Exit Poll ಫಲಿತಾಂಶ ಸುಳ್ಳು, ಗದ್ದುಗೆ ಏರುವುದು ನಾವೇ ಎಂದ ಆಪ್​; ಸಮೀಕ್ಷೆಗಳು ಬದಲಾವಣೆಯ ಸೂಚನೆ ಎಂದ ಬಿಜೆಪಿ

AAP BJP

ನವದೆಹಲಿ: 70 ಸದಸ್ಯಬಲದ ದೆಹಲಿ ವಿಧಾನಸಭೆಗೆ ಇಂದು (ಫೆಬ್ರವರಿ 05) ಮತದಾನ ನಡೆದಿದ್ದು, ಬಹುತೇಕ ಎಕ್ಸಿಟ್ ಪೋಲ್ ವರದಿಗಳು (Exit Poll Results) ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದಿದ್ದು, ಬಿಜೆಪಿ ಪಾಳಯದಲ್ಲಿ ಚಟುವಟಿಕೆಳು ಗರಿಗೆದರಿವೆ. ಇನ್ನೂ ಕೆಲವು ಸಮೀಕ್ಷೆಗಳು ಎಎಪಿ ಪರ ಸಮೀಕ್ಷೆಯನ್ನು ಪ್ರಕಟಿಸಿದ್ದು, ಅಂತಿಮವಾಗಿ ಫೆಬ್ರವರಿ 08ರಂದು ಸ್ಪಷ್ಟ ಚಿತ್ರಣ ಹೊರಬೀಳಲಿದೆ.

ಇನ್ನೂ ಎಕ್ಸಿಟ್​ ವರದಿಯ ಕುರಿತಿ ಎಎಪಿ ಪ್ರತಿಕ್ರಿಯಿಸಿದ್ದು, ರಾಷ್ಟ್ರರಾಜಧಾನಿಯಲ್ಲಿ ಮೂರನೇ ಬಾರಿಗೆ ಗದ್ದುಗೆ ಏರುವ ವಿಶ್ವಾಸವನ್ನು ವ್ಯಕ್ತಪಡಿಸಿದೆ. ಇನ್ನೂ ಬಿಜೆಪಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಸಮೀಕ್ಷೆಗಳು ಬದಲಾವಣೆಯ ಸೂಚನೆಯಾಗಿರುವುದಾಗಿ ಹೇಳಿದೆ.

ಈ ಬಗ್ಗೆ ಪ್ರತ್ರಿಕ್ರಿಯಿಸಿರುವ ಎಎಪಿ ರಾಷ್ಟ್ರೀಯ ವಕ್ತಾರೆ ರೀನಾ ಗುಪ್ತಾ, ಮತಗಟ್ಟೆ ಸಮೀಕ್ಷೆಗಳು (Exit Poll Results) ಎಎಪಿಯನ್ನು ಕಡಿಮೆ ಅಂದಾಜು ಮಾಡಿವೆ. ಆದರೆ, ವಾಸ್ತವಿಕ ಫಲಿತಾಂಶಗಳಲ್ಲಿ, ಪಕ್ಷವು ಈ ಪ್ರಕ್ಷೇಪಗಳಿಗಿಂತ ಹಲವಾರು ಪಟ್ಟು ಹೆಚ್ಚು ಲಾಭ ಗಳಿಸಿದೆ. ಈ ಹಿಂದೆಯೂ ಪಕ್ಷವು ಮತಗಟ್ಟೆ ಸಮೀಕ್ಷೆಗಿಂತಲೂ ಉತ್ತಮ ಸಾಧನೆ ಮಾಡಿದೆ. 

Delhi Exit Poll

2013, 15 ಹಾಗೂ 20ರಲ್ಲಿ ಎಎಪಿ ಕಡಿಮೆ ಸ್ಥಾನಗಳನ್ನು ಗಳಿಸುತ್ತದೆ ಎಂದು ಮತಗಟ್ಟೆ ಸಮೀಕ್ಷೆಗಳು (Exit Poll Results) ಹೇಳಿದ್ದವು. ಆದರೆ. ಅದೆಲ್ಲವನ್ನು ಸುಳ್ಳು ಮಾಡಿ ನಾವು ಹೆಚ್ಚಿನ ಸ್ಥಾನವನ್ನು ಪಡೆದಿದ್ಧೇವೆ. ದೆಹಲಿಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಎಎಪಿಗೆ ಮತ ನೀಡಿದ್ದು, ಪಕ್ಷವು ಈ ಬಾರಿ ಐತಿಹಾಸಿಕ ಜಯ ಸಾಧಿಸಲಿದೆ. ಸತತ ನಾಲ್ಕನೇ ಬಾರಿಗೆ ನಾವೇ ಅಧಿಕಾರಕ್ಕೇರಲಿದ್ದೇವೆ ಎಂದು ಭವಿಷ್ಯ ನುಡಿದಿದ್ದಾರೆ.

ರಾಜ್ಯ ಬಿಜಪಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್​ದೇವ ಮಾತನಾಡಿ, ದೆಹಲಿಯ ಜನತೆ ಬದಲಾವಣೆ ಬಯಸುತ್ತಿದ್ದಾರೆ. ಭ್ರಷ್ಟಾಚಾರ ಮುಕ್ತ ಸರ್ಕಾರವನ್ನು ಎದುರು ನೋಡುತ್ತಿದ್ದಾರೆ. ಎಎಪಿ ನಡೆಸಿರುವ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಹೋರಾಡಲಿದೆ. 25 ವರ್ಷಗಳ ಬಳಿಕ ಬಿಜೆಪಿ ಪಕ್ಷವು ಸರ್ಕಾರವನ್ನು ರಚಿಸಲಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದ್ಧಾರೆ.

Champions Trophy ಬಳಿಕ ಏಕದಿನ ಮಾದರಿಗೆ ನಿವೃತ್ತಿ? Rohit Sharma ಹೇಳಿದ್ದಿಷ್ಟು

ಹೈ Heels ಕೊಡಿಸಲಿಲ್ಲವೆಂದು ಪತಿಯ ವಿರುದ್ಧ ಮುನಿಸು; ಪೊಲೀಸ್​ ಠಾಣೆ ಮೆಟ್ಟಿಲೇರಿದ ಪತ್ನಿ ಮಾಡಿದ್ದೇನು ನೀವೇ ನೋಡಿ

Share This Article

1 ರೂ. ಖರ್ಚು ಮಾಡದೆ ನಿಮ್ಮ ಕೂದಲು ದಪ್ಪವಾಗಿ, ಸೊಂಪಾಗಿ ಬೆಳೆಯಲು ಏನು ಮಾಡಬೇಕೆಂದು ನಿಮಗೆ ತಿಳಿದಿದೆಯೇ? Hair Tips

Hair Tips: ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕೂದಲು ಉದುರುವುದನ್ನು…

ಬೇಸಿಗೆಯಲ್ಲಿ ರಾತ್ರಿ ಪ್ರಯಾಣಿಸುತ್ತಿದ್ದೀರಾ? ಈ ವಿಷಯ ನೆನಪಿರಲಿ… traveling at night

traveling at night : ರಾತ್ರಿಯಲ್ಲಿ  ಹೆಚ್ಚಿನ ರಸ್ತೆಗಳು ಖಾಲಿಯಾಗಿರುತ್ತವೆ, ಸಂಚಾರ ಕಡಿಮೆ ಇರುತ್ತದೆ ಮತ್ತು ಪ್ರಯಾಣವನ್ನು…

ಮಾರ್ಚ್​ 29ರಂದು ಷಷ್ಠ ಗ್ರಹ ಕೂಟ… ಅಪ್ಪಿತಪ್ಪಿಯೂ ಆ ದಿನ ಈ ತಪ್ಪುಗಳನ್ನು ಮಾಡಬೇಡಿ! Shasta Graha Koota

Shasta Graha Koota : ಮಾರ್ಚ್ 29ರಂದು ಸೂರ್ಯಗ್ರಹಣ ಸಂಭವಿಸಲಿದೆ. ಅದೇ ದಿನ ಷಷ್ಠ ಗ್ರಹ…