ಶಿಮ್ಲಾ: ಇತ್ತೀಚಿಗೆ ಶಿಮ್ಲಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಿಮಾಚಲ ಪ್ರದೇಶ ಸಿಎಂ(CM) ಸುಖವಿಂದರ್ ಸಿಂಗ್ ಸುಖ್ ಅವರು ಕಾಡುಕೋಳಿ ಸೇವಿಸಿದ್ದಾರೆ ಎಂದು ಬಿಜೆಪಿ ಪಕ್ಷದ ನಾಯಕರು ಮತ್ತು ಪ್ರಾಣಿ ಹಕ್ಕುಗಳ ಗುಂಪು ಆರೋಪಿಸಿದ್ದು. ಸಿಎಂ ಹೊಸ ವಿವಾದಲ್ಲಿ ಸಿಲುಕೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಸಂಬಂಧ ಈ ಕುರಿತು ಸುದ್ದಿವಾಹಿನಿಯೊಂದಿಗೆ ಶನಿವಾರ ಮಾತನಾಡಿರುವ ಸಿಎಂ ಸುಖವಿಂದರ್ ಸಿಂಗ್, ಕಾರ್ಯಕ್ರಮದಲ್ಲಿ ಹಳ್ಳಿ ಜನರು ನನಗೆ ಕಾಡುಕೋಳಿ ನೀಡಿದ್ದರು. ಆದರೆ, ನಾನು ಅದನ್ನು ಸೇವಿಸಿಲ್ಲ ಎಂದು ಆರೋಪ ತಳ್ಳಿ ಹಾಕಿದ್ದಾರೆ.
”ನನಗೆ ಸ್ಥಳೀಯ ಗ್ರಾಮಸ್ಥರು ಕಂಟ್ರಿ ಕೋಳಿ(ದೇಸಿ)ಯನ್ನು ನೀಡುತ್ತಿದ್ದರು. ಆದರೆ, ನಾನ ಅದನ್ನು ಸೇವಿಸಿಲ್ಲ. ಈ ಬಗ್ಗೆ ಸುದ್ದಿವಾಹಿನಿಯೊಂದು ನಾನು ಕೋಳಿ ತಿಂದಿದ್ದೇನೆ ಎಂದು ಪ್ರಸಾರ ಮಾಡಿದೆ. ಗುಡ್ಡಗಾಡು ಪ್ರದೇಶದ ಜನರು ಸಾಮಾನ್ಯವಾಗಿ ಮಾಂಸಹಾರ ತಿನ್ನುತ್ತಾರೆ. ಅದು ಅವರ ಜೀವನದಲ್ಲಿ ಹಾಸುಹೊಕ್ಕಾಗಿದೆ. ಇದನ್ನು ಇಲ್ಲಿನ ಜೈರಾಮ್ ಠಾಕೂರ್, ನಾನು ಕಾಡುಕೋಳಿ ಸೇವೆನೆ ಮಾಡಿದ್ದೇನೆ ಎಂದು ವಿಡಿಯೋ ಮಾಡಿದ್ದಾರೆ. ಇವರು ಮಾಡುತ್ತಿರುವ ಆರೋಪ ಸುಳ್ಳು” ಎಂದಿದ್ದಾರೆ.
ಇದನ್ನೂ ಓದಿ: ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯೋಲ್ ಪದಚ್ಯುತಿ; ; ಸಂಸತ್ತಿನಲ್ಲಿ ಆಗಿದ್ದೇನು? | South Korea
ಸಿಎಂ ಊಟ ಮಾಡಿತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೇ ಇಟ್ಟುಕೊಂಡು ಬಿಜೆಪಿ ಮತ್ತು ಪ್ರಾಣಿ ಹಕ್ಕುಗಳ ಗುಂಪುಗಳ ಸದಸ್ಯರು ವ್ಯಾಪಕ ಖಂಡನೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಸಿಎಂ ಈ ಕೂಡಲೇ ಕ್ಷಮೆಯಾಚಿಸಬೇಕು ಜತೆಗೆ ಕಾಡುಕೋಳಿ ಭೇಟೆ ಮಾಡಿದವರ ವಿರುದ್ಧ ಕ್ರಮಕೈಕೊಳ್ಳಬೇಕು ಎಂದು ಒತ್ತಾಯಿಸಿದೆ.
ಇನ್ನು ನಮ್ಮ ದೇಶದಲ್ಲಿ ಅಪರೂಪದ ಪ್ರಾಣಿಗಳಲ್ಲಿ ಒಂದಾಗಿರುವ ಕಾಡಿನಕೋಳಿ(ಅರಣ್ಯ ಪ್ರದೇಶ ಕೋಳಿ)ಗಳನ್ನು ಕಾನೂನಿನಡಿಯಲ್ಲಿ ಸಂರಕ್ಷಿಸಲಾಗಿದೆ. ಈ ಕೋಳಿಗಳನ್ನು ಭೇಟಿ ಆಡುವುದು ನಿಷೇಧವಾಗಿದೆ. ಅದರೂ ಮುಖ್ಯಮಂತ್ರಿಗಳ ಔತಣಕೂಟದಲ್ಲಿ ಕಾಡುಕೋಳಿಯನ್ನು ಹೇಗೆ ಬಡಿಸಲಾಗಿತ್ತು ಎಂದು ಪ್ರಾಣಿ ಹಕ್ಕುಗಳ ಗುಂಪುಗಳು ಕಿಡಿಕಾರಿವೆ,(ಏಜೆನ್ಸೀಸ್)
ದೆಹಲಿಯ ಶಾಲೆಗಳಿಗೆ ವಾರದೊಳಗೆ ಮೂರನೇ ಬಾಂಬ್ ಬೆದರಿಕೆ; ವಿದ್ಯಾರ್ಥಿ ಬಂಧನ! | Bomb