ಎಂಟು ಬಾರಿ ಪಲ್ಟಿಯಾದ ಕಾರು! ಐದು ಜನ ಪ್ರಯಾಣಿಕರು ಪಾರು: CCTV ಯಲ್ಲಿ ದೃಶ್ಯ ಸೆರೆ

dk (44)
Published on

ರಾಜಸ್ಥಾನ: ಇಲ್ಲಿ ನೌಗರ್​ ಜಿಲ್ಲೆಯ ಹೆದ್ದಾರಿಯಲ್ಲಿ ಬರೊಬ್ಬರಿ ಎಂಟು ಬಾರಿ ಕಾರು ಪಲ್ಟಿಯಾದರೂ ಅದೃಷ್ಟವಶಾತ್​ ಪವಾಡಸದೃಶ್ಯದಲ್ಲಿ ಕಾರಿನಲ್ಲಿದ್ದ 5 ಜನರಿ ಪ್ರಯಾಣಿಕರು ಪಾರಾಗಿರುವ ಘಟನೆ ಸಿಸಿಟಿವಿಯಲ್ಲಿ(CCTV) ಸೆರೆಯಾಗಿದ್ದು, ಇದೀಗ ಘಟನೆಯ ಕ್ಲೀಪ್​ಗಳು ಭಾರೀ ವೈರಲ್​ ಆಗಿವೆ.

ವಿಡಿಯೋದಲ್ಲಿ ಏನಿದೆ?

ಐವರು ಪ್ರಯಾಣಿಕರನ್ನು ಒಳಗೊಂಡಿರುವ ಕಾರು ಹೆದ್ದಾರಿಯಲ್ಲಿ ವೇಗವಾಗಿ ಚಲಿಸುತ್ತಿದ್ದಾಗ ಏಕಾಏಕಿ ತಿರುವು ತೆಗೆದುಕೊಳ್ಳುವಾಗ ಚಾಲಕನ ನಿಯಂತ್ರಣ ತಪ್ಪಿದೆ. ಕೆಲವೇ ಕ್ಷಣಗಳಲ್ಲಿ ಕಾರು ಪದೇ ಪದೇ ಪಲ್ಟಿ ಹೊಡೆದು ಶೋರೂಂನ ಮುಖ್ಯ ಗೇಟ್‌ಗೆ ಅಪ್ಪಳಿಸಿದೆ. ವಾಹನವು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ದೃಶ್ಯಗಳು ಸೆರೆಯಾಗಿವೆ.

ದೃಶ್ಯಗಳಲ್ಲಿ ನೋಡುವುದಾದರೆ ಅಪಘಾತದ ತೀವ್ರತೆಯು ಬಗಹಳಷ್ಟು ಇದ್ದರೂ ಅದೃಷ್ಟವಶಾತ್​ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ. ಇದೀಗ ಈ ವಿಡಿಯೋ ನೋಡಿದ ನೆಟ್ಟಿಗರು ಮೂಗಿನ ಮೇಲೆ ಬೆರಳು ಇಡುತ್ತಿದ್ದಾರೆ.

ಇನ್ನು ಕಾರಿನಿಂದ ಹೊರ ಬಂದ ಪ್ರಯಾಣಿಕರು ಶೋರೂಮ್​ನಲ್ಲಿ ಸಲ್ಪ ಹೊತ್ತು ವಿಶ್ರಾಂತಿ ಪಡೆದು ಕುಡಿಯಲು ಚಹಾ ಕೇಳಿದ್ದಾರೆ. ಅಲ್ಲದೇ, ಯಾರಿಗೂ ಯಾವುದೇ ಗಾಯಗಳಾಗಿಲ್ಲ, ಒಂದು ಗೀರು ಕೂಡ ಇಲ್ಲ. ಅವರು ಒಳಗೆ ನಡೆದರು ಮತ್ತು ಏನೂ ಆಗಿಲ್ಲ ಎಂಬಂತೆ ಚಹಾ ಕೇಳಿದರು  ಎಂದು ಶೋರೂಮ್​ ಸಿಬ್ಬಂದಿ ಹೇಳಿದ್ದಾರೆ.(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net