

Girls vs Boys : ಯುವಕರು ಮತ್ತು ಯುವತಿಯರ ನಡುವೆ ನಡೆದ ಜಗಳಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಘಟನೆ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ನಡೆದಿದೆ.
ಮೂವರು ಯುವಕರು ಮತ್ತು ಇಬ್ಬರು ಯುವತಿಯರ ನಡುವೆ ಜಗಳ ನಡೆದಿದೆ. ಪರಸ್ಪರ ಕೈಕೈ ಮಿಲಾಯಿಸಿರುವುದು ಮತ್ತು ಹಲ್ಲೆ ಮಾಡಲು ಬೆಲ್ಟ್‌ಗಳನ್ನು ಬಳಸಿರುವುದು ವಿಡಿಯೋದಲ್ಲಿ ನೋಡಬಹುದು. ಅಲ್ಲದೆ, ಇಬ್ಬರು ಹುಡುಗಿಯರು ಸೇರಿ ಓರ್ವ ಹುಡುಗನಿಗೆ ಕಾಲಿನಿಂದ ಒದೆಯುತ್ತಿರುವ ದೃಶ್ಯವೂ ಇದೆ. ಇಲ್ಲಿ ಯುವಕ ಕೂಡ ಪ್ರತಿದಾಳಿ ನಡೆಸಿದ್ದಾನೆ.
ಉತ್ತರಾಖಂಡದ ಡೆಹ್ರಾಡೂನ್‌ನ ಸಹಸ್ರಧರ್ ಪ್ರವಾಸಿ ತಾಣದಲ್ಲಿ ಯುವಕ-ಯುವತಿಯರ ನಡುವೆ ಘರ್ಷಣೆ ನಡೆದಿದೆ. ದಾಳಿಯ ಹಿಂದಿನ ಕಾರಣ ಏನು ಅಂತ ತಿಳಿದುಬಂದಿಲ್ಲ. ಆದರೆ, ಶನಿವಾರದಿಂದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿರುವ ಬೈಕ್ ಸಂಖ್ಯೆಗಳ ಆಧಾರದ ಮೇಲೆ, ರಾಜ್‌ಪುರ ಪ್ರದೇಶದ ಮೂವರನ್ನು ಭಾನುವಾರ ಬಂಧಿಸಲಾಗಿದೆ.
ಬಂಧಿತರನ್ನು ಪ್ರಮೋದ್ ಸಿಂಗ್, ಆಕಾಶ್ ಸಿಂಗ್ ಮತ್ತು ಗೌರವ್ ರಾವತ್ ಎಂದು ಗುರುತಿಸಲಾಗಿದೆ. ಬಂಧಿತರೆಲ್ಲರೂ 20 ವರ್ಷ ವಯಸ್ಸಿನವರಾಗಿದ್ದು, ಪೌರಿ ಗರ್ವಾಲ್ ಜಿಲ್ಲೆಯ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಈ ಘರ್ಷಣೆಗೆ ಕಾರಣ ಏನು ಎಂಬ ಮಾಹಿತಿಯನ್ನು ಪೊಲೀಸರು ಸಹ ನೀಡಿಲ್ಲ.
ಆದರೆ, ಈ ವಿಡಿಯೋ ನೋಡಿದ ನೆಟ್ಟಿಗರು ಯುವಕರನ್ನು ಬಂಧಿಸಿದ್ದೀರಿ ಸರಿ ಆದರೆ, ಯುವತಿಯರನ್ನು ಏಕೆ ಬಂಧಿಸಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ವಿಡಿಯೋದಲ್ಲಿ, ಯುವತಿಯರು ಕೂಡ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ ಅಲ್ಲವೇ? ಅವರನ್ನೂ ಬಂಧಿಸಬೇಕಿತ್ತು. ಇದು ಪಕ್ಷಪಾತ, ಇದ್ಯಾವ ರೀತಿಯ ನ್ಯಾಯವೆಂದು ಪ್ರಶ್ನಿಸುತ್ತಿದ್ದಾರೆ. ಆ ಯುವತಿಯರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ನೆಟ್ಟಿಗರು ಆಗ್ರಹಿಸುತ್ತಿದ್ದಾರೆ. (ಏಜೆನ್ಸೀಸ್)