ಸ್ಟ್ರೀಟ್ ಫುಡ್ ಪ್ರಿಯರೇ ಎಚ್ಚರ! ರಸ್ತೆ ಬದಿಯ ಶವರ್ಮಾ, ಪಿಜ್ಜಾ ತಿಂದ 80ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲು! Food Poisoning in Bhiwandi

ರಸ್ತೆ ಬದಿಯ ಶವರ್ಮಾ, ಪಿಜ್ಜಾ ಹಾಗೂ ಫಾಲುದಾ ಸೇವಿಸಿದ 80ಕ್ಕೂ ಹೆಚ್ಚು ಜನರಿಗೆ ಫುಡ್​ಪಾಯಿಸನಿಂಗ್​
ರಸ್ತೆ ಬದಿಯ ಶವರ್ಮಾ, ಪಿಜ್ಜಾ ಹಾಗೂ ಫಾಲುದಾ ಸೇವಿಸಿದ 80ಕ್ಕೂ ಹೆಚ್ಚು ಜನರಿಗೆ ಫುಡ್​ಪಾಯಿಸನಿಂಗ್​
Published on

ಪ್ರಮುಖ ಮುಖ್ಯಾಂಶಗಳು

  • ರಸ್ತೆ ಬದಿಯ ಶವರ್ಮಾ, ಪಿಜ್ಜಾ ಹಾಗೂ ಫಾಲುದಾ ಸೇವಿಸಿದ 80ಕ್ಕೂ ಹೆಚ್ಚು ಜನರಿಗೆ ಫುಡ್​ಪಾಯಿಸನಿಂಗ್​
  • ಮಹಾರಾಷ್ಟ್ರದ ಭಿವಂಡಿಯಲ್ಲಿ ನಡೆದಿರುವ ಘಟನೆ
  • ವಾಂತಿ-ಬೇದಿ ಕಾಣಿಸಿಕೊಂಡು ಆಸ್ಪತ್ರೆ ಪಾಲಾಗಿರುವ ಜನ
ಭಿವಂಡಿ: ಬೀದಿ ಬದಿ ಅಂಗಡಿಯಲ್ಲಿ ಆಹಾರ ಸೇವಿಸಿದ ಹಿನ್ನಲೆ ಸುಮಾರು 80 ಕ್ಕೂ ಅಧಿಕ ಜನ ಫುಡ್​ ಪಾಯಿಸನಿಂಗ್​ಗೆ ತುತ್ತಾಗಿರುವ ಘಟನೆ ಮಹಾರಾಷ್ಟ್ರದ ಭಿವಂಡಿಯಲ್ಲಿ (Food Poisoning in Bhiwandi) ವರದಿಯಾಗಿದೆ.
ಮಾಹಿತಿ ಪ್ರಕಾರ, ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳು ಜೂನ್​ 17 ರಂದು ರಸ್ತೆ ಬದಿಯಲ್ಲಿ ಮಾರಾಟ ಮಾಡುವ ಪಿಜ್ಜಾ ಹಾಗೂ ಶವರ್ಮಾ (Shawarma) ತಿಂದಿದ್ದು, ಮಾರನೇ ದಿನ ವಾಂತಿ-ಬೇದಿ, ಹೊಟ್ಟೆನೋವು ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.

80 ಜನ ಆಸ್ಪತ್ರೆಗೆ ದಾಖಲು!

ಆರೋಗ್ಯ ಪರಿಸ್ಥಿತಿ ಹದಗೆಟ್ಟ ಜನರನ್ನು ಇಂದಿರಾ ಗಾಂಧಿ ಮೆಮೋರಿಯಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಪೊಲೀಸ್​ ದೂರು ದಾಖಲಾಗಿದ್ದು, ಪೊಲೀಸರು ರೋಗಿಗಳ ಬಳಿ ವಿಚಾರಣೆ ನಡೆಸುತ್ತಿದ್ದಾರೆ.
ವೈದ್ಯರು ನೀಡಿರುವ ಮಾಹಿತಿ ಪ್ರಕಾರ, ಆಸ್ಪತ್ರೆ ದಾಖಲಾಗಿರುವ ಎಲ್ಲರಲ್ಲಿ ಒಂದೇ ರೀತಿಯ ಲಕ್ಷಣಗಳಿವೆ. ಸದ್ಯ ದಾಖಲಾಗಿರುವವ ಆರೋಗ್ಯ ಸಹಜ ಸ್ಥಿತಿಗೆ ಮರಳುತ್ತಿದೆ ಎಂದು ಹೇಳಿದ್ದಾರೆ.
ಪೊಲೀಸರ ಪ್ರಕಾರ, ಆಸ್ಪತ್ರೆ ಸೇರಿರಿವ ಎಲ್ಲರೂ ಒಂದೇ ಸ್ಥಳದಲ್ಲಿ, ಬಿದಿ ಬದಿಯಲ್ಲಿ ಮಾರಾಟವಾಗುವ ಪಿಜ್ಜಾ, ಶವರ್ಮಾ ಹಾಗೂ ಫಾಲುದಾ ತಿಂದಿದ್ದಾರೆ. ಈಗ ನಾನು ರೋಗಿಗಳಲ್ಲಿ ಅವರಿ ಯಾವ ಸ್ಥಳದಲ್ಲಿ ಆಹಾರ ಸೇವಿಸಿದ್ದರೆಂದು ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪಾನಿಪುರಿ ತಿಂದ ಮಕ್ಕಳು; ಆಸ್ಪತ್ರೆಗೆ ದಾಖಲು!

ಕೆಲ ದಿನಗಳ ಹಿಂದೆ ಇದೇ ರೀತಿಯ ಘಟನೆ, ತೆಲಂಗಾಣದಲ್ಲಿ ವರದಿಯಾಗಿದ್ದು, ಒಂದೇ ಅಂಗಡಿಯಲ್ಲಿ ಪಾನಿಪುರಿ ಸೇವಿಸಿದ ಸುಮಾರು 20 ಜನ ಮಕ್ಕಳು ಫುಡ್​ ಪಾಯಿಸನಿಂಗ್​ಗೆ ತುತ್ತಾಗಿ ಆಸ್ಪತ್ರೆ ಪಾಲಾಗಿದ್ದರು.
ತಮ್ಮ ಮಕ್ಕಳ ಆರೋಗ್ಯ ಹದಗೆಡಲು ಹಿಂದಿನ ದಿನ ಸಂಜೆ ತಿಂದಿರುವ ಪಾನಿಪುರಿಯೇ ಕಾರಣ ಎನ್ನುವುದು ಹೆತ್ತವರ ಆರೋಪವಾಗಿದೆ. ಆದರೆ ಈ ಕುರಿತು ಯಾವುದೇ ಅಧಿಕೃತ ಹೇಳಿಕೆಯನ್ನು ವೈದ್ಯರಾಗಲಿ, ಅಧಿಕಾರಿಗಳಾಗಲಿ ಸ್ಪಷ್ಟನೆ ನೀಡಿಲ್ಲ. ಆದರೆ ಮಕ್ಕಳಿಗೆ ಫುಡ್​​ ಪಾಯಿಸಾನಿಂಗ್​​ ಆಗಿರುವುದು ದೃಢವಾಗಿದ್ದು, ಇದಕ್ಕೆ ಯಾವ ಆಹಾರ ಕಾರಣವೆಂದು ವೈದ್ಯರು ಹಾಗೂ ಆಹಾರ ಸುರಕ್ಷಾ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾಗಿ ತಿಳಿದು ಬಂದಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net