blank

ಈ 3 ರಾಶಿಯವರು ಯಾವುದೇ ಸಂದರ್ಭದಲ್ಲೂ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದಿಲ್ಲ… ಏಕೆ ಗೊತ್ತಾ? Zodiac Signs

Zodiac Signs

Zodiac Signs : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು ಕೂಡ ಇದ್ದಾರೆ. ಪ್ರತಿಯೊಂದು ಕೆಲಸ, ಕಾರ್ಯಗಳನ್ನು ಮಾಡಬೇಕಾದರೂ ಜೋತಿಷ್ಯದ ಮೊರೆ ಹೋಗುತ್ತಾರೆ. ಏಕೆಂದರೆ, ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ದಿನಾಂಕ, ರಾಶಿ, ನಕ್ಷತ್ರ ಹಾಗೂ ಗ್ರಹಗಳ ಸ್ಥಾನ ಭವಿಷ್ಯದ ಜೀವನವನ್ನು ನಿರ್ಧರಿಸುತ್ತದೆ. ಅಲ್ಲದೆ, ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ.

blank

ಇಡೀ ಜ್ಯೋತಿಷ್ಯ ನಿಂತಿರುವುದು ಗ್ರಹಗಳ ಆಧಾರದ ಮೇಲೆ. ಏಕೆಂದರೆ, ಗ್ರಹಗಳ ಚಲನೆಯು ರಾಶಿಚಕ್ರ ಮತ್ತು ನಕ್ಷತ್ರಗಳ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿಯೇ ಏನಾದರೂ ನಡೆದರೆ ಎಲ್ಲದಕ್ಕೂ ಗ್ರಹಗತಿಗಳೇ ಕಾರಣ ಎಂದು ನಮ್ಮ ಹಿರಿಯರು ಹೇಳುವುದನ್ನು ಕೂಡ ನಾವು ನೋಡಿದ್ದೇವೆ. ಇದು ಬಹುತೇಕ ಸಂದರ್ಭಗಳಲ್ಲಿ ನಿಜವೂ ಆಗಿದೆ. ಹೀಗಾಗಿ ಜ್ಯೋತಿಷ್ಯವನ್ನು ಬಹುತೇಕ ಮಂದಿ ನಂಬುತ್ತಾರೆ. ಏನೇ ಕಹಿ ಘಟನೆ ನಡೆದರೆ ಅದಕ್ಕೆ ಜ್ಯೋತಿಷ್ಯದಲ್ಲಿ ಪರಿಹಾರ ಇದೆ ಎಂದು ಅನೇಕ ಮಂದಿ ನಂಬುತ್ತಾರೆ.

ಮನುಷ್ಯರು ತಪ್ಪು ಮಾಡುವುದು ಸಹಜ. ಆದರೆ, ಹೆಚ್ಚಿನ ಜನರು ತಮ್ಮ ತಪ್ಪುಗಳನ್ನು ಅರಿತುಕೊಂಡು ಉತ್ತಮ ಜೀವನ ನಡೆಸಲು ಪ್ರಾರಂಭಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದವರನ್ನು ಸರಿಪಡಿಸುವುದು ತುಂಬಾ ಸವಾಲಿನ ಕೆಲಸ ಎಂದು ಹೇಳಲಾಗಿದೆ. ಕಾರಣವೇನೆಂದರೆ ಅವರು ಯಾವುದೇ ಸಂದರ್ಭದಲ್ಲೂ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದಿಲ್ಲ. ಆ ರಾಶಿಚಕ್ರ ಚಿಹ್ನೆಗಳು ಯಾವುವು ಎಂಬುದನ್ನು ನಾವೀಗ ತಿಳಿಯೋಣ.

ಮೇಷ ರಾಶಿ

ಮೇಷ ರಾಶಿಯಲ್ಲಿ ಜನಿಸಿದ ಜನರು ತಮ್ಮ ಹಠಮಾರಿತನ ಮತ್ತು ಅಹಂಕಾರಕ್ಕೆ ಹೆಸರುವಾಸಿಯಾಗಿರುತ್ತಾರೆ. ಅವರು ಸ್ವಾಭಾವಿಕವಾಗಿಯೇ ಇತರರ ಬಗ್ಗೆ ಅಸಹಿಷ್ಣುತೆ ಹೊಂದಿರುತ್ತಾರೆ. ಇದರರ್ಥ ಅವರು ತಮ್ಮ ತಪ್ಪುಗಳನ್ನು ಇತರರ ಮುಂದೆ ಒಪ್ಪಿಕೊಂಡರೆ, ಅವರಿಗೆ ತಲೆಬಾಗಬೇಕಾಗುತ್ತದೆ. ಹೀಗಾಗಿ ಅವರು ಎಂದಿಗೂ ಯಾರ ಬಳಿಯೂ ಕ್ಷಮೆಯಾಚಿಸಲು ಬಯಸುವುದಿಲ್ಲ. ಆದ್ದರಿಂದ, ಅವರನ್ನು ಸರಿಪಡಿಸುವುದು ಅಸಾಧ್ಯ.

ಇದನ್ನೂ ಓದಿ: ಪ್ರಸಕ್ತ ಐಪಿಎಲ್​ನಲ್ಲಿ ಮೊದಲ ಸೋಲು… ಡೆಲ್ಲಿ ಕ್ಯಾಪಿಟಲ್ಸ್​ ನಾಯಕ ಅಕ್ಷರ್​ ಪಟೇಲ್ ಕಾಮೆಂಟ್​ ವೈರಲ್​! Axar Patel

ವೃಷಭ ರಾಶಿ

ವೃಷಭ ರಾಶಿಯಲ್ಲಿ ಜನಿಸಿದ ಜನರು ತಮ್ಮ ದೃಢನಿಶ್ಚಯ ಮತ್ತು ಹಠಮಾರಿ ಸ್ವಭಾವಕ್ಕೆ ಹೆಸರುವಾಸಿಯಾಗಿರುತ್ತಾರೆ. ತಾವು ಹೇಳುವುದು ಮತ್ತು ಮಾಡುವುದು ಸರಿ ಎಂದು ಸಾಬೀತುಪಡಿಸಲು ಅವರು ಯಾವುದೇ ಹಂತಕ್ಕೆ ಬೇಕಾದರೂ ಹೋಗುತ್ತಾರೆ. ನಾನು ಮಾಡಿದ್ದೇ ಸರಿ ಎನ್ನುವ ಅಹಂ ಭಾವ ಅವರಲ್ಲಿ ಇರುತ್ತದೆ. ತಮ್ಮ ತಪ್ಪುಗಳನ್ನು ಅರಿತುಕೊಂಡರು ಕೂಡ ಇತರರ ಮುಂದೆ ತಲೆಬಾಗಬೇಕಾಗುತ್ತದೆ ಎಂದು ಸಾರ್ವಜನಿಕವಾಗಿ ತಮ್ಮ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ.

ಸಿಂಹ ರಾಶಿ

ಸೂರ್ಯನ ಆಳ್ವಿಕೆಯಲ್ಲಿ ಜನಿಸಿದ ಸಿಂಹ ರಾಶಿಯವರು ಸ್ವಾಭಾವಿಕವಾಗಿಯೇ ಗಾಂಭೀರ್ಯ ಮತ್ತು ಹೆಮ್ಮೆಯಿಂದ ಕೂಡಿರುತ್ತಾರೆ. ಅವರು ಪ್ರಬಲ ವ್ಯಕ್ತಿತ್ವದೊಂದಿಗೆ ಜನಿಸಿರುವುದರಿಂದ, ಅವರು ಎಂದಿಗೂ ತಮ್ಮ ಹೆಮ್ಮೆಯನ್ನು ಕಳೆದುಕೊಳ್ಳಲು ಅಥವಾ ತಪ್ಪು ಮಾಡಿದ್ದೇನೆಂದು ಭಾವಿಸಲು ಬಯಸುವುದಿಲ್ಲ. ಅವರ ಈ ಸ್ವಭಾವವು ಅವರಿಗೆ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಲು ಎಂದಿಗೂ ಅವಕಾಶ ನೀಡುವುದಿಲ್ಲ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.

ಈ ದಿನಾಂಕಗಳಂದು ಜನಿಸಿದವರು ಇತರರನ್ನು ತಕ್ಷಣವೇ ತಮ್ಮತ್ತ ಆಕರ್ಷಿಸುತ್ತಾರೆ! Numerology

ಜೀನಿಯಸ್​ ಮಾತ್ರ ಈ ಫೋಟೋದಲ್ಲಿರುವ ಹಾವನ್ನು ಕೇವಲ 10 ಸೆಕೆಂಡಿ​ನಲ್ಲಿ ಪತ್ತೆಹಚ್ಚಬಲ್ಲರು! Optical Illusion Challenge

 

Share This Article

ದೇಹದ ಈ ಭಾಗಗಳ ಮೇಲೆ ಅಪ್ಪಿತಪ್ಪಿಯೂ ಟ್ಯಾಟೂ ಹಾಕಿಸಬೇಡಿ..ಅಪಾಯ ಖಂಡಿತ! Tattoo

Tattoo: ಇತ್ತೀಚಿನ ದಿನಗಳಲ್ಲಿ ಟ್ಯಾಟೂ ಹಾಕಿಸಿಕೊಳ್ಳುವುದು ಫ್ಯಾಷನ್  ಆಗಿದೆ. ಹುಡುಗರಿಂದ ಹಿಡಿದು ಹುಡುಗಿಯರವರೆಗೆ ಎಲ್ಲರೂ ತಮ್ಮ…

ಕಂಕುಳಲ್ಲಿರುವ ಕಪ್ಪು ಕಲೆ ಕಡಿಮೆಯಾಗಲು ಏನು ಮಾಡಬೇಕು? underarms

underarms: ಅನೇಕ ಹುಡುಗಿಯರು ಕಂಕುಳಲ್ಲಿನ ಕಪ್ಪು ಕಲೆಗಳನ್ನು ಹೋಗಲಾಡಿಸಲು  ಅನೇಕ ಪ್ರಯತ್ನ ಮಾಡುತ್ತಾರೆ. ಇದಕ್ಕಾಗಿ ಅವರು…

ಪ್ರತಿದಿನ ಒಂದು ಕಪ್ ಅರಿಶಿನ ಶುಂಠಿ ಚಹಾ ಕುಡಿದು ಈ ಎಲ್ಲಾ ಸಮಸ್ಯೆಗಳಿಗೆ ಗುಡ್​​ ಬಾಯ್​​ ಹೇಳಿ | Immunity

Immunity: ನಿಮ್ಮ ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾಗಿದ್ದರೆ, ಅಡುಗೆಮನೆಯಲ್ಲಿರುವ ಅರಿಶಿನ ಮತ್ತು ಶುಂಠಿ ಪದಾರ್ಥಗಳು ಅದನ್ನು…