ರಾಜ್ಯದಲ್ಲಿ ಭೀಕರ ಸರಣಿ ಹತ್ಯೆ: ಸತ್ಯಾಸತ್ಯತೆ ಪರಿಶೀಲನೆಗೆ ಬಿಜೆಪಿಯಿಂದ 2 ತಂಡಗಳ ರಚನೆ

Kamakumara Venugopal
ಜೈನಮುನಿ ಕಾಮಕುಮಾರ ನಂದಿ ಮಹಾರಾಜ, ಹಿಂದೂ ಕಾರ್ಯಕರ್ತ ವೇಣುಗೋಪಾಲ್.
Published on

ಬೆಂಗಳೂರು: ರಾಜ್ಯದಲ್ಲಿ ಜೈನಮುನಿ ಕಾಮಕುಮಾರ ನಂದಿ ಮಹಾರಾಜ ಹಾಗೂ ಬಿಜೆಪಿ ಕಾರ್ಯಕರ್ತ ವೇಣುಗೋಪಾಲ್ ಅವರ ಹತ್ಯೆಗೆ ಸಂಬಂಧಿಸಿದಂತೆ ಸತ್ಯಾಸತ್ಯತೆ ಪರಿಶೀಲನೆಗಾಗಿ ಬಿಜೆಪಿ ಎರಡು ತಂಡಗಳನ್ನು ರಚನೆ ಮಾಡಿದೆ.

ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಈ ತಂಡಗಳನ್ನು ರಚನೆ ಮಾಡಲಾಗಿದ್ದು, ಇದರಲ್ಲಿ ಒಂದು ತಂಡ ನಾಳೆ ಬೆಳಗಾವಿಗೆ ಹಾಗೂ ಇನ್ನೊಂದು ತಂಡ ಮೈಸೂರಿಗೆ ತೆರಳಿ ಪ್ರಕರಣದ ಕುರಿತು ಸತ್ಯಾಸತ್ಯತೆಗಳನ್ನು ಪರಿಶೀಲಿಸಿ ಮಾಹಿತಿ ಕಲೆ ಹಾಕಲಿವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್ ತಿಳಿಸಿದ್ದಾರೆ.

ಜೈನಮುನಿ ಕಾಮಕುಮಾರ ಸ್ವಾಮೀಜಿ ಹತ್ಯೆ ಸಂಬಂಧ ಸತ್ಯಾಸತ್ಯತೆ ಪರಿಶೀಲನಾ ತಂಡದ ನೇತೃತ್ವವನ್ನು ನಳಿನ್​ ಕುಮಾರ್ ಕಟೀಲ್ ಹಾಗೂ ಹಿಂದೂ ಕಾರ್ಯಕರ್ತ ವೇಣುಗೋಪಾಲ್​ ಹತ್ಯೆಯ ಸತ್ಯಾಸತ್ಯತೆ ಪರಿಶೀಲನಾ ತಂಡದ ನೇತೃತ್ವವನ್ನು ಸಿ.ಟಿ.ರವಿ ವಹಿಸಲಿದ್ದಾರೆ.

ಎರಡೂ ತಂಡಗಳ ವಿವರ ಇಂತಿದೆ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net