More

    ಹಿಂದೂಗಳು ಪೂಜೆ ಮಾಡಲು ಪೊಲೀಸ್​-ಬಿಬಿಎಂಪಿ ಅನುಮತಿ ಬೇಕೇ?: ವಿವಾದ ಸೃಷ್ಟಿಸಿದ್ದ ಪೊಲೀಸರ ನೋಟಿಸ್​​​ಗೆ ಯತ್ನಾಳ್​ ಪ್ರಶ್ನೆ

    ಬೆಂಗಳೂರು: ಕೆಂಪೇಗೌಡ ಬಸ್ ನಿಲ್ದಾಣದ ಸಮೀಪದ ಪುರಾತನ ನಾಗರಕಟ್ಟೆಗೆ ಪೂಜೆ ಸಲ್ಲಿಸಲು ಮುಂದಾಗಿದ್ದ ಸಂಕಲ್ಪ ಹಿಂದು ರಾಷ್ಟ್ರ ಸಂಘನೆಯ ಪುನೀತ್ ಕೆರೆಹಳ್ಳಿಗೆ ಪೊಲೀಸ್ ನೋಟಿಸ್ ಜಾರಿ ಮಾಡಿದ್ದಾರೆ. ನೋಟಿಸ್ ಎಲ್ಲೆಡೆ ವೈರಲ್ ಆಗುತ್ತಿದ್ದು, ಬಿಜೆಪಿ ಶಾಸಕರು ಸರ್ಕಾರ ಮತ್ತು ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಜುಲೈ 9ರ ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಸಂಕಲ್ಪ ಹಿಂದೂ ರಾಷ್ಟ್ರ ವತಿಯಿಂದ ಮೆಜೆಸ್ಟಿಕ್ ಬಳಿಯ ಬಿಬಿಎಂಪಿ ಮೈದಾನದ ಪಕ್ಕದಲ್ಲಿ ಇರುವ ಪುರಾತನ ನಾಗರಕಟ್ಟೆ ಬಳಿ ನಾಗ ದೇವರ ಪೂಜೆಯನ್ನು ಏರ್ಪಡಿಸಿದ್ದರು. ಪ್ರತಿಯೊಬ್ಬ ಹಿಂದೂ ಕಾರ್ಯಕರ್ತರು ಕುಟುಂಬ ಸಮೇತರಾಗಿ ಭಾಗವಹಿಸುವಂತೆ ಪುನೀತ್ ಕೆರೆಹಳ್ಳಿ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

    ಇದನ್ನೂ ಓದಿ: ಒಂದು ದಿನ ಕಳೆದ ಮೇಲೆ ಗೊತ್ತಾಯ್ತು ಜೋಡಿ ಕೊಲೆ!; ದಂಪತಿಯನ್ನು ಕೊಚ್ಚಿ ಬರ್ಬರ ಹತ್ಯೆ

    ಇದನ್ನು ಗಂಭೀರವಾಗಿ ಪರಿಗಣಿಸಿದ ಉಪ್ಪಾರಪೇಟೆ ಪೊಲೀಸರು, ಬಿಬಿಎಂಬಿ ಮೈದಾನದ ಪಕ್ಕದಲ್ಲಿ ಇರುವ ನಾಗರಕಟ್ಟೆಯ ಬಳಿ ಪೂಜೆಯನ್ನು ಮಾಡಲು ಸಂಬಂಧಪಟ್ಟ ಬಿಬಿಎಂಪಿ ಅಧಿಕಾರಿಗಳಿಂದ ಅನುಮತಿಯನ್ನು ಪಡೆದಿದ್ದಲ್ಲಿ ಅನುಮತಿ ಪತ್ರದ ಪ್ರತಿಯನ್ನು ನೀಡುವಂತೆ ನೋಟಿಸ್ ಕೊಟ್ಟಿದ್ದರು.

    ಇದನ್ನೂ ಓದಿ: ಯಥಾಸ್ಥಿತಿ ಕಾಪಾಡಿ, ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ: ಮದ್ಯಪಾನಪ್ರಿಯರ ಸಂಘದಿಂದ ಸರ್ಕಾರಕ್ಕೆ ಎಚ್ಚರಿಕೆ

    ಪೊಲೀಸರ ನೋಟಿಸ್‌ಗೆ ಬಿಜೆಪಿ ಶಾಸಕ ಬಸನಗೌಡ ಆರ್. ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಗರಕಟ್ಟೆಯ ಪೂಜೆ ಮಾಡುವ ಹಿಂದುಗಳಿಗೆ ನೋಟಿಸ್ ಜಾರಿ ಮಾಡಿರುವ ಪೊಲೀಸರು ಯಾರ ಕೈಗೊಂಬೆಯಾಗಿ ಕೆಲಸ ಮಾಡುತ್ತೀದ್ದಾರೆ ಎಂಬ ಸಂದೇಹ ಮೂಡಿಸಿದೆ. ಹಿಂದುಗಳು ರಾಜ್ಯದಲ್ಲಿ ಪೂಜೆ ಮಾಡಲು ಪೊಲೀಸರ ಮತ್ತು ಬಿಬಿಎಂಪಿ ಅನುಮತಿ ಪಡೆಯಬೇಕೇ ಎಂದು ಪ್ರಶ್ನೆ ಮಾಡಿದ್ದಾರೆ. ಇದೇ ರೀತಿ ಬಿಜೆಪಿ ಶಾಸಕರು ಮತ್ತು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ನಡುವೆಯೇ ಭಾನುವಾರ ನಾಗರಕಟ್ಟೆ ಪೂಜೆ ಸಹ ನರವೇರಿದೆ.

    ಹಿಂದೂಗಳು ಪೂಜೆ ಮಾಡಲು ಪೊಲೀಸ್​-ಬಿಬಿಎಂಪಿ ಅನುಮತಿ ಬೇಕೇ?: ವಿವಾದ ಸೃಷ್ಟಿಸಿದ್ದ ಪೊಲೀಸರ ನೋಟಿಸ್​​​ಗೆ ಯತ್ನಾಳ್​ ಪ್ರಶ್ನೆ

    ಅಪ್ಪ-ಅಮ್ಮ ಸ್ಥಳದಲ್ಲೇ ಸಾವು; ಮೂವರು ಮಕ್ಕಳು ಪ್ರಾಣಾಪಾಯದಿಂದ ಪಾರು!

    ಒಂದು ವರ್ಷದ ಅಂತರ.. ಅದೇ ಜಾಗ.. ಒಂದೇ ಥರದಲ್ಲಿ ಸಂಬಂಧಿಕರಿಬ್ಬರ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts