Blue Origin : ವಿಶ್ವ ಉದ್ಯಮಿ ಜೆಫ್ ಬೆಜೋಸ್ ಒಡೆತನದ ಬ್ಲೂ ಆರಿಜಿನ್, ಬಾಹ್ಯಾಕಾಶ ಪ್ರವಾಸೋದ್ಯಮವನ್ನು ಉತ್ತೇಜಿಸುವತ್ತ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಸೋಮವಾರ (ಏಪ್ರಿಲ್ 14) ಮಹಿಳಾ ಸೆಲೆಬ್ರಿಟಿಗಳೊಂದಿಗೆ 11 ನಿಮಿಷಗಳ ಬಾಹ್ಯಾಕಾಶ ನಡಿಗೆಯನ್ನು ಯಶಸ್ವಿಯಾಗಿ ನಡೆಸಿದೆ.

ಬೆಜೋಸ್ ಅವರ ಭಾವಿ ಪತ್ನಿ ಲಾರೆನ್ ಸ್ಯಾಂಚೆಜ್, ಪ್ರಸಿದ್ಧ ಅಮೆರಿಕನ್ ಗಾಯಕಿ ಕೇಟಿ ಪೆರ್ರಿ, ಪತ್ರಕರ್ತೆ ಗೇಲ್ ಕಿಂಗ್, ಚಲನಚಿತ್ರ ನಿರ್ಮಾಪಕಿ ಕೆರಿಯನ್ ಫ್ಲಿನ್, ವಿಜ್ಞಾನಿ ಅಮಂಡಾ ನ್ಗುಯೆನ್ ಮತ್ತು ಮಾಜಿ ನಾಸಾ ಇಂಜಿನಿಯರ್ ಆಯೇಷಾ ಬೋವ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
✨ Weightless and limitless. pic.twitter.com/GQgHd0aw7i
— Blue Origin (@blueorigin) April 14, 2025
ಈ ಕಾರ್ಯಾಚರಣೆಯನ್ನು ಬ್ಲೂ ಆರಿಜಿನ್‌ನ ನ್ಯೂ ಲೆಪರ್ಡ್ ಬಾಹ್ಯಾಕಾಶ ನೌಕೆ NS-31 ನಿರ್ವಹಿಸಿತು. ಇದು ಏಪ್ರಿಲ್ 14ರಂದು ಪಶ್ಚಿಮ ಟೆಕ್ಸಾಸ್‌ನಿಂದ ಉಡಾವಣೆಯಾಯಿತು. ಬಳಿಕ ಈ ಬಾಹ್ಯಾಕಾಶ ನೌಕೆ 107 ಕಿಲೋಮೀಟರ್ ಎತ್ತರವನ್ನು ತಲುಪಿತು. ಇದು ಅಂತಾರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಬಾಹ್ಯಾಕಾಶ ಗಡಿಯಾದ ಕರ್ಮನ್ ರೇಖೆಯನ್ನು ಸಹ ದಾಟಿತು. ಅಲ್ಲಿ ಮಹಿಳೆಯರು ಬಾಹ್ಯಾಕಾಶದ ತೂಕವಿಲ್ಲದಿರುವಿಕೆಯ ಅನುಭವವನ್ನು ಆನಂದಿಸಿದರು. ಈ ಒಂದು ಕಾರ್ಯಾಚರಣೆಯು ಒಟ್ಟು 11 ನಿಮಿಷಗಳ ಕಾಲ ನಡೆಯಿತು. ನಂತರ ಬಾಹ್ಯಾಕಾಶ ನೌಕೆ ಭೂಮಿಗೆ ಮರಳಿತು. ಇದು ಬ್ಲೂ ಆರಿಜಿನ್‌ನ 11ನೇ ಮಾನವಸಹಿತ ಬಾಹ್ಯಾಕಾಶ ಯಾನವಾಗಿದೆ.
A smooth landing in West Texas.
Book your flight on New Shepard: https://t.co/RP3Lixyr4Y pic.twitter.com/xPiu9LMtlH
— Blue Origin (@blueorigin) April 14, 2025
ಬಾಹ್ಯಾಕಾಶ ನೌಕೆಯಲ್ಲಿದ್ದ ಮಹಿಳೆಯರು ಬಾಹ್ಯಾಕಾಶ ಪ್ರಯಾಣವನ್ನು ತುಂಬಾ ಆನಂದಿಸಿದರು. ತೂಕವಿಲ್ಲದ ಸ್ಥಿತಿಗೆ ಹೋದ ನಂತರ ಅವರೆಲ್ಲರೂ ಸಂತೋಷವನ್ನು ವ್ಯಕ್ತಪಡಿಸಿದರು. ಬಾಹ್ಯಾಕಾಶದಿಂದ ಭೂಮಿಗೆ ಮರಳಿದ ನಂತರ, ಅಮೆರಿಕನ್ ಗಾಯಕಿ ಕೇಟಿ ಪೆರ್ರಿ ಸಂತೋಷದಿಂದ ನೆಲಕ್ಕೆ ಮುತ್ತಿಟ್ಟರು. ಅವರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
REPLAY: A New Shepard tradition pic.twitter.com/dSexRmoZl7
— Blue Origin (@blueorigin) April 14, 2025
ಅಂದಹಾಗೆ, ಬ್ಲೂ ಆರಿಜಿನ್ ಅನ್ನು 2000 ಇಸವಿಯಲ್ಲಿ ಸ್ಥಾಪಿಸಲಾಯಿತು. ಇದು ಈ ಕಂಪನಿಯ 11ನೇ ಬಾಹ್ಯಾಕಾಶ ಯಾನವಾಗಿದೆ. ಯುನೈಟೆಡ್ ಸ್ಟೇಟ್ಸ್ ಸಂಪೂರ್ಣ ಮಹಿಳೆಯರೇ ಇರುವ ಬಾಹ್ಯಾಕಾಶ ಯಾನವನ್ನು ನಡೆಸುತ್ತಿರುವುದು ಇದೇ ಮೊದಲು. ಬ್ಲೂ ಆರಿಜಿನ್ 2021 ರಿಂದ ಬಾಹ್ಯಾಕಾಶ ಯಾನಗಳನ್ನು ನಡೆಸುತ್ತಿದೆ. ಇಲ್ಲಿಯವರೆಗೆ ಇದು ಒಟ್ಟು 10 ಕಾರ್ಯಾಚರಣೆಗಳನ್ನು ನಡೆಸಿದೆ ಮತ್ತು 52 ಜನರನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯಿದೆ. (ಏಜೆನ್ಸೀಸ್)
‘YOUR KISS IS COSMIC 🎶’
US pop star Katy Perry kissed the ground after returning to Earth following a flight aboard Blue Origin’s New Shepard NS-31. The rocket soared past the Kármán line—the internationally recognized boundary of space—before landing safely in Van Horn, West… pic.twitter.com/1PjjDWD2v4
— Philstar.com (@PhilstarNews) April 15, 2025
ಸತತ 5 ಸೋಲುಗಳ ಬಳಿಕ ಒಂದು ಗೆಲುವು… ಲಖನೌ ವಿರುದ್ಧ ಗೆದ್ದ ಬೆನ್ನಲ್ಲೇ ಧೋನಿ ಮಾಡಿದ ಕಾಮೆಂಟ್ ವೈರಲ್! MS Dhoni
ಈ 3 ನಕ್ಷತ್ರಗಳಲ್ಲಿ ಜನಿಸಿದ ಮಹಿಳೆಯರು ತಮ್ಮ ಜೀವನ ಸಂಗಾತಿಯನ್ನು ಹೆಚ್ಚು ಕಂಟ್ರೋಲ್ ಮಾಡುತ್ತಾರಂತೆ! Birth Stars