ಇದೀಗ, ರವೀನಾ ರಾಜಕೀಯಕ್ಕೆ ಸೇರುವ ಯೋಚನೆ ಇದೆ ಎಂದಿದ್ದಾರೆ. ಹೌದು, ನಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ನಡೆದ ಅಭಿಮಾನಿಗಳೊಟ್ಟಿಗಿನ ಒಂದು ಲೈವ್ ಸಂಭಾಷಣೆಯಲ್ಲಿ ಮಾತನಾಡಿದಾಗ, ರವೀನಾ ಅವರಿಗೆ ಅಭಿಮಾನಿಯೊಬ್ಬರು, ''ರಾಜಕೀಯದಲ್ಲಿ ಕರಿಯರ್ ನಿರ್ಮಿಸಿಕೊಳ್ಳುವ ಉದ್ದೇಶವಿದೆಯಾ? ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಆಗ, ನಟಿ ಲೀವ್ನಲ್ಲಿ ಈ ಪ್ರಶ್ನೆಗೆ, ''ಯಾವುದಕ್ಕೂ, ಯಾವತ್ತು ಇಲ್ಲ ಎಂದು ಹೇಳಬಾರದು. ಈ ಮೊದಲೇ ರಾಜಕೀಯ ಸೇರುವ ಬಗ್ಗೆ ಗಂಭೀರವಾಗಿ ಆಲೋಚಿಸಿದ್ದೆ. ಆಗ, ನನಗೆ ಹಲವು ರಾಜಕೀಯ ಪಕ್ಷಗಳ ಆಫರ್ ಸಹ ಬಂದಿತ್ತು. ಪಶ್ಚಿಮ ಬಂಗಾಳ, ಪಂಜಾಬ್, ಮುಂಬೈ ಗಳಲ್ಲಿ ಚುನಾವಣೆ ಟಿಕೆಟ್ ಕೂಡ ಅರಸಿ ಬಂದಿದ್ದವು. ಆದರೆ, ಆ ಸಮಯದಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಡಲು ರೆಡಿ ಇರಲಿಲ್ಲ. ಹೀಗಾಗಿ, ಅರಸಿ ಬಂದ ಅವಕಾಶಗಳನ್ನು ನಿರಾಕರಿಸುತ್ತಲೇ ಇದ್ದೆ'', ಎಂದು ನಟಿ ಉತ್ತರಿಸಿದ್ದಾರೆ.