲ್ಲಿ ಹೇಗೆ ವಾಸಿಸುವುದೆಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ.

ನೆಟ್ಟಿಗರ ರಿಯಾಕ್ಷನ್​ ಹೇಗಿದೆ?

ಈ ಐಐಟಿ ಚಿರತೆಯ ವಿಡಿಯೋ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್​ ಬಾಕ್ಸ್​ ತುಂಬಿಸುವ ಕೆಲಸಕ್ಕೆ ಇಳಿದ್ದಿದ್ದಾರೆ. ಕಾಡನ್ನು ಕಡಿದು ಕಟ್ಟಡ ನಿರ್ಮಿಸಿದರೆ ಕಾಡು ಪ್ರಾಣಿಗಳು ಎಲ್ಲಿಗೆ ಹೋಗಬೇಕು? ಎಂದು ಪರಿಸರ ಪ್ರೇಮಿಯೊಬ್ಬರು ಪ್ರಶ್ನಿಸಿದ್ದಾರೆ.
ಅಷ್ಟು ಸುರಕ್ಷಿತವಾಗಿರುವ ಐಐಟಿಗೆ ಈ ಚಿರತೆ ಎಂಟ್ರಿ ಕೊಟ್ಟದ್ದಾದರೂ ಹೇಗೆ? ಅಲ್ಲಿ ಯಾವುದೇ ಭದ್ರತೆ ಇಲ್ಲವೇ? ಎಂದು ಇನ್ನೊಬ್ಬರು ಆಕ್ರೋಶ ಹೊರಹಾಕಿದ್ದಾರೆ. ರಾತ್ರಿ ಹೀಗೆ ಕಾಡು ಪ್ರಾಣಿಗಳು ಅಡ್ಡಾಡುತ್ತಿದ್ದರೆ, ಅಲ್ಲಿರುವ ಜನಕ್ಕೆ ಹೇಗೆ ತಾನೆ ಸುಖವಾದ ನಿದ್ದೆ ಬಂದಿತು ಎಂದು ಮತ್ತೊಬ್ಬರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net