ಇತ್ತೀಚೆಗೆ ಯೂಟ್ಯೂಬ್ ಚಾನೆಲ್ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಇಮ್ತಿಯಾಜ್ ಅಲಿ, ನನಗೆ ಯಾವುದಾದರೂ ಹೆಣ್ಣು ನಾನು ಬುರ್ಖಾ ಧರಿಸಿ ಖುಷಿಯಾಗಿದ್ದಿನಿ, ನಾನು ನನ್ನ ಪರ್ದಾದಲ್ಲಿ ಸಂತೋಷವಾಗಿದ್ದಿನಿ ಎಂದತೆ ಸಹಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ಬಾಯಲ್ಲಿ ಈ ರೀತಿ ಮಾತು ಬರುತ್ತದೆ ಎಂದರೆ, ನೀವು ನಿಮ್ಮ ಮನಸ್ಸಲ್ಲಿ ನಿಮ್ಮನ್ನೇ ಬಲಿಪಶು ಮಾಡಿಕೊಂಡಿದ್ದಿರಿ ಎಂದರ್ಥ ಎಂದು ಅಲಿ ಹೇಳಿದ್ದಾರೆ.