South ಬಳಿಕ ಬಾಲಿವುಡ್​ನಲ್ಲಿ ನೆಲೆಯೂರಲು ರಶ್ಮಿಕಾ​ ಸಿದ್ಧತೆ! ಮುಂಬೈನಲ್ಲೇ ಮನೆ ಮಾಡುವ ನಿರೀಕ್ಷೆ?

blank

ಬೆಂಗಳೂರು: ನ್ಯಾಷನಲ್​ ಕ್ರಶ್​ ಎಂದೇ ಖ್ಯಾತಿ ಪಡೆದ ಕನ್ನಡತಿ ರಶ್ಮಿಕಾ ಮಂದಣ್ಣ ಇತ್ತೀಚಿನ ಪುಷ್ಪ-2 ಬ್ಲಾಕ್​ ಬಸ್ಟರ್​ ಹಿನ್ನೆಲೆ ಇದೀಗ ತಮ್ಮ ವೃತ್ತಿ ಬದುಕಿನಲ್ಲಿ ಸೌತ್​(South) ಸೇರಿದಂತೆ ಬಾಲಿವುಡ್​​ ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯಾಗಿದ್ದಾರೆ.

ಕನ್ನಡ ಚಿತ್ರರಂಗದ ಮೂಲಕ ತನ್ನ ಸಿನಿ ಜರ್ನಿ ಆರಂಭಿಸಿದ ರಶ್ಮಿಕಾ, ತೆಲುಗು, ತಮಿಳಿನಲ್ಲಿ ಎಲ್ಲರ ಮನ ಗೆದ್ದ ನಂತರ ಇದೀಗ ಬಾಲಿವುಡ್​ಗೆ ಹಾರಿದ್ದು, ಅಲ್ಲೇ ನೆಲೆ ಕಂಡುಕೊಳ್ಳುವ ಸಾಧ್ಯತೆ ಇದೆ ಎಂದು ಸಿನಿ ವಲಯದಲ್ಲಿ ಮಾತುಗಳು ಕೇಳಿ ಬರುತ್ತವೆ.

ಇದನ್ನೂ ಓದಿ:Vijayananda Kasappanavar | ಸದನದಲ್ಲಿ ಯಾವ ಶಬ್ದ ಬಳಕೆ ಮಾಡಬೇಕು, ಮಾಡಬಾರದು ಅಂತ ಒಂದು ನಿಯಮ ಇದೆ

ಹೌದು, ಇದಕ್ಕೆ ಪೂರಕ ಎಂಬಂತೆ ಸೌತ್​ ಪ್ರಾಜೆಕ್ಟ್​ಗಳಿಗಿಂತ ಅವರಿಗೆ ಬಾಲಿವುಡ್​ನಲ್ಲಿಯೇ ಅಧಿಕ ಆಫರ್​ಗಳು ಬರುತ್ತಿವೆ. ಸಲ್ಮಾನ್​ ಖಾನ್ ಅವರೊಂದಿಗೆ ಸಿಕಿಂದರ್​ ಮತ್ತು ಶಾಹಿದ್​ ಕಪೂರ್​ ಜತೆಗಿನ ಕಾಕ್ಟೈಲ್​-2 ಚಿತ್ರಕ್ಕೆ ರಶ್ಮಿಕಾ ಸಹಿ ಹಾಕುವ ಮೂಲಕ ಚಿತ್ರದ ಬಿಜಿ ಶೆಡ್ಯೂಲ್​ನಲ್ಲಿದ್ದಾರೆ. ಮುಂದಿನ ಸಿನಿಮಾಗಳು ಕೂಡ ಬಾಲಿವುಡ್​ನಲ್ಲಿಯೇ ಸಿಗುವ ಸಾಧ್ಯತೆ ಇದೆ. ಹೀಗಾಗಿ, ಮುಂಬೈನಲಲ್ಲಿ ಮನೆ ಖರೀದಿ ಮಾಡುವ ಮೂಲಜ ಅಲ್ಲಿಯೇ ನೆಲೆಯೂರವ ಸಾಧ್ಯತೆ ಇದೆ ಎಂದು ವರದಿಗಳು ಉಲ್ಲೇಖಿಸಿವೆ.

ಇದನ್ನೂ ಓದಿ: ಸಿ.ಟಿ. ರವಿ ಸಿದ್ದರಾಮಯ್ಯ ಬಗ್ಗೆಯೂ ಹೀನ ಮಾತು ಆಡಿದ್ದಾರೆ: DK Shivakumar

ಬಾಕ್ಸ್​ ಆಫಿಸ್​ ಕ್ವೀನ್​ ರಶ್ಮಿಕಾ
2023ರಲ್ಲಿ ಬ್ಯಾಕ್​ ಟೂ ಬ್ಯಾಕ್​ ಹಿಟ್​ ಸಿನಿಮಾಗಳನ್ನು ರಶ್ಮಿಕಾ ನೀಡಿದ್ದಾರೆ. ತಮಿಳಿನ ವರಿಸು 300 ಕೋಟಿ ರೂ. ಮತ್ತು ಬಾಲಿವುಡ್​ನ ಅನಿಮಲ್​ ಚಿತ್ರ 900 ಕೋಟಿ. ರೂ ಗಳಿಕೆ ಮಾಡಿದೆ.

ಮುಂಬೈಗೆ ಶಿಫ್ಟ್ ಆಗುವುದು ರಶ್ಮಿಕಾಗೆ ಬಾಲಿವುಡ್ ಚಲನಚಿತ್ರ ನಿರ್ಮಾಪಕರೊಂದಿಗೆ ನಿಕಟವಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಅಧಿಕ ಆಫರ್​ಗಳ ಮತ್ತು ಬ್ರಾಂಡ್ ಅನುಮೋದನೆಗಳೊಂದಿಗೆ, ಅವರು ಬಾಲಿವುಡ್ ಮತ್ತು ದಕ್ಷಿಣ ಭಾರತದ ಉದ್ಯಮಗಳಲ್ಲಿ ಪ್ರಾಬಲ್ಯ ಸಾಧಿಸಲು ಸಿದ್ಧರಾಗಿದ್ದಾರೆ,(ಏಜೆನ್ಸೀಸ್​).

ಡಿ.25ಕ್ಕೆ ‘ಮ್ಯಾಕ್ಸ್’ ಅಬ್ಬರ​! ಕಿಚ್ಚನ ‘ಕಿಚ್ಚಿ’ಗೆ ಹೆಚ್ಚಾಯ್ತು ಫ್ಯಾನ್ಸ್​ ಕಾತರ | Max Movie

Share This Article

ಹುಡುಗಿಯರೇ.. ಬೇಸಿಗೆಯಲ್ಲಿ ಸುಂದರವಾಗಿ ಕಾಣಬೇಕಾದರೆ ಈ ತಪ್ಪುಗಳನ್ನು ಮಾಡಬೇಡಿ! Beauty Tips

Beauty Tips: ಬೇಸಿಗೆ ಸಮೀಪಿಸುತ್ತಿರುವುದರಿಂದ, ಅನೇಕ ಜನರು ತಮ್ಮ ಚರ್ಮವನ್ನು ರಕ್ಷಿಸಲು ಹೆಣಗಾಡುತ್ತಿದ್ದಾರೆ. ಹುಡುಗಿಯರು ಹೊರಗೆ…

ನಿಮಗೆ ಕೂದಲು ಉದುರುವ ಸಮಸ್ಯೆ ಇದೆಯೇ? ಹಾಗಲಕಾಯಿ ರಸವನ್ನು ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ…bitter gourd

bitter gourd : ನಮ್ಮಲ್ಲಿ ಹಲವರಿಗೆ ಹಾಗಲಕಾಯಿ ತಿನ್ನುವುದು ಇಷ್ಟವಾಗುವುದಿಲ್ಲ. ಹಾಗಲಕಾಯಿ ತಿನ್ನಲು ಸ್ವಲ್ಪ ಕಹಿಯಾಗಿದ್ದರೂ,…

ಸುರಕ್ಷಿತ ಪ್ರಯಾಣಕ್ಕಾಗಿ ನಿಮ್ಮ ಕಾರಿನಲ್ಲಿ ಇರಲೇಬೇಕಾದ 6 ವಸ್ತುಗಳು ಯಾವವು ಗೊತ್ತಾ? Vastu Tips

Vastu Tips: ನಮ್ಮ ಮನೆಗಳು ಮತ್ತು ಕಚೇರಿಗಳಿಗೆ ಮಾತ್ರವಲ್ಲದೆ, ನಮ್ಮ ವಾಹನಗಳಿಗೂ ಕೆಲವು ವಾಸ್ತು ನಂಬಿಕೆಗಳಿವೆ.…