ಟೆಹ್ರಾನ್: ಮಹಿಳೆಯರಿಗೆ ಇರಾನ್‌ನಲ್ಲಿ(Iran) ಕಟ್ಟುನಿಟ್ಟಾದ ಡ್ರೆಸ್ ಕೋಡ್ ಇರುವುದು ಗೊತ್ತೆ ಇದೆ. ಆದರೆ ಅದನ್ನು ಉಲ್ಲಂಘಿಸಿ ಹಿಜಾಬ್ ಧರಿಸದೆ ಆನ್‌ಲೈನ್ ಕನ್ಸರ್ಟ್‌ನಲ್ಲಿ ಪ್ರದರ್ಶನ ನೀಡಿದ ಇರಾನ್ ಗಾಯಕಿ ಪರಸ್ಟೂ ಅಹ್ಮದಿ ಅವರು ಕಾನೂನು ಕ್ರಮವನ್ನು ಎದುರಿಸುತ್ತಿದ್ದಾರೆ. ಯೂಟ್ಯೂಬ್‌ನಲ್ಲಿ ಪ್ರಸಾರವಾದ ಸಂಗೀತ ಕಚೇರಿಯಲ್ಲಿ ಭಾಗವಹಿಸಿದ್ದ ಅಹ್ಮದಿ ಮತ್ತು ಅವರ ಟೀಂ ಸದಸ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇರಾನ್ ನ್ಯಾಯಾಂಗವು ಘೋಷಿಸಿದೆ.
ಕಾರ್ಯಕ್ರಮದಲ್ಲಿ ಗಾಯಕಿ ಪರಸ್ಟೂ ಅಹ್ಮದಿ ಜತೆ ಮೂವರಿರುವ ಬ್ಯಾಂಡ್ನೊಂದಿಗೆ ನೀಡಿದ ಪ್ರದರ್ಶನವನ್ನು ಇರಾನ್‌ನಲ್ಲಿ ಸಾಂಪ್ರದಾಯಿಕ ಕಾರವಾನ್‌ಸೆರೈನಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇರಾನಿನ ಕಾನೂನಿನ ಪ್ರಕಾರ, ಮಹಿಳೆಯರು ಸಾರ್ವಜನಿಕವಾಗಿ ತಮ್ಮ ಕೂದಲನ್ನು ಮುಚ್ಚಿಕೊಳ್ಳಬೇಕಾಗುತ್ತದೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಏಕವ್ಯಕ್ತಿ ಹಾಡುವುದನ್ನು ನಿಷೇಧಿಸಲಾಗಿದೆ.
ಆದರೆ ಪರಸ್ಟೂ ಅಹ್ಮದಿ ಅವರು ಸ್ಲೀವ್ಲೆಸ್ ಬ್ಲಾಕ್ ಡ್ರೆಸ್ ಹಾಕಿದ್ದು, ಹಿಜಾಬ್ ಅನ್ನು ಧರಿಸಿಲ್ಲ. ಅಲ್ಲದೆ ತಮ್ಮ ಯೂಟ್ಯೂಬ್ ವಿಡಿಯೋದಲ್ಲಿ, ನಾನು ಪರಸ್ಟೂ, ಮೌನವಾಗಿರಲು ಸಾಧ್ಯವಾಗದ ಮತ್ತು ತಾನು ಪ್ರೀತಿಸುವ ದೇಶಕ್ಕಾಗಿ ಹಾಡುವುದನ್ನು ನಿಲ್ಲಿಸಲು ನಿರಾಕರಿಸುವ ಹುಡುಗಿ. ಮುಕ್ತ ಹಾಗೂ ಸುಂದರ ರಾಷ್ಟ್ರದ ಕನಸನ್ನು ನನ್ನ ಕಾಲ್ಪನಿಕ ಸಂಗೀತ ಕಚೇರಿಯಲ್ಲಿನ ನನ್ನ ಧ್ವನಿಯನ್ನು ಆಲಿಸಿ ಎಂಬ ಸಂದೇಶವನ್ನು ನೀಡಿದ್ದಾರೆ. ಕಾನೂನು ಮತ್ತು ಧಾರ್ಮಿಕ ಮಾನದಂಡಗಳನ್ನು ಅನುಸರಿಸದೆ ಕನ್ಸರ್ಟ್‌ನಲ್ಲಿ ಪ್ರದರ್ಶನ ನೀಡಿದ ಮಹಿಳಾ ಗಾಯಕಿ ನೇತೃತ್ವದ ಗುಂಪಿನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಕೋರ್ಟ್ ಹೇಳಿದೆ. (ಏಜೆನ್ಸೀಸ್)
ರೈಲಿನ ಇಂಜಿನ್‌ನ ಛಾವಣಿಯ ಮೇಲೆ ಮಲಗಿ ಪ್ರಯಾಣಿಸಿದ ವ್ಯಕ್ತಿ; Viral Video ನೋಡಿ ನೆಟ್ಟಿಗರು ಹೇಳಿದ್ದು ಹೀಗೆ…