ಗಂಡ-ಹೆಂಡತಿ ಜಗಳಕ್ಕೆ ಪಲ್ಟಿಯಾದ ಕಾರು: ಹಲಸೂರು ಗೇಟ್ ಠಾಣೆ ಸಮೀಪವೇ ಘಟನೆ

Car Overturn
Published on

ಬೆಂಗಳೂರು: ಗಂಡ-ಹೆಂಡತಿ ಜಗಳಕ್ಕೆ ಕಾರು ಪಲ್ಟಿಯಾದ ಘಟನೆ ನಗರದ ಹಲಸೂರು ಗೇಟ್ ಪೊಲೀಸ್​ ಠಾಣೆಯ ಸಮೀಪ ನಿನ್ನೆ (ಜು.14) ರಾತ್ರಿ ನಡೆದಿದೆ.

ಐ 20 ಕಾರು ಮಾರುಕಟ್ಟೆ ಕಡೆಯಿಂದ ಬರುತ್ತಿತ್ತು. ಈ ವೇಳೆ ಕಾರಿನಲ್ಲಿಯೇ ಪತಿ-ಪತ್ನಿ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ತಾಳ್ಮೆ ಕಳೆದುಕೊಂಡ ಪತ್ನಿ ಡಿಢೀರನೇ ಕಾರಿನ ಸ್ಟೇರಿಂಗ್​ ಎಳೆದಿದ್ದು, ಪರಿಣಾಮ ಕಾರು ರಸ್ತೆಯಲ್ಲೇ ಪಲ್ಟಿ ಹೊಡೆದಿದೆ.

ದಂಪತಿ ಸಣ್ಣಪುಟ್ಟ ಗಾಯಗಳೊಂದಿಗೆ ಪರಾಗಿದ್ದಾರೆ. ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿರುವ ಶಂಕೆಯೂ ವ್ಯಕ್ತವಾಗಿದೆ. ಘಟನೆ ನಡೆದ ಕೂಡಲೇ ಸ್ಥಳಕ್ಕೆ ಹಲಸೂರು ಗೇಟ್ ಪೊಲೀಸರು ದೌಡಾಯಿಸಿದರು ಮತ್ತು ಪಲ್ಟಿಯಾಗಿದ್ದ ಕಾರನ್ನು ಸರಿಪಡಿಸಿ ದಂಪತಿಯನ್ನು ರಕ್ಷಣೆ ಮಾಡಿದರು.

ಹಲಸೂರು ಗೇಟ್ ಸಂಚಾರ ಪೊಲೀಸರು ಘಟನೆಯ ಬಗ್ಗೆ ದಂಪತಿಯ ವಿಚಾರಣೆ ನಡೆಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net