More

    ಬೆಂಗಳೂರಿನಲ್ಲಿ ಮತದಾನ: ಭದ್ರತೆಗೆ 13 ಸಾವಿರ ಪೊಲೀಸರ ಬಳಕೆ

    ಬೆಂಗಳೂರು: ಮತದಾನದ ದಿನ (ಏ.26) ಮತಗಟ್ಟೆಗಳ ಬಳಿ ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು 13 ಸಾವಿರಕ್ಕೂ ಹೆಚ್ಚು ಪೊಲೀಸ್ ಅಧಿಕಾರಿ/ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತಿದೆ. ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗಳ ಬಳಿ ಕೇಂದ್ರೀಯ ಸಶಸ ಪೊಲೀಸ್ ಪಡೆ (ಸಿಎಪಿಎಫ್) ಹಾಗೂ ನಾನ್ ಸಿಎಪಿಎಫ್ ತಂಡಗಳನ್ನು ನಿಯೋಜಿಸಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದರು.

    ಈವರೆಗೆ ರಾಜಧಾನಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಆದರೂ ಚುನಾವಣಾ ಸಂಬಂಧಿತ 152 ಅಪರಾಧ ಪ್ರಕರಣಗಳು ನಡೆದಿವೆ. ಇವುಗಳನ್ನು ಕಾನೂನು ವ್ಯಾಪ್ತಿಯಲ್ಲಿ ಕ್ರಮ ಜರುಗಿಸಲಾಗುತ್ತಿದೆ. ಮತದಾನ ನಡೆಯುವ 48 ಗಂಟೆ ಮುನ್ನ ಮತದಾರರಲ್ಲದವರು ಕ್ಷೇತ್ರ ಬಿಟ್ಟು ಅವರ ತವರು ಕ್ಷೇತ್ರಕ್ಕೆ ತೆರಳಬೇಕು. ಯಾರೂ ಕೂಡ ಗುಂಪು ಸೇರಲು ಅವಕಾಶವಾಗದಂತೆ ನಿಷೇಧಾಜ್ಞೆ ಹೊರಡಿಸಲಾಗಿದೆ. ನಾಗರಿಕರು ನಿರ್ಭೀತಿಯಿಂದ ಮತ ಚಲಾಯಿಸಲು ಅಗತ್ಯ ಕ್ರಮ ಕೈಗೊಂಡಿದ್ದು, ಪೊಲೀಸ್ ಸಹಯಾಕ್ಕಾಗಿ ಅಥವಾ ಚುನಾವಣಾ ಅಕ್ರಮಗಳ ಮಾಹಿತಿ ನೀಡಲು ಪೊಲೀಸ್ ಸಹಾಯವಾಣಿ 112ಅನ್ನು ಸಂಪರ್ಕಿಸಬಹುದು ಎಂದು ಅವರು ವಿನಂತಿಸಿದರು.

    ಪೊಲೀಸ್ ಸಿಬ್ಬಂದಿಗಳ ವಿವರ:
    * ಡಿಸಿಪಿ: 24
    * ಎಸಿಪಿ: 52
    * ಪಿಐ: 118
    * ಪಿಎಸ್‌ಐ/ಎಎಸ್‌ಐ: 687
    * ಪೇದೆ/ಮುಖ್ಯ ಪೇದೆ: 8,511
    * ಹೋಮ್ ಗಾರ್ಡ್ಸ್: 3,919
    * ಸಿವಿಲ್ ಡಿಫೆನ್ಸ್: 500
    * ಕೆಎಸ್‌ಆರ್‌ಪಿ/ಸಿಎಆರ್: 54
    * ಕೇಂದ್ರೀಯ ಪೊಲೀಸ್ ತುಕಡಿ: 11

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts