ಚೆನೈ: ಕಾಲಿವುಡ್ನ ನಟ ದಳಪತಿ ವಿಜಯ್ ದಕ್ಷಿಣ ಭಾರತದ ಜನಪ್ರಿಯ ನಟರಲ್ಲಿ ಒಬ್ಬರಾಗಿದ್ದು, ಅವರು ಪಡೆದಿರುವ ಅಪಾರ ಅಭಿಮಾನಿ ಸಂಖ್ಯೆ ಬೇರೆ ನಟರಿಗೆ ಹೋಲಿಸಿದರೆ ತುಸು ಹೆಚ್ಚು ಎಂದೇ ಹೇಳಬೇಕು. ಹೀಗೆ, ಚಿತ್ರರಂಗದಲ್ಲಿ ತಮ್ಮ ಕಠಿಣ ಪರಿಶ್ರಮದಿಂದ ವಿಜಯ್ ಜನಪ್ರಿಯತೆಯನ್ನು ಗಳಿಸಿದ್ದರೂ, ಅವರ ತಂದೆ, ನಿರ್ದೇಶಕ ಎಸ್‌ಎ ಚಂದ್ರಶೇಖರ್ ಮಗನನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು, ನಟನ ಈ ಯಶಸ್ಸಿಗೆ ಅವರ ಹೆತ್ತವರ ಕೊಡುಗೆ ತುಂಬಾನೆ ಇದೆ ಎಂಬ ವಿಷಯ ಎಲ್ಲರಿಗೂ ಗೊತ್ತಿದೆ. ಹೀಗಿದ್ದರೂ, ನಟ ವಿಜಯ್ ಮತ್ತು ಅವರ ತಂದೆಯ ನಡುವಿನ ಇತ್ತೀಚಿನ ಕಾನೂನು ಘಟನೆಯು ಅವರ ಸಂಬಂಧವನ್ನು ಹದಗೆಡಿಸಿತು ಎಂಬುದು ಎಲ್ಲರಿಗೂ ನೋವುಂಟು ಮಾಡಿದೆ.