ಲಾಲು ಪುತ್ರ ತೇಜ್ ಪ್ರತಾಪ್ ಯಾದವ್‌ಗೆ ಜೀವ ಬೆದರಿಕೆ: ಸ್ವಪಕ್ಷದವರಿಂದಲೇ ಕೊಲೆಗೆ ಸ್ಕೆಚ್​​; 4 ಜನರ ಮೇಲೆ FIR ದಾಖಲು! Tej Pratap Yadav

ಲಾಲೂ ಪ್ರಸಾದ್ ಯಾದವ್ ಮತ್ತು ಪುತ್ರ ತೇಜ್ ಪ್ರತಾಪ್ ಯಾದವ್ ಕೊಲೆಗೆ ಸಂಚು
ಲಾಲೂ ಪ್ರಸಾದ್ ಯಾದವ್ ಮತ್ತು ಪುತ್ರ ತೇಜ್ ಪ್ರತಾಪ್ ಯಾದವ್ ಕೊಲೆಗೆ ಸಂಚು
Published on

ಪ್ರಮುಖ ಮುಖ್ಯಾಂಶಗಳು

  • ಲಾಲೂ ಪ್ರಸಾದ್ ಯಾದವ್ ಮತ್ತು ಪುತ್ರ ತೇಜ್ ಪ್ರತಾಪ್ ಯಾದವ್ ಕೊಲೆಗೆ ಸಂಚು
  • ಸ್ವಪಕ್ಷದವರ ಮೇಲೆ ಆರೋಪ ಮಾಡಿರುವ ತೇಜ್​ ಪ್ರತಾಪ್​
  • ನಾಲ್ಕು ಜನರ ಮೇಲೆ ದಾಖಲಾಗಿರುವ ಎಫ್​ಐಆರ್​
ಪಾಟ್ನಾ: ಆರ್​ಜೆಡಿ ಪಕ್ಷದ ಕಾರ್ಯಕರ್ತರು ತಮ್ಮನ್ನು ಹಾಗೂ ತಮ್ಮ ಪರಿವಾರದವರನ್ನು ಕೊಲ್ಲಲ್ಲು ಪ್ರಯತ್ನಿಸುತ್ತಿದ್ದು, ಈಗಾಗಲೇ ಹಲವು ಬಾರಿ ಬೆದರಿಕೆ ಪ್ರಯತ್ನ ನಡೆದಿದೆ ಎಂದು ಲಾಲು ಯಾದವ್​ ಪುತ್ರ ತೇಜ್​ ಪ್ರತಾಪ್​ ಯಾದವ್​​ (Tej Pratap Yadav) ಆರೋಪಿಸಿದ್ದಾರೆ.
ತೇಜ್​ ಪ್ರತಾಪ್​ ಯಾದವ್​ ಮತ್ತು ಅವರ ತಂದೆ ಲಾಲು ಯಾದವ್​ ಅವರನ್ನು ಕೊಲ್ಲಲ್ಲು ಆರ್​ಜೆಡಿ (RJD) ಪಕ್ಷದ ಮಾಜಿ ವಿದ್ಯಾರ್ಥಿ ಪರಿಷತ್​ ಅಧ್ಯಕ್ಷ ಆಕಾಶ್​ ಯಾದವ್​ ಸಂಚನ್ನು ರೂಪಿಸಿದ್ದಾನೆಂದು ತೇಜ್​ ಪ್ರತಾಪ್​ ಆರೋಪಿಸಿದ್ದಾರೆ. 

ಮನೆಗೆ ಬಂದು ಬೆದರಿಕೆ ಹಾಕಿದ್ದಾರೆ!

ಈ ಕುರಿತು ಪೊಲೀಸರಲ್ಲಿ ದೂರು ದಾಖಲಿಸಿರುವ ತೇಜ್​ ಪ್ರತಾಪ್​​, ರಾಜಕೀಯ ದ್ವೇಷದ ಹಿನ್ನಲೆ ಆಕಾಶ್​ ಯಾದವ್​ ಮತ್ತು ಆತನ ಸಹಚರರು ನನ್ನನ್ನು ಕೊಲ್ಲಲು ಯತ್ನಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ನನ್ನ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಬೆದರಿಕೆ ಹಾಕಿದ್ದಾರೆ, ನಾವು ಅವರನ್ನು ಹಿಡಿಯುವಷ್ಟರಲ್ಲಿ ಅಲ್ಲಿಂದ ಪರಾರಿ ಆಗಿದ್ದಾರೆ.
ಈ ಕುರಿತು ನಾನು ಪೊಲೀಸ್​ರಲ್ಲಿ ದೂರನ್ನು ದಾಖಲಿಸಿದ್ದು, ಆಕಾಶ್​ ಯಾದವ್​ ಸೇರಿ 8 ಜನರ ಮೇಲೆ ಎಫ್​ಐಆರ್​ ಆಗಿದೆ. ಇವರು ಕೇವಲ ನನ್ನನ್ನು ಮಾತ್ರವಲ್ಲ, ಅನಾರೋಗ್ಯ ಪೀಡಿತರಾಗಿರುವ ನನ್ನ ತಂದೆ ಮಾಜಿ ಸಿಎಂ ಲಾಲು ಯಾದವ್​ರನ್ನು ಕೊಲ್ಲಲ್ಲು ಸಂಚನ್ನು ರೂಪಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಸಿಎಂ ರನ್ನು ಬೇಟಿ ಮಾಡುತ್ತೆನೆ!
ವೈಯಕ್ತಿಕವಾಗಿ ನನಗೆ ಹಾಗೂ ನನ್ನ ಕುಟುಂಬಕ್ಕೆ ಜೀವ ಬೆದರಿಕೆಯಿದ್ದು, ನಮಗೆ ಪೊಲೀಸರು ರಕ್ಷಣೆ ನೀಡಬೇಕೆಂದು ಬಿಹಾರದ ಮುಖ್ಯಮಂತತ್ರಿಗಳಾದ ಸಾಮ್ರಾಟ್​ ಚೌಧರಿ ಅವರಿಗೆ ನಾನು ಮನವಿ ಮಾಡುತ್ತೆನೆ. ಅಷ್ಟೇ ಅಲ್ಲದೇ ಅವರನ್ನು ಖುದ್ದಾಗಿ ಬೇಟಿ ಮಾಡಲಿದ್ದೆನೆ, ಅಂತೆಯೇ ಆರೋಪಿತರಿಗೆ ಕಠಿಣ ಶಿಕ್ಷೆಯಾಗಲೆಂದು ಪೊಲೀಸ್​ ಇಲಾಖೆಗೆ ಕೇಳಿಕೊಳ್ಳುತ್ತೆನೆಂದು ತೇಜ್​ ಪ್ರತಾಪ್​ ಯಾದವ್​ ತಿಳಿಸಿದ್ದಾರೆ.

ತೇಜ್​ ಪ್ರತಾಪ್​ ಮೇಲೆ ಎಫ್​ಐಆರ್​!

ಇದರ ನಡುವೆ ತೇಜ್​ ಪ್ರತಾಪ್​ ಯಾದವ್​ ಮೇಲೆ ಕೂಡ ಇನ್ನೊಂದು ಪ್ರಕರಣದಲ್ಲಿ ಎಫ್​ಐಆರ್​ ದಾಖಲಾಗಿದೆ. ಪಾಟ್ನಾದಲ್ಲಿರುವ ಮನೆಯೊಂದಕ್ಕೆ ನುಗ್ಗಿ ಅಲ್ಲಿದ್ದ ಹೆಣ್ಣುಮಗುವೊಂದು, ತನ್ನ ಮಗಳೆಂದು ತೇಜ್​ ಪ್ರತಾಪ್​ ಹೇಳಿದ್ದಾರೆಂಬ ಆರೋಪದಲ್ಲಿ ದೂರು ದಾಖಲಾಗಿದೆ.
ಆ ಮಗುವಿನ ತಾಯಿ ಈಗ ತೇಜ್​ ಪ್ರತಾಪ್​ಗೆ ಬೆದರಿಕೆ ಹಾಕಿರುವ ಆಕಾಶ್​ ಯಾದವ್​ಳ ಸಂಬಂಧಿಕಳಾಗಿದ್ದಾಳೆ ಎಂದು ಹೇಳಲಾಗುತ್ತಿದೆ. ಆದರೆ ತೇಜ್​ ಪ್ರತಾಪ್​ ಈ ಆರೋಪ ಎಲ್ಲಾ ಸುಳ್ಳು ನಾನು ಯಾರ ಮನೆಗೂ ನುಗ್ಗಿಲ್ಲ ಎಂದು ಹೇಳಿದ್ದಾರೆ, (ಏಜನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net