ದೆಹಲಿಯ ಶಾಲೆಗಳಿಗೆ ವಾರದೊಳಗೆ ಮೂರನೇ ಬಾಂಬ್​ ಬೆದರಿಕೆ; ವಿದ್ಯಾರ್ಥಿ ಬಂಧನ! | Bomb

by (7)
Published on

ನವದೆಹಲಿ: ಇಲ್ಲಿನ ಆರು ಶಾಲೆಗಳಲ್ಲಿ ಬಾಂಬ್(Bomb)​ ಇರುವುದಾಗಿ ಕರೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ವಾರದೊಳಗೆ ದೆಹಲಿ ಶಾಲೆಗಳಿಗೆ ಬಾಂಬ್​ ಕರೆ ಬರುತ್ತಿರುವುದು ಇದು ಮೂರನೇ ಸಲ ಎಂದು ಎಂದು ವರದಿಯಾಗಿದೆ.

ಆರು ಶಾಲೆಗಳ ಪೈಕಿ ಒಂದು ಶಾಲೆಯ ತಮ್ಮದೇ ಸ್ಕೂಲ್​ ವಿದ್ಯಾರ್ಥಿ ಈ ಕೆಲಸ ಮಾಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಇನ್ನು ವಿದ್ಯಾರ್ಥಿಯನ್ನು ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆಯಲ್ಲಿ ಮಗು ತಪ್ಪು ಒಪ್ಪಿಕೊಂಡಿದೆ. ವಿದ್ಯಾರ್ಥಿಗೆ ಕೌನ್ಸಿಲಿಂಗ್​ ಮಾಡಲಾಗಿದೆ. ಇತನ ವರ್ತನೆ ಬಗ್ಗೆ ನಿಗಾ ಇಡುವಂತೆ ಪಾಲಕರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿ ಪ್ಲಬ್ಲಿಕ್​ ಸ್ಕೂಲ್​, ಆರ್​.ಕೆ.ಪುರಂನ ಶಾಲೆಗಳಿಗೆ ಶನಿವಾರ ಬೆಳಗ್ಗೆ 6.30ಕ್ಕೆ ಇಮೇಲ್​ ಮೂಲಕ ಕರೆ ಮಾಡಿರುವುದಾಗಿ ಆಗ್ನಿಶಾಮಕದಳು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆಗ್ನಿ ಶಾಮಕದಳ, ಸ್ಥಳೀಯ ಪೊಲೀಸರು, ಶ್ವಾನದಳ, ಬಾಂಬ್​ ಪತ್ತೆ ತಂಡಗಳು ಶಾಲೆಗೆ ಆಗಮಿಸಿ ಶೋಧ ಕಾರ್ಯಚರಣೆ ಮುಂದುವರೆಸಿವೆ. ಆದರೆ, ಶೋಧದಲ್ಲಿ ಯಾವುದೇ ಅನುಮಾನಸ್ಪದ ವಸ್ತುಗಳು ಕಂಡುಬಂದಿಲ್ಲ ಎಂದು ಮೂಲಗಳು ತಿಳಿಸಿವೆ.

''ನಮ್ಮನ್ನು ತಡೆಯುವ ನಿಮ್ಮ ಪ್ರಯತ್ನ ವಿಫಲವಾಗಲಿದೆ. ಪ್ರವಾದಿ ಮೊಹಮ್ಮದ್​​, ಮಕ್ಕಳನ್ನು ಅಲ್ಲಾಹುವಿನ ಪವಿತ್ರಾ ಜ್ವಾಲೆಯಲ್ಲಿ ಸುಡಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಕರೆ ಬಂದಿರುವ ಇಮೇಲ್​ ನಲ್ಲಿ ಉಲ್ಲೇಖಿಸಲಾಗಿದೆ'' ಎಂದು ಎಎನ್​​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

''ಶನಿವಾರದಂದು ಮಕ್ಕಳಿಲ್ಲದ ಸಮಯದಲ್ಲಿ ನಿಮ್ಮ ಶಾಲೆಗಳನ್ನು ನೆಲಸಮ ಮಾಡುವುದಾಗಿ, ನಮ್ಮ ಬಾಂಬ್​ ಇಡುವ ವಸ್ತ್ರಾಧಿಗಳನ್ನು ಪ್ರವಾದಿ ಮೊಹಮ್ಮದ್​ ಆರ್ಶಿರ್ವಾದಿಸಿದ್ದಾರೆ. ಅವರು ನಮ್ಮ ಕಾರ್ಯವನ್ನು ವಿಫಲಗೊಳಿಸುವುದಿಲ್ಲ. ನಮ್ಮ ಮಕ್ಕಳು ಅಲ್ಲಾಹುನ ಧೈರ್ಯಶಾಲಿ ಸೇವಕರು. ಇವರು ಈ ಕಾರ್ಯವನ್ನು ಪೂರ್ಣಗೊಳಿಸುತ್ತಾರೆ'' ಎಂದು ಉಲ್ಲೇಖಿಸಲಾಗಿದೆ,(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net