ಇನ್ನು, ನಟ ಧ್ರುವ ಸರ್ಜಾ ಅಭಿಮಾನಿಯನ್ನು ತಬ್ಬಿಕೊಂಡು ಗುರು ಅವರ ಸೈಕಲ್ ಜತೆ ಫೋಟೋವೊಂದನ್ನು ಸಹ ಕ್ಲಿಕ್ಕಿಸಿಕೊಂಡಿದ್ದಾರೆ. ಗುರು ಪ್ರಕಾಶ್ ಗೌಡ ಅವರ ಜತೆ ಮಾತಾಡುತ್ತಿರುವಾಗ ಕೆಲ ಹೊತ್ತು ಭಾವುಕರಾಗಿ ಸೈಕಲ್ಗೆ ಇರುವ ಅಪ್ಪು ಫೋಟೋವನ್ನು ಮುಟ್ಟಿದ್ದಾರೆ ನಟ ಧ್ರುವ ಸರ್ಜಾ. ಕೊನೆಯಲ್ಲಿ, ಗುರು ಅವರಿಗೆ ಧ್ರುವ ಒಂದು ಪ್ರೀತಿ ತುಂಬಿದ ಹೈಫೈ ಕೊಟ್ಟಿದ್ದು, ಈ ಅಭಿಮಾನಿಯ ಮುಂದಿನ 46,000 ಕಿಮೀ. ಪುನೀತ್ ಯಾತ್ರೆಗೆ ಶುಭಹಾರೈಸಿದ್ದಾರೆ.