ಸಿಯೋಲ್: ದಕ್ಷಿಣ ಕೊರಿಯಾದ(South Korea)ಶಾಸಕರು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಶನಿವಾರ(ಡಿಸೆಂಬರ್ 14) ಅಧ್ಯಕ್ಷ ಯೂನ್ ಸುಕ್ ಯೋಲ್ ವಿರುದ್ಧ ದೋಷಾರೋಪಣೆ ನಿರ್ಣಯವನ್ನು ಅನುಮೋದಿಸಿದರು. ಕಳೆದ ವಾರ ಸಮರ ಕಾನೂನನ್ನು ಹೇರುವ ಪ್ರಯತ್ನದಲ್ಲಿ ಅಧ್ಯಕ್ಷರು ವಿಫಲವಾದ ನಂತರ ಈ ದೋಷಾರೋಪಣೆಯನ್ನು ತರಲಾಯಿತು.
ಇದನ್ನು ಓದಿ: ಹಿಜಾಬ್ ಇಲ್ಲದೆ ಆನ್‌ಲೈನ್ ಕನ್ಸರ್ಟ್‌ನಲ್ಲಿ ಪ್ರದರ್ಶನ; ಗಾಯಕಿಗೆ ಇರಾನ್ ನ್ಯಾಯಾಂಗ ಹೇಳಿದ್ದೇನು? | Iran
300 ಸಂಸದರ ಪೈಕಿ 204 ಮಂದಿ ಅಧ್ಯಕ್ಷರ ವಿರುದ್ಧ ಮಹಾಭಿಯೋಗದ ಪರವಾಗಿ ಮತ ಹಾಕಿದರೆ, 85 ಮಂದಿ ವಿರೋಧಿಸಿದರು. ಮೂವರು ಸಂಸದರು ಮತದಾನದಿಂದ ದೂರ ಉಳಿದರು. ಈ ಅವಧಿಯಲ್ಲಿ ಎಂಟು ಮತಗಳನ್ನು ಅಸಿಂಧು ಎಂದು ಘೋಷಿಸಲಾಯಿತು. ದೋಷಾರೋಪಣೆ ಆರೋಪದಲ್ಲಿ ಅಧ್ಯಕ್ಷರ ವಿರುದ್ಧ ದಂಗೆ ಮತ್ತು ಸಾಂವಿಧಾನಿಕ ಕರ್ತವ್ಯಗಳ ಉಲ್ಲಂಘನೆ ಎಂದು ಆರೋಪಿಸಲಾಗಿದೆ.
ಈಗ ಈ ವಿಷಯ ನ್ಯಾಯಾಲಯಕ್ಕೆ ಹೋಗಲಿದ್ದು, ಅಲ್ಲಿ ದೋಷಾರೋಪಣೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಅವರನ್ನು ಪುನಃ ಅಧ್ಯಕ್ಷರನ್ನಾಗಿ ಮಾಡಬೇಕೇ ಅಥವಾ ತೆಗೆದುಹಾಕಬೇಕೆ ಎಂಬುದರ ಕುರಿತು ಈಗ ಸಾಂವಿಧಾನಿಕ ನ್ಯಾಯಾಲಯವು ನಿರ್ಧರಿಸುತ್ತದೆ. ಈ ನಿರ್ಧಾರವನ್ನು ಆರು ತಿಂಗಳೊಳಗೆ ನಿರೀಕ್ಷಿಸಲಾಗಿದೆ. ಈ ಬೆಳವಣಿಗೆ ದಕ್ಷಿಣ ಕೊರಿಯಾ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಯೂನ್ ಸುಕ್ ಯೋಲ್ ವಿರುದ್ಧ ನ್ಯಾಯಾಲಯ ತೀರ್ಪು ನೀಡಿದರೆ, ಅವರು ದಕ್ಷಿಣ ಕೊರಿಯಾದ ಇತಿಹಾಸದಲ್ಲಿ ದೋಷಾರೋಪಣೆಗೆ ಒಳಗಾದ ಎರಡನೇ ಅಧ್ಯಕ್ಷರಾಗುತ್ತಾರೆ. ಈ ನಿರ್ಧಾರ 60 ದಿನಗಳಲ್ಲಿ ಅಧ್ಯಕ್ಷೀಯ ಚುನಾವಣೆಯನ್ನು ಪ್ರಚೋದಿಸುತ್ತದೆ. ಸದ್ಯ ಯೂನ್ ಸುಕ್ ಯೋಲ್ ಅವರ ಅಧ್ಯಕ್ಷೀಯ ಅಧಿಕಾರಗಳು ಮತ್ತು ಕರ್ತವ್ಯಗಳನ್ನು ಅಮಾನತುಗೊಳಿಸಲಾಗಿದೆ. ಪ್ರಧಾನಿ ಹಾನ್ ಡಕ್-ಸೂ ಅವರು ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಯೂನ್ ಸುಕ್-ಯೋಲ್ ತುರ್ತು ಮಿಲಿಟರಿ ಕಾನೂನನ್ನು (ಸಮರ ಕಾನೂನು) ಹೇರುವುದಾಗಿ ಮಂಗಳವಾರ(ಡಿಸೆಂಬರ್ 3) ಘೋಷಿಸಿದರು. ದೇಶದ ಪ್ರತಿಪಕ್ಷಗಳು ಸಂಸತ್ತನ್ನು ನಿಯಂತ್ರಿಸುತ್ತಿವೆ ಹಾಗೂ ಉತ್ತರ ಕೊರಿಯಾದ ಬಗ್ಗೆ ಸಹಾನುಭೂತಿ ತೋರುತ್ತಿವೆ. ರಾಜ್ಯ ವಿರೋಧಿ ಚಟುವಟಿಕೆಗಳ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸುತ್ತಿವೆ ಎಂದು ಅವರು ಆರೋಪಿಸಿದ್ದರು.(ಏಜೆನ್ಸೀಸ್)
ಇಂದಿರಾ ಗಾಂಧಿ ಅವರ ‘ತುರ್ತುಪರಿಸ್ಥಿತಿ’ ಸಮರ್ಥಿಸಿಕೊಂಡ Priyanka Gandhi ; ಲೋಕಸಭೆಯ ಮೊದಲ ಭಾಷಣದಲ್ಲಿ ಹೇಳಿದ್ದೇನು?