More

    ವ್ಯಾಜ್ಯಗಳ ಸೋಲಿನಿಂದ ಹೊರಬರಲು ಕಾನೂನು

    ಸರ್ಕಾರಿ ವ್ಯಾಜ್ಯಗಳನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಿಸಬೇಕು ಮತ್ತು ಬೇಗ ಇತ್ಯರ್ಥವಾಗಬೇಕು ಎಂಬ ಉದ್ದೇಶದಿಂದ ಸರ್ಕಾರ ಕಾನೂನು ಜಾರಿಗೊಳಿಸುತ್ತಿದೆ. ಕರ್ನಾಟಕ ಸರ್ಕಾರಿ ವ್ಯಾಜ್ಯಗಳ ನಿರ್ವಹಣೆ ವಿಧೇಯಕ- 2023 ಅನ್ನು ಶಾಸನ ಸಭೆಯಲ್ಲಿ ಮಂಡಿಸಲು ಗುರುವಾರ ನಡೆದ ಸಂಪುಟ ಸಭೆ ಅನುಮೋದನೆ ನೀಡಿದೆ.

    ಇತ್ತೀಚಿನ ವರ್ಷಗಳಲ್ಲಿಯೇ ವಿವಿಧ ನ್ಯಾಯಾಲಯಗಳಲ್ಲಿ ಅಂದಾಜು 1.85 ಲಕ್ಷ ಪ್ರಕರಣಗಳಲ್ಲಿ ರಾಜ್ಯ ಸರ್ಕಾರಕ್ಕೆ ಸೋಲಾಗಿದೆ. ಇದನ್ನು ಪರಿಗಣಿಸಿ, ವ್ಯಾಜ್ಯಗಳ ನಿರ್ವಹಣೆಯ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಸರ್ಕಾರಿ ವ್ಯಾಜ್ಯಗಳ ನಿರ್ವಹಣಾ ಕಾಯ್ದೆ ಜಾರಿ ಮಾಡಲು ನಿರ್ಧರಿಸಲಾಗಿದೆ.

    ಅನೇಕ ಪ್ರಕರಣಗಳಲ್ಲಿ ವ್ಯಾಜ್ಯಗಳಲ್ಲಿ ಉದ್ದೇಶಪೂರ್ವಕವಾಗಿ ತಪು್ಪ ನಡೆ ಇಡುವುದು, ಜಾಣ ಮೌನ, ಅತಿಯಾದ ಆಸಕ್ತಿ, ಉದ್ದೇಶಿತ ನಿರ್ಲಕ್ಷ್ಯ ಸೇರಿ ವಿವಿಧ ಕಾರಣಗಳಿಂದ ಸರ್ಕಾರಕ್ಕೆ ಸೋಲಾಗುತ್ತಿದೆ. ಪ್ರಮುಖವಾಗಿ ಅಧಿಕಾರಿ ವೃಂದ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಈ ರೀತಿ ಸೋಲಲು ಕಾರಣರಾಗುತ್ತಿದ್ದಾರೆ. ಯಾರು ಜವಾಬ್ದಾರಿ ತೆಗೆದುಕೊಳ್ಳಬೇಕೆಂಬ ಸ್ಪಷ್ಟತೆಯೂ ಇರುವುದಿಲ್ಲ. ಕಾಲಕಾಲಕ್ಕೆ ಸರ್ಕಾರದಿಂದ ಸೂಚನೆ, ಸುತ್ತೋಲೆ ಬಂದ ಸಂದರ್ಭದಲ್ಲಿಯೂ ಸಹ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಸೂಕ್ತ ಕಾನೂನಿನ ಮೂಲಕ ಚೌಕಟ್ಟನ್ನು ರೂಪಿಸಲಾಗುತ್ತಿದೆ.

    ದೊಡ್ಡ ಸಂಖ್ಯೆಯ ಪ್ರಕರಣಗಳಲ್ಲಿ ಹಿನ್ನಡೆಯಾಗಲು ಸರ್ಕಾರಿ ವ್ಯಾಜ್ಯ ನಿರ್ವಹಣೆಯಲ್ಲಿನ ಲೋಪವೇ ಕಾರಣವಾಗಿದ್ದು, ಇದನ್ನು ಸರಿಪಡಿಸಬೇಕಿದೆ. ಈ ನಿಟ್ಟಿನಲ್ಲಿ ಕಾಯ್ದೆ ಜಾರಿಗೊಳಿಸಲು ವಿಸõತ ಚರ್ಚೆಯಾಗಿದೆ. ಶಾಸನ ಸಭೆಯಲ್ಲಿ ಮಂಡನೆಯಾಗಿ ಪರ್ಯಾಲೋಚನೆಗೆ ಇಟ್ಟು ಶಾಸಕರಿಂದ ಅಭಿಪ್ರಾಯ ಪಡೆದು ಅಗತ್ಯವಾದುದನ್ನು ಸೇರಿಸಿ ಕಾಯ್ದೆ ಪೂರ್ಣ ಸ್ವರೂಪ ಪಡೆಯಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

    ಸಂಪುಟ ಸಭೆಯ ಇತರ ನಿರ್ಧಾರಗಳು

    • ಕೃಷಿ, ತೋಟಗಾರಿಕೆ ಉತ್ಪನ್ನಗಳ ಬೆಲೆ ಕುಸಿದಾಗ ಬೆಲೆಗಳ ಸ್ಥಿರೀಕರಣಕ್ಕಾಗಿ ಬೆಂಬಲ ಬೆಲೆ ನಿಗದಿಗೆ ಪರಿಶೀಲಿಸಲು ಸಂಪುಟ ಉಪ ಸಮಿತಿ ರಚನೆ.
    • ಬಯಲುಸೀಮೆ ಅಭಿವೃದ್ಧಿ ಮಂಡಳಿ (ತಿದ್ದುಪಡಿ) ವಿಧೇಯಕ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ (ತಿದ್ದುಪಡಿ) ವಿಧೇಯಕ ಮಂಡನೆಗೆ ಒಪ್ಪಿಗೆ.
    • 371(ಜೆ) ಅಡಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿರುವ ಪ್ರಯುಕ್ತ ಹೊರಡಿಸಲಾದ ಆದೇಶಗಳ ಅನುಷ್ಠಾನದ ಪ್ರಗತಿ ಪರಿಶೀಲನೆಗೆ ಸಂಪುಟ ಉಪ ಸಮಿತಿ ರಚನೆ.
    • ದಿ ಮೈಸೂರು ಲ್ಯಾಂಪ್ ವರ್ಕ್ಸ್ ಲಿಮಿಟೆಡ್​ನ ಮೌಲ್ಯಮಾಪನ ವಿಧಾನವನ್ನು ಯಥಾಸ್ಥಿತಿ ಎಂದು ಪರಿಷ್ಕರಿಸಲು ನಿರ್ಧಾರ.
    • ಬಜೆಟ್​ನಲ್ಲಿ ಕೈಗೊಂಡ ತೀರ್ವನದಂತೆ ಪಿಟಿಸಿಎಲ್ ಕಾಯ್ದೆ ತಿದ್ದುಪಡಿ ಸಂಬಂಧ ಚರ್ಚೆನಡೆದಿದ್ದು, ಕಾನೂನು ಇಲಾಖೆಯಿಂದ ಬಂದಿರುವ ಎರಡು ಅಭಿಪ್ರಾಯದಂತೆ ಸೋಮವಾರ ನಿರ್ಧರಿಸುವುದು.
    • ಕುಟೀರ ಜ್ಯೋತಿ ಫಲಾನುಭವಿಗಳು 43 ಯೂನಿಟ್​ಗಿಂತ ಹೆಚ್ಚು ಬಳಸುತ್ತಿಲ್ಲ, ಅವರಿಗೆ ಗೃಹಜ್ಯೋತಿಯಲ್ಲಿ ಗರಿಷ್ಠ 53 ಯೂನಿಟ್​ವರೆಗೆ ಬಳಸಲು ಅವಕಾಶ ನೀಡುವುದು.
    • ಸ್ವಚ್ಛ ಭಾರತ್ ಯೋಜನೆಯಡಿ ಕೊಳಚೆ ನೀರು ಶುದ್ಧೀಕರಣ ಸ್ಥಾವರಗಳನ್ನು ನಿರ್ವಿುಸಿ, ನಿರ್ವಹಣಾ ಜವಾಬ್ದಾರಿಯನ್ನು ಕೆಯುಆರ್​ಡಿಸಿಎಲ್​ಗೆ ವಹಿಸುವುದು.

    ಗೃಹಲಕ್ಷ್ಮಿಗೆ ಸೋನಿಯಾ, ಪ್ರಿಯಾಂಕಾ ಚಾಲನೆ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಗೆ ಪಕ್ಷದ ನಾಯಕಿ ಸೋನಿಯಾಗಾಂಧಿ ಹಾಗೂ ಪ್ರಿಯಾಂಕಾ ವಾಧ್ರಾ ಅವರಿಂದ ಚಾಲನೆ ಕೊಡಿಸಲು ಸರ್ಕಾರ ಉದ್ದೇಶಿಸಿದೆ. ಪ್ರತಿಪಕ್ಷಗಳ ನಾಯಕರ ಸಭೆ ಬೆಂಗಳೂರಿನಲ್ಲಿ ನಡೆಯುವ ಸಂದರ್ಭದಲ್ಲಿ ಯೋಜನೆಗೆ ಚಾಲನೆ ನೀಡಲು ಸಜ್ಜಾಗಿದೆ. ಜುಲೈ 16ರಿಂದ 18ರ ವರೆಗೆ ಬೆಂಗಳೂರಲ್ಲಿ ಪ್ರತಿಪಕ್ಷ ನಾಯಕರ ಸಭೆ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಪ್ರಿಯಾಂಕಾ ವಾಧ್ರಾ ಅರ್ಜಿ ಸ್ವೀಕಾರಕ್ಕೆ ಹಸಿರುನಿಶಾನೆ ತೋರುವರು.

    ಕೈದಿಗಳಿಗೆ ಬಿಡುಗಡೆ ಭಾಗ್ಯ: ರಾಜ್ಯದ ವಿವಿಧ ಕೇಂದ್ರ ಕಾರಾಗೃಹಗಳಲ್ಲಿರುವ 67 ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆಗೆ ಗೃಹ ಇಲಾಖೆಯಿಂದ ಮಾಡಲ್ಪಟ್ಟ ಶಿಫಾರಸಿಗೆ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಸಾಮಾನ್ಯವಾಗಿ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಕೈದಿಗಳನ್ನು ಬಿಡುಗಡೆ ಮಾಡುವುದು ಸಂಪ್ರದಾಯ. ಈ ಬಾರಿ 67 ಕೈದಿಗಳನ್ನು ಬಿಡುಗಡೆಗೆ ಯೋಗ್ಯರೆಂದು ಗುರುತಿಸಲಾಗಿದ್ದು, ರಾಜ್ಯಪಾಲರ ಒಪ್ಪಿಗೆ ಬಳಿಕ ಸರ್ಕಾರ ಬಿಡುಗಡೆ ಮಾಡಲಿದೆ.

    ರಾಜ್ಯದಲ್ಲಿ ಮತ್ತೆ ಮಳೆ ಬಿರುಸು; ಮೂರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್

    ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆಗೆ ದಿನಾಂಕ ಫಿಕ್ಸ್​; ಪ್ರಿಯಾಂಕ ಗಾಂಧಿ ಚಾಲನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts