ಪೆದ್ದಿ ಜಾನ್ವಿ, ಕಾಕ್‌ಟೇಲ್‌ 2 ನಲ್ಲಿ ಕೃತಿ: ಸಿನಿಮಾದಲ್ಲಿ ನಟಿ ದೇಹ ತೋರಿಸಲೆಬೇಕೆ? ಮಹಿಳೆಯರೇ ಈ ಮೌನ ಒಳ್ಳೆಯದಲ್ಲ: ನೆಟ್ಟಿಗರ ಆಕ್ರೋಶ! Kriti Sanon and Janhvi Kapoor

'ಕಾಕ್‌ಟೇಲ್ 2' ಚಿತ್ರದಲ್ಲಿ ಕೃತಿ ಸನೋನ್ ಬಿಕಿನಿ ದೃಶ್ಯಗಳ ಕ್ಲೋಸಪ್ ಶಾಟ್‌
'ಕಾಕ್‌ಟೇಲ್ 2' ಚಿತ್ರದಲ್ಲಿ ಕೃತಿ ಸನೋನ್ ಬಿಕಿನಿ ದೃಶ್ಯಗಳ ಕ್ಲೋಸಪ್ ಶಾಟ್‌
Published on

ಪ್ರಮುಖ ಮುಖ್ಯಾಂಶಗಳು

  • ಪೆದ್ದಿ ಚಿತ್ರದ ಜಾನ್ವಿ ಕಪೂರ್ ಪ್ರಕರಣ ನೆನೆದು ಬಾಲಿವುಡ್ ವಿರುದ್ಧ ಸೌತ್ ಫ್ಯಾನ್ಸ್ ಆಕ್ರೋಶ
  • 'ಕಾಕ್‌ಟೇಲ್ 2' ಚಿತ್ರದಲ್ಲಿ ಕೃತಿ ಸನೋನ್ ಬಿಕಿನಿ ದೃಶ್ಯಗಳ ಕ್ಲೋಸಪ್ ಶಾಟ್‌
  • ಮಹಿಳೆಯರೇ ಮೌನವಾಗಿರಬೇಡಿ ಎಂದ ನೆಟ್ಟಿಗರು
ಬಾಲಿವುಡ್​​: ಶಾಹಿದ್ ಕಪೂರ್, ಕೃತಿ ಸನೋನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಬಿಗ್ ಬಜೆಟ್ ಸಿನಿಮಾ ಕಾಕ್‌ಟೇಲ್ 2 ಇದೀಗ ತೆರೆಕಂಡಿದೆ. ಸಿನಿಮಾ ಬಿಡುಗಡೆಯಾಗಿ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆಯಾದರೂ, ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಬೇರೆದ್ದೇ ವಿಚಾರ ಸಖತ್ ಸೌಂಡ್ ಮಾಡುತ್ತಿದೆ.
ಇತ್ತೀಚೆಗಷ್ಟೇ ತೆರೆಕಂಡಿದ್ದ ಪೆದ್ದಿ ಸಿನಿಮಾದಲ್ಲಿ ಜಾನ್ವಿ ಕಪೂರ್ ಅವರನ್ನು ತೋರಿಸಿದ ರೀತಿಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ಈಗ ಕಾಕ್‌ಟೇಲ್ 2 ಚಿತ್ರದಲ್ಲಿ ಕೃತಿ ಸನೋನ್ (Kriti Sanon and Janhvi Kapoor) ಅವರ ಬಿಕಿನಿ ಶಾಟ್‌ಗಳನ್ನು ನೋಡಿದ ನೆಟ್ಟಿಗರು, ಬಾಲಿವುಡ್‌ನಲ್ಲಿ ನಟಿಯರನ್ನು ಕೇವಲ ಗ್ಲಾಮರ್ ಗೊಂಬೆಗಳಾಗಿ ಬಳಸಿಕೊಳ್ಳುತ್ತರೆಂದು ಮತ್ತೊಮ್ಮೆ ಆಕ್ರೋಶ ಹೊರಹಾಕುತ್ತಿದ್ದಾರೆ.

ಇದು ಅತಿರೇಕದ ಕ್ಲೋಸಪ್: ನೆಟ್ಟಿಗರ ಆಕ್ರೋಶ

ಸಿನಿಮಾ ನೋಡಿದ ತಕ್ಷಣವೇ ಎಕ್ಸ್ (ಟ್ವಿಟರ್) ಖಾತೆಯಲ್ಲಿ ನೆಟ್ಟಿಗರೊಬ್ಬರು ಹೀಗೆ ಬರೆದುಕೊಂಡಿದ್ದಾರೆ. ನನ್ನ ವೈಯಕ್ತಿಕ ಅಭಿಪ್ರಾಯ ಏನೆಂದರೆ, ಕಾಕ್‌ಟೇಲ್ 2 ಸಿನಿಮಾದಲ್ಲಿ ಕೃತಿ ಸನೋನ್ ಅವರ ಬಿಕಿನಿ ದೃಶ್ಯಗಳ ಕ್ಲೋಸಪ್ ಶಾಟ್‌ಗಳು ಇರಬಾರದಿತ್ತು.
ಪೆದ್ದಿ ಚಿತ್ರದಲ್ಲಿ ಜಾನ್ವಿ ಕಪೂರ್ ಅವರನ್ನು ಅತಿಯಾಗಿ ಗ್ಲಾಮರೈಸ್ ಮಾಡಿದಾಗ ನಾವು ಧ್ವನಿ ಎತ್ತಿದ್ದೆವು. ಹಾಗಿದ್ದ ಮೇಲೆ ಕಾಕ್‌ಟೇಲ್ 2 ನಲ್ಲೂ ಇದನ್ನು ಪ್ರಶ್ನಿಸಲೇಬೇಕು. ಕತೆಗೆ ಅಥವಾ ಸನ್ನಿವೇಶಕ್ಕೆ ಬಿಕಿನಿ ಅಗತ್ಯವಿದ್ದರೆ ಬಳಸಲಿ. ಆದರೆ ಬಿಕಿನಿ ದೃಶ್ಯದಲ್ಲಿ ಬೇಕಂತಲೇ ಕ್ಲೋಸಪ್ ಏಕೆ ತೋರಿಸಬೇಕೆಂದು ಪ್ರಶ್ನಿಸಿದ್ದಾರೆ.
ಮಹಿಳೆಯರೇ ಈಗೇಕೆ ಮೌನ?
ಇನ್ನೂ ಕೆಲವರು ಪೆದ್ದಿಯಲ್ಲಿ ನಟಿ ಜಾನ್ವಿ ಕಪೂರ್​ ಪಾತ್ರವನ್ನು, ದೃಶ್ಯವನ್ನು ನೋಡಿದ ಮಹಿಳೆಯರು ತೆಲುಗಿನ ಸಿನಿಮಾಗಳಲ್ಲಿ ಮಹಿಳೆಯ ಪಾತ್ರವನ್ನು ಭೋಗದ ವಸ್ತುವಾಗಿ ಚಿತ್ರಿಸುತ್ತಾರೆಂದು ಕಿಡಿ ಕಾರಿದ್ದರು. ಈಗ ಬಾಲಿವುಡ್​ನ ಕಾಕ್‌ಟೇಲ್ 2 ಸಿನಿಮಾದಲ್ಲಿ ಕೃತಿ ಸನೋನ್​ನ ಬಿಕಿನಿ ನೋಡಿ ವಾವ್​.. ಸೂಪರ್​ ಎನ್ನಬೇಡಿ. ಇದರ ವಿರುದ್ಧವು ನೀವು ಧ್ವನಿ ಎತ್ತಿ ಎಂದು ದಕ್ಷಿಣ ಭಾರತದ ಸಿನಿಮಾದ ಅಭಿಮಾನಿಯೊಬ್ಬರು ಕಮೆಂಟ್​ ಮಾಡಿದ್ದಾರೆ.

ಬಾಲಿವುಡ್​ ವಿರುದ್ಧ ಆಕ್ರೋಶ!

ಮತ್ತೊಬ್ಬರು ಇಡೀ ಬಾಲಿವುಡ್ ಸಿನಿಮಾ ರಂಗವನ್ನೇ ತರಾಟೆಗೆ ತಗೆದುಕೊಂಡಿದ್ದು, ಹಿಂದಿ ಸಿನಿಮಾಗಳು ಮಹಿಳೆಯರನ್ನು ಕೊಳಕಾಗಿ ಚಿತ್ರಿಸುವುದನ್ನೇ ನಾರ್ಮಲ್ ಮಾಡುತ್ತಿವೆ. ಕೃತಿಯ ಹೊಕ್ಕುಳ, ಎದೆ ಮತ್ತು ಪೃಷ್ಠದ ಭಾಗಗಳನ್ನು ನಾಚಿಕೆಯಿಲ್ಲದೆ ಕ್ಲೋಸಪ್‌ನಲ್ಲಿ ಶೂಟ್ ಮಾಡಲಾಗಿದೆ. ಇಲ್ಲಿ ಮಹಿಳೆಯ ಒಪ್ಪಿಗೆಗೆ ಬೆಲೆಯೇ ಇಲ್ಲದಂತಾಗಿದೆ. ಇಡೀ ಸಿನಿಮಾದಲ್ಲಿ ಅವಳನ್ನು ಕೇವಲ ಒಂದು ಗ್ಲಾಮರ್ ವಸ್ತುವಾಗಿ ಚಿತ್ರಿಸಿದ್ದಾರೆಂದು ಆಕ್ರೋಶ ಹೊರಹಾಕಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net