ಸಲ್ಮಾನ್​ ಖಾನ್​ ಮಾತ್ರವಲ್ಲ ಬಿಷ್ಣೋಯ್ ಗ್ಯಾಂಗ್​ನ ಮುಂದಿನ ಟಾರ್ಗೆಟ್​ ಈ ಖ್ಯಾತ ಕಾಮಿಡಿಯನ್​! Bishnoi gang

Bishnoi gang

ಮುಂಬೈ: ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ಎನ್​ಸಿಪಿ ನಾಯಕ ಬಾಬಾ ಸಿದ್ದಿಕ್​ ಅವರ ಹತ್ಯೆ ಮುಂಬೈ ಜನತೆಯನ್ನೇ ಆಘಾತಕ್ಕೆ ದೂಡಿದೆ. ದೇಶದ ರಾಜಕಾರಣದಲ್ಲೂ ಭಾರಿ ಚರ್ಚೆಗೆ ಕಾರಣವಾಗಿದೆ. ಮಾಜಿ ಸಚಿವರನ್ನೇ ಬರ್ಬರವಾಗಿ ಹತ್ಯೆ ಮಾಡಿರುವಾಗ ಸಾಮಾನ್ಯ ಜನರ ಗತಿ ಏನು ಎಂದು ಚಿಂತಿಸುತ್ತಿದ್ದಾರೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಮೇಲಿರುವ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​ನ ( Bishnoi gang ) ದ್ವೇಷವೇ ಬಾಬಾ ಸಿದ್ದಿಕ್​ ಅವರ ಹತ್ಯೆಗೆ ಪ್ರಮುಖ ಕಾರಣ ಎಂಬುದು ಪೊಲೀಸ್​ ತನಿಖೆಯಲ್ಲಿ ತಿಳಿದುಬಂದಿದೆ. ಅಲ್ಲದೆ, ಸಲ್ಮಾನ್​ಗೆ ಆಪ್ತರಾಗಿರುವವರು ಕೂಡ ಬಿಷ್ಣೋಯ್ ಗ್ಯಾಂಗ್​ನ ಹಿಟ್​ಲೀಸ್ಟ್​ನಲ್ಲಿದ್ದಾರೆ.

ಸಲ್ಮಾನ್​ ಖಾನ್​ ಆಪ್ತರು ಮಾತ್ರವಲ್ಲದೇ ಖ್ಯಾತ ಕಾಮಿಡಿಯನ್​ ಕೂಡ ಬಿಷ್ಣೋಯ್​ ಗ್ಯಾಂಗ್​ನ ಮುಂದಿನ ಟಾರ್ಗೆಟ್​ ಆಗಿದ್ದಾರೆ. ಆ ಕಾಮಿಡಿಯನ್ ಸದಾ ವಿವಾದಗಳಿಂದಲೇ ಸುದ್ದಿಯಾದವರು. ಅದರಲ್ಲೂ ಸಾಕಷ್ಟು ಬಾರಿ ಹಿಂದುಗಳು ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸ್ಟ್ಯಾಂಡಪ್​ ಕಾಮಿಡಿಯನ್​ ಆಗಿರುವ ಆತ ಅನೇಕ ವೇದಿಕಗಳಲ್ಲಿ ಹಿಂದು ದೇವರುಗಳು ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪವಿದೆ. ಎಷ್ಟೋ ಬಾರಿ ಆತನ ಶೋಗಳು ಕೂಡ ಹಿಂದುಗಳ ಆಕ್ರೋಶಕ್ಕೆ ಗುರಿಯಾಗಿ ರದ್ದಾಗಿದೆ. ಆತ ಹಿಂದಿಯ ಬಿಗ್​ಬಾಸ್​ ಶೋನಲ್ಲೂ ಭಾಗಿಯಾಗಿದ್ದ.

ಇದನ್ನೂ ಓದಿ: ಮೊದಲು ತಲೆಗೆ ನೀರು ಹಾಕ್ತೀರಾ? ಸ್ನಾನ ಮಾಡುವ ಸರಿಯಾದ ವಿಧಾನ ಯಾವುದು? ಇಲ್ಲಿದೆ ಉಪಯುಕ್ತ ಮಾಹಿತಿ | Bathing

ಅಂದಹಾಗೆ ಆ ಕಾಮಿಡಿಯನ್​ ಬೇರೆ ಯಾರೂ ಅಲ್ಲ ಆತನೇ ಮುನಾವರ್​ ಫಾರೂಕಿ. ಈತ ಸ್ಟ್ಯಾಂಡಪ್​ ಕಾಮಿಡಿಯನ್​ ಮಾತ್ರವಲ್ಲ, ರ್ಯಾಪರ್​ ಕೂಡ ಹೌದು. ಗುಜರಾತಿನ ಜುನಾಗಢದಲ್ಲಿ ಜನಿಸಿದರು. ಕಂಗನಾ ರಣಾವತ್​ ನಡೆಸಿಕೊಟ್ಟ ಲಾಕಪ್​ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ವಿಜೇತರಾಗಿದ್ದರು. ಅಲ್ಲದೆ, ಬಿಗ್​ಬಾಸ್​ ಸೀಸನ್​ 17ರ ಸ್ಪರ್ಧಿಸಿದ್ದರು ಮತ್ತು ವಿಜೇತರಾಗಿ ಹೊರಹೊಮ್ಮಿದರು. ಅನೇಕ ಬಾರಿ ತನ್ನ ಕಾಮಿಡಿ ಶೋಗಳಲ್ಲಿ ಹಿಂದು ದೇವರುಗಳನ್ನು ಅವಹೇಳನ ಮಾಡಿರುವ ಆರೋಪ ಹೊತ್ತಿದ್ದು, ಈ ಕಾರಣಕ್ಕೆ ಬಿಷ್ಣೋಯ್​ ಗ್ಯಾಂಗ್​ನ ಫಾರೂಕಿಯನ್ನು ಟಾರ್ಗೆಟ್​ ಮಾಡಿದೆ. ಈ ಹಿಂದೆ ದೆಹಲಿಯಲ್ಲಿ ನಡೆದ ಮದುವೆಯೊಂದರಲ್ಲಿ ಇಬ್ಬರು ಬಂದೂಕುಧಾರಿಗಳು ಫಾರೂಕಿ ಮೇಲೆ ಗುರಿಯಿಟ್ಟಿದ್ದರು. ಈ ವೇಳೆ ಗುಪ್ತಚರ ಸಂಸ್ಥೆಯ ಅಧಿಕಾರಿಗಳು ಮಧ್ಯಪ್ರವೇಶಿಸಿ ಫಾರೂಕಿಯನ್ನು ರಕ್ಷಣೆ ಮಾಡಿ ಮುಂಬೈಗೆ ಸ್ಥಳಾಂತರಿಸಿದ್ದರು ಎಂದು ತಿಳಿದುಬಂದಿದೆ.

Munawar Faruqui

ಇನ್ನು ಬಿಷ್ಣೋಯ್​ ಗ್ಯಾಂಗ್​ ಲೀಸ್ಟ್​ನಲ್ಲಿ ಮೃತ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಮ್ಯಾನೇಜರ್ ಶಗನ್ಪ್ರೀತ್ ಸಿಂಗ್ ಕೂಡ ಇದಾರೆ. ಏಕೆಂದರೆ, 2021ರ ಆಗಸ್ಟ್ ತಿಂಗಳಲ್ಲಿ ಪಂಜಾಬ್​ನ ಮೊಹಾಲಿಯಲ್ಲಿ ಗುಂಡೇಟಿಗೆ ತನ್ನ ನಿಕಟ ಸಹವರ್ತಿ ವಿಕ್ಕಿ ಮಿದ್ದುಖೇರಾ ಮೃತಪಟ್ಟಿದ್ದನು. ಕೊಲೆ ಮಾಡಿದ ಹಂತಕರಿಗೆ ಶಗನ್‌ಪ್ರೀತ್​ ಆಶ್ರಯ ನೀಡಿದ್ದಾರೆ ಎಂದು ಬಿಷ್ಣೋಯ್ ನಂಬಿದ್ದಾನೆ.

ಕುಖ್ಯಾತ ಬಾಂಬಿಹಾ ಗ್ಯಾಂಗ್‌ನ ಸದಸ್ಯ ಮತ್ತು ಬಿಷ್ಣೋಯಿ ಪ್ರತಿಸ್ಪರ್ಧಿ, ಕೌಶಾಲ್​ ಚೌಧರಿ ಅವರು ಮಿದ್ದುಖೇರಾದ ಹಂತಕರಿಗೆ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಿರುವ ಆರೋಪವನ್ನು ಹೊಂದಿದ್ದರು. ಹೀಗಾಗಿ ಚೌಧರಿ ಕೂಡ ಬಿಷ್ಣೋಯ್‌ನ ಹಿಟ್‌ಲಿಸ್ಟ್‌ನಲ್ಲಿ ಇದ್ದಾರೆ. ಇದಿಷ್ಟೇ ಅಲ್ಲದೆ, ಕೌಶಲ್ ಚೌಧರಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದ ಅಮಿತ್​ ಡಾಗರ್ ಕೂಡ ಮಿದ್ದುಖೇರಾ ಹತ್ಯೆಯಲ್ಲಿ ಭಾಗಿಯಾಗಿದ್ದನು. ಹೀಗಾಗಿ ಆತನ ಮೇಲೂ ಬಿಷ್ಣೋಯ್‌ ಕಣ್ಣಿಟ್ಟಿದ್ದಾನೆ.

ಸಿದ್ದಿಕ್​ ಹತ್ಯೆ ಮಾಡಿದ್ದೇಕೆ?

ಬಿಷ್ಣೋಯ್​ ಗ್ಯಾಂಗ್ ಸದಸ್ಯನೊಬ್ಬ ಹಂಚಿಕೊಂಡ ಫೇಸ್‌ಬುಕ್ ಪೋಸ್ಟ್ ಪ್ರಕಾರ, ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಅವರೊಂದಿಗಿನ ಆತ್ಮೀಯತೆ ಮತ್ತು ದಾವೂದ್ ಇಬ್ರಾಹಿಂನಂತಹ ಅಂಡರ್​ವರ್ಲ್ಡ್​ ಡಾನ್​ನೊಂದಿಗಿನ ಒಡನಾಟವೇ ಸಿದ್ದಿಕ್​ ಹತ್ಯೆಗೆ ಕಾರಣ. ಸಿದ್ದಿಕ್​ ಅವರ ಪುತ್ರ ಹಾಗೂ ಬಾಂದ್ರಾದ ಹಾಲಿ ಶಾಸಕ ಜೀಶನ್​ ಸಿದ್ದಿಕ್ ಅವರ ಕಚೇರಿ ಎದುರು ಶನಿವಾರ (ಅ.12) ರಾತ್ರಿ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಸಿದ್ದಿಕ್​ ಅವರು ಬಾಲಿವುಡ್ ಮತ್ತು ರಾಜಕಾರಣದಲ್ಲಿ ತಮ್ಮ ಪ್ರಭಾವವನ್ನು ಹೊಂದಿದ್ದರು. ಬಿಷ್ಣೋಯ್‌ ಗ್ಯಾಂಗ್​ನ ಹಿಟ್​ಲೀಸ್ಟ್​ನಲ್ಲಿ ಸಿದ್ದಿಕ್​ ಅವರ ಪುತ್ರನು ಕೂಡ ಇದಾರೆ. ಈ ಎಲ್ಲ ಸಂಗತಿ ಪೊಲೀಸರ ವಿಚಾರಣೆಯಲ್ಲಿ ತಿಳಿದುಬಂದಿದೆ. (ಏಜೆನ್ಸೀಸ್​)

ಆ ನಟಿಯ ಕಾರಣಕ್ಕೆ ಜಗಳವಾಡಿ 5 ವರ್ಷ ಮಾತುಬಿಟ್ಟಿದ್ದರು ಶಾರುಖ್​-ಸಲ್ಮಾನ್​! ಜುಲೈ 17ರ ರಹಸ್ಯ ಬಯಲು | Shah Rukh – Salman

ಓವರ್​ಟೇಕ್​ ವಿಚಾರದಲ್ಲಿ ವಾಗ್ವಾದ: ಪತ್ನಿಯ ಎದುರೇ ಬೈಕ್​ ಸವಾರನನ್ನು ಹೊಡೆದು ಕೊಂದ ದುಷ್ಕರ್ಮಿಗಳು | Road Rage

Share This Article

ಗಂಡ, ಹೆಂಡತಿ ಜಗಳದಿಂದ ಮನೆಯಲ್ಲಿ ನೆಮ್ಮದಿ ಇಲ್ಲವೇ? ಈ Vastu Tips ಪಾಲಿಸಿ..!

Vastu Tips: ಪ್ರತಿಯೊಬ್ಬ ವ್ಯಕ್ತಿಯು ತನ್ನ ವೈವಾಹಿಕ ಜೀವನ ಯಾವಾಗಲೂ ಸಂತೋಷವಾಗಿರಬೇಕೆಂದು ಬಯಸುತ್ತಾನೆ. ಆದಾಗ್ಯೂ, ಸ್ವಲ್ಪ…

ದಪ್ಪ ಹೊಟ್ಟೆಯಿಂದ ತೊಂದರೆ ಆಗ್ತಿದೆಯೇ? ಇವುಗಳನ್ನು ಸೇವಿಸಿದ್ರೆ ಸಾಕು ಬೆಣ್ಣೆಯಂತೆ ಕರಗುತ್ತೆ ಕೊಬ್ಬು | Stomach trouble

Stomach trouble : ಅನೇಕರು ಹೊಟ್ಟೆಯ ಸಮಸ್ಯೆಗಳಿಂದ ಪ್ರತಿ ನಿತ್ಯ ಬಳಲುತ್ತಿದ್ದಾರೆ. ನಿಮಗೂ ದಪ್ಪ ಹೊಟ್ಟೆ…

ಆಯಾ ವಯಸ್ಸಿಗೆ ಅನುಗುಣವಾಗಿ ಯಾರು ಎಷ್ಟು ಗಂಟೆ ನಿದ್ದೆ ಮಾಡಬೇಕು? ಇಲ್ಲಿದೆ ಸಂಪೂರ್ಣ ಪಟ್ಟಿ… Sleep

Sleep : ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ವ್ಯಕ್ತಿಗೆ ಸಾಕಷ್ಟು ನಿದ್ರೆ ಬೇಕೇ ಬೇಕು.…