

ಬೆಂಗಳೂರು: ಬರ್ತ್ಡೇ ಮುನ್ನಾ ದಿನ ಬಿಡುಗಡೆ ಆದ ‘ಯುವರತ್ನ’ ಚಿತ್ರದ ಡೈಲಾಗ್ ಟೀಸರ್ನಿಂದ ಖುಷಿಯಾಗಿದ್ದ ‘ಪವರ್ ಸ್ಟಾರ್’ ಪುನೀತ್ ರಾಜಕುಮಾರ್ ಅಭಿಮಾನಿಗಳಿಗೆ ಮಂಗಳವಾರ ‘ ಜೇಮ್ಸ್’ ಆ ಸಂತಸವನ್ನು ಮತ್ತಷ್ಟು ಹೆಚ್ಚಿಸಿದ್ದಾನೆ.
ಏಕೆಂದರೆ, ಪುನೀತ್ ಜನ್ಮದಿನವಾದ ಮಾ. 17ರಂದು ಅವರ ಹೊಸ ಚಿತ್ರ ‘ ಜೇಮ್ಸ್’ನ ಮೋಷನ್ ಪೋಸ್ಟರ್ ಬಿಡುಗಡೆ ಆಗಿದೆ. ಕಿಶೋರ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಕಿಶೋರ್ ಪತಿಕೊಂಡ ನಿರ್ಮಾಣ ಮಾಡುತ್ತಿರುವ ಹಾಗೂ ನಿರ್ದೇಶಕ ಚೇತನ್ ಕುಮಾರ್ ಆಕ್ಷನ್-ಕಟ್ ಹೇಳುತ್ತಿರುವ ‘ಜೇಮ್್ಸ’ ಚಿತ್ರದಲ್ಲಿ ಪುನೀತ್ ರಾಜಕುಮಾರ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ‘ಕಷ್ಟ ಬಂದಾಗ ಹೆದರೋರು ಕಾಮನ್, ಎಲ್ಲವನ್ನೂ ಎದುರಿಸಿ ಮುಂದೆ ನಿಲ್ಲೋನು ನಂಬರ್ ಒನ್ ...’ ಎಂಬ ಡೈಲಾಗ್ನೊಂದಿಗೆ ಆರಂಭವಾಗುವ ಈ ಮೋಷನ್ ಪೋಸ್ಟರ್ ‘ಬೋಲೊ ಬೋಲೋರೇ ಜೇಮ್್ಸ ...’ ಎಂಬ ರ್ಯಾಪ್ ಮಿಶ್ರಿತ ಹಾಡಿನ ತುಣುಕಿನೊಂದಿಗೆ ಪೂರ್ಣಗೊಳ್ಳುತ್ತದೆ. ವಾಹನಗಳ ಚೇಸ್ನಂಥ ದೃಶ್ಯ ಇರುವ ಈ ಮೋಷನ್ ಪೋಸ್ಟರ್ ಮೂಲಕ ‘ಜೇಮ್ಸ್’ ಚಿತ್ರತಂಡ ಪುನೀತ್ ರಾಜಕುಮಾರ್ಗೆ ಜನ್ಮದಿನದ ಶುಭಾಶಯಗಳನ್ನು ಕೋರಿದೆ.
ನಾಯಕಿಯ ಆಯ್ಕೆ ಇನ್ನಷ್ಟೇ ಘೋಷಣೆ ಆಗಬೇಕಿರುವ ಈ ಸಿನಿಮಾಗೆ ಚರಣ್ ರಾಜ್ ಸಂಗೀತ, ಶ್ರೀಶ ಕೂದುವಳ್ಳಿ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನವಿದೆ.