Birth Stars : ಹುಟ್ಟಿದ ತಕ್ಷಣ ಜನ್ಮ ದಿನಾಂಕ ಹಾಗೂ ಹುಟ್ಟಿದ ಗಳಿಗೆಯನ್ನು ಬರೆದಿಡಲಾಗುತ್ತದೆ. ಹಿಂದು ಧರ್ಮದಲ್ಲಿ ಈ ಜನ್ಮ ದಿನಾಂಕ ಮತ್ತು ಹುಟ್ಟಿದ ಗಳಿಗೆಯು ವ್ಯಕ್ತಿಯ ಜೀವನದ ಮೇಲೆ ಬಹಳ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ. ಹುಟ್ಟಿದ ದಿನ ಮತ್ತು ಗಳಿಗೆಯ ಆಧಾರದ ಮೇಲೆ ವ್ಯಕ್ತಿಯ ರಾಶಿ ಮತ್ತು ನಕ್ಷತ್ರಗಳನ್ನು ನಿರ್ಧರಿಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಒಬ್ಬ ವ್ಯಕ್ತಿಯ ಹುಟ್ಟಿದ ರಾಶಿಚಕ್ರ ಚಿಹ್ನೆ ಮತ್ತು ನಕ್ಷತ್ರವು ಆತನ ಭವಿಷ್ಯ ಜೀವನ ಮತ್ತು ವ್ಯಕ್ತಿತ್ವದ ಮೇಲೆ ಮಹತ್ವದ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ.

ಅಂದಹಾಗೆ ಒಬ್ಬ ವ್ಯಕ್ತಿಯ ಗುಣ, ನಡತೆ, ವರ್ತನೆ ಹಾಗೂ ಆತನ ಆಗು ಹೋಗುಗಳ ಹಿಂದೆ ಜನ್ಮ ನಕ್ಷತ್ರಗಳು ಕಾರಣವಾಗಿರುತ್ತದೆ. ಜನ್ಮ ನಕ್ಷತ್ರದ ಪ್ರಕಾರವಾಗಿ ಜೀವನದಲ್ಲಿ ಏನು ನಡೆಯಬೇಕೋ ಅದು ನಡದೇ ನಡೆಯುತ್ತದೆ ಎಂದು ಹಿರಿಯರು ಹೇಳುತ್ತಿರುತ್ತಾರೆ.
ನಿಮ್ಮ ಜನ್ಮ ನಕ್ಷತ್ರದ ಪ್ರಕಾರ ನಿಮ್ಮ ವ್ಯಕ್ತಿತ್ವ ಮತ್ತು ಭವಿಷ್ಯವನ್ನು ತಿಳಿದುಕೊಳ್ಳಬಹುದು. ಈ ಜನ್ಮ ನಕ್ಷತ್ರಗಳು ಪ್ರಭಾವ ಒಂದೇ ರೀತಿ ಇರುವುದಿಲ್ಲ. ಗ್ರಹಗಳ ಚಲನೆಯಿಂದಾಗಿ ಅವುಗಳ ಪ್ರಭಾವವೂ ಕೂಡ ಬದಲಾಗುತ್ತಿರುತ್ತದೆ. ಒಂದು ಸಮಯದಲ್ಲಿ ನೋವು ಅನುಭವಿಸಿದ್ದರೆ, ಇನ್ನೊಂದು ಸಮಯದಲ್ಲಿ ಸಂತೋಷದ ಕ್ಷಣಗಳನ್ನು ಅನುಭವಿಸುತ್ತೀರಿ.
ಅದೇ ರೀತಿ ಕೆಲವು ನಕ್ಷತ್ರಗಳಲ್ಲಿ ಜನಿಸಿದ ಮಹಿಳೆಯರು ಪ್ರೀತಿಯಲ್ಲಿರುವಾಗ ಮತ್ತು ಮದುವೆಯ ನಂತರ ತಮ್ಮ ಜೀವನ ಸಂಗಾತಿಯನ್ನು ಸಂಪೂರ್ಣವಾಗಿ ನಿಯಂತ್ರಿಸುವ ಪ್ರವೃತ್ತಿಯನ್ನು ಹೊಂದಿರುತ್ತಾರಂತೆ! ಹಾಗಾದರೆ, ಯಾವ ನಕ್ಷತ್ರಗಳಲ್ಲಿ ಜನಿಸಿದ ಮಹಿಳೆಯರು ತಮ್ಮ ಸಂಗಾತಿಗಳನ್ನು ನಿಯಂತ್ರಿಸುವಲ್ಲಿ ಹೆಚ್ಚು ನಿಪುಣರು ಎಂಬುದನ್ನು ನಾವೀಗ ತಿಳಿಯೋಣ.
ಅಶ್ವಿನಿ ನಕ್ಷತ್ರ
ಈ ನಕ್ಷತ್ರದಲ್ಲಿ ಜನಿಸಿದ ಮಹಿಳೆಯರು ಸ್ವಾಭಾವಿಕವಾಗಿ ಇತರರನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಪ್ರಭಾವ ಬೀರುವಂತಹ ಅವರ ಸ್ವಭಾವವು ಪ್ರಿಯಕರ ಅಥವಾ ಗಂಡನ ಕಡೆಗೆ ವಿಶೇಷವಾಗಿ ಸ್ಪಷ್ಟವಾಗಿರುತ್ತದೆ. ಈ ನಕ್ಷತ್ರದ ಮಹಿಳೆಯರು ಎಲ್ಲೇ ಇದ್ದರೂ ಅಲ್ಲಿ ಪ್ರಾಬಲ್ಯ ಸಾಧಿಸಲು ದೃಢನಿಶ್ಚಯ ಹೊಂದಿರುತ್ತಾರೆ.
ಉತ್ತರ ನಕ್ಷತ್ರ
ಉತ್ತರ ನಕ್ಷತ್ರದಲ್ಲಿ ಜನಿಸಿದ ಮಹಿಳೆಯರು ಸ್ವಾಭಾವಿಕವಾಗಿ ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ. ತಮ್ಮ ಮಾತನ್ನು ಕೇಳಲು ಸಿದ್ಧರಿರುವ ಜನರಿಗೆ ಮಾತ್ರ ಅವರು ಹತ್ತಿರವಾಗುತ್ತಾರೆ. ತಮ್ಮ ಜೀವನ ಸಂಗಾತಿಯ ಪ್ರತಿಯೊಂದು ಚಟುವಟಿಕೆಯಲ್ಲೂ ಈ ನಕ್ಷತ್ರದ ಮಹಿಳೆಯರು ಪ್ರಾಬಲ್ಯ ಹೊಂದಿರುತ್ತಾರೆ. ನಾನು ಹೇಳಿದ್ದೇ ಸರಿ ಎನ್ನುವ ಸ್ವಭಾವದಿಂದಲೇ ಅವರು ಎಲ್ಲದರಲ್ಲೂ ಪ್ರಭಾವ ಬೀರುತ್ತಾರೆ.
ಅನುರಾಧ ನಕ್ಷತ್ರ
ಈ ನಕ್ಷತ್ರದಲ್ಲಿ ಜನಿಸಿದ ಮಹಿಳೆಯರು ತಮ್ಮ ತೀವ್ರ ದಮನ ಮತ್ತು ಅಪರಿಮಿತ ಪ್ರೀತಿಗೆ ಹೆಸರುವಾಸಿಯಾಗಿರುತ್ತಾರೆ. ಪ್ರೇಮಿಯಾಗಿ, ಅವರು ತಮ್ಮ ಪ್ರೇಮಿಯ ಆಲೋಚನೆಗಳು ಮತ್ತು ಭಾವನೆಗಳನ್ನು ಆಳವಾಗಿ ಪರಿಶೀಲಿಸುತ್ತಾರೆ ಮತ್ತು ಎಲ್ಲ ವಿಷಯಗಳಲ್ಲಿ ತಮ್ಮ ಸಂಗಾತಿಯನ್ನು ನಿಯಂತ್ರಿಸುತ್ತಾರೆ. ಅವರ ಈ ಪ್ರಾಬಲ್ಯದ ಸ್ವಭಾವವು ಕೆಲವು ಸ್ಥಳಗಳಲ್ಲಿ ಅವರ ಯಶಸ್ಸಿಗೆ ಕಾರಣವಾಗಿದ್ದರೂ, ಅದು ಸಂಬಂಧಗಳಲ್ಲಿನ ಬಿರುಕುಗಳಿಗೂ ಕಾರಣವಾಗಬಹುದು.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ ವಿಜಯವಾಣಿ ಡಾಟ್ ನೆಟ್ ಸೈಟ್ ಜವಾಬ್ದಾರರಾಗಿರುವುದಿಲ್ಲ.
ಈ 3 ರಾಶಿಯವರು ಯಾವುದೇ ಸಂದರ್ಭದಲ್ಲೂ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದಿಲ್ಲ… ಏಕೆ ಗೊತ್ತಾ? Zodiac Signs