

ಹೈದರಾಬಾದ್: ಹೈದರಾಬಾದ್ ಸಂಧ್ಯಾ ಥಿಯೇಟರ್ನಲ್ಲಿ ಡಿಸೆಂಬರ್ 04ರಂದು ಸಂಭವಿಸಿದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ನಡೆದ ನಾಟಕೀಯ ಬೆಳವಣಿಗೆಯಲ್ಲಿ ನಟ ಅಲ್ಲು ಅರ್ಜುನ್ (Allu Arjun) ಬಂಧನಕ್ಕೊಳ್ಳಗಾಗಿ ಬಿಡುಗಡೆಯಾಗಿದ್ದು, ಈ ಘಟನೆ ಸಾಕಷ್ಟು ಖಂಡನೆಗೆ ಗುರಿಯಾಗಿದೆ ಹಲವರು ನಟ ಅಲ್ಲು ಅರ್ಜುನ್ ಅವರ ಬಂಧನವನ್ನು ಖಂಡಿಸಿದ್ದು, ಈ ಬಗ್ಗೆ ನಿರ್ದೇಶಕ ರಾಮ್ಗೋಪಾಲ್ ವರ್ಮಾ (Ram Gopal Varma) ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.
ಅಲ್ಲು ಅರ್ಜುನ್ ಬಂಧನಕ್ಕೆ ಸಂಬಂಧಿಸಿದಂತೆ ನಾಲ್ಕು ಪ್ರಶ್ನೆಗಳನ್ನು ಟ್ವೀಟ್ ಮಾಡಿ ಪೊಲೀಸರನ್ನು ಪ್ರಶ್ನಿಸಿದ್ದಾರೆ. ಕುಂಭಮೇಳಗಳು ಅಥವಾ ಬ್ರಹ್ಮೋಸ್ತವಗಳಂತಹ ಸ್ಥಳಗಳಲ್ಲಿ ಕಾಲ್ತುಳಿತ ಉಂಟಾದ ಸಂದರ್ಭದಲ್ಲಿ ದೇವರನ್ನು ಬಂಧಿಸಲಾಗುತ್ತದೆಯೇ. ಸಭೆ ಅಥವಾ ಸಮಾವೇಶಗಳಲ್ಲಿ ಕಾಲ್ತುಳಿತ ಉಂಟಾದಾಗ ರಾಜಕೀಯ ನಾಯಕರನ್ನು ಬಂಧಿಸಲಾಗುತ್ತದೆತೇ. ಕಾರ್ಯಕ್ರಮಗಳಲ್ಲಿ ಕಾಲ್ತುಳಿತ ಸಂಭವಿಸಿದಲ್ಲಿ, ನಾಯಕ ಮತ್ತು ನಾಯಕಿಯರನ್ನು ಬಂಧಿಸಲಾಗುತ್ತದೆಯೇ. ಪೊಲೀಸರು ಮತ್ತು ಸಂಘಟಕರನ್ನು ಹೊರತುಪಡಿಸಿ, ಕಾಲ್ತುಳಿತವನ್ನು ಯಾರು ನಿಯಂತ್ರಿಸಬಹುದು ಎಂದು ಟ್ವೀಟ್ ಮಾಡಿ ಪ್ರಶ್ನಿಸುವ ಅಲ್ಲು ಅರ್ಜುನ್ರನ್ನು ಬಂಧಿಸಿರುವ ಕ್ರಮವನ್ನು ಖಂಡಿಸಿದ್ದಾರೆ.
ಶುಕ್ರವಾರ (ಡಿಸೆಂಬರ್ 13) ನಡೆದ ನಾಟಕೀಯ ಬೆಳವಣಿಗೆಯಲ್ಲಿ ನಟ ಅಲ್ಲು ಅರ್ಜುನ್ರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ ಚಿಕ್ಕಡಪಲ್ಲಿ ಠಾಣೆಯ ಪೊಲೀಸರು ಸ್ಥಳೀಯ ಕೋರ್ಟ್ಗೆ ಹಾಜರುಪಡಿಸಿದ್ದು, ಕೋರ್ಟ್ ಅವರಿಗೆ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ನಂತರ ಅವರನ್ನು ಚಂಚಲಗುಡ ಜೈಲಿಗೆ ಕರೆತರಲಾಗಿತ್ತು. ಬಳಿಕ, ತೆಲಂಗಾಣ ಹೈಕೋರ್ಟ್ ಸಂಜೆಯ ಹೊತ್ತಿಗೆ ನಾಲ್ಕು ವಾರಗಳ ಮಧ್ಯಂತರ ಜಾಮೀನನ್ನು ಮಂಜೂರು ಮಾಡಿತು.
ಚಂಚಲಗೂಡ ಜೈಲಿನಿಂದ ಬಿಡುಗಡೆಯಾದ ನಟ ಅಲ್ಲು ಅರ್ಜುನ್ಗೆ ಭರ್ಜರಿ ವೆಲ್ಕಮ್ ದೊರೆತಿದೆ. ಆಕಸ್ಮಿಕವಾಗಿಯೇ ಈ ಒಂದು ಘಟನೆ ನಡೆದಿದೆ. ಆದರೂ ನಾನು ಕ್ಷಮೆ ಕೇಳುತ್ತೇನೆ. ಮೃತ ಮಹಿಳೆಯ ಕುಟುಂಬಕ್ಕೆ ನಾನು ಮನಸಾರೆ ಕ್ಷಮೆ ಕೇಳುತ್ತೇನೆ ಅಂತಲೇ ಅಲ್ಲು ಅರ್ಜುನ್ ಹೇಳಿದ್ದಾರೆ. ಇದಲ್ಲದೆ ಮೃತ ಮಹಿಳೆ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದ್ದರು. ಇದಲ್ಲದೆ ಮಕ್ಕಳ ಶಿಕ್ಷಣ ಸೇರಿದಂತೆ ಆರ್ಥಿಕ ಸಹಾಯವನ್ನು ಮಾಡುವುದಾಗಿಯೂ ನಟ ವಿಡಿಯೋ ಸಂದೇಶದ ಮೂಲಕ ತಿಳಿಸಿದ್ದರು. ಆದರೆ, ಘಟನೆ ಸಂಬಂಧ ಪೊಲೀಸರು ನಟ ಅಲ್ಲು ಅರ್ಜುನ್ರನ್ನು (Allu Arjun) ಪೊಲೀಸರು ಬಂಧಿಸಿದ್ದಾರೆ.