ಮೊದಲು ತಲೆಗೆ ನೀರು ಹಾಕ್ತೀರಾ? ಸ್ನಾನ ಮಾಡುವ ಸರಿಯಾದ ವಿಧಾನ ಯಾವುದು? ಇಲ್ಲಿದೆ ಉಪಯುಕ್ತ ಮಾಹಿತಿ | Bathing

Bathing
Published on

Bathing: ದೈಹಿಕ ನೈರ್ಮಲ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಸ್ನಾನ ಮಾಡಲು ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ. ಸ್ನಾನ ಮಾಡುವುದರಿಂದ ನಿಮ್ಮ ದೇಹ ಶುದ್ಧೀಕರಣವಾಗುವುದಲ್ಲದೆ, ರಕ್ತ ಪರಿಚಲನೆ ಸಹ ಸುಧಾರಣೆಯಾಗುತ್ತದೆ ಮತ್ತು ಉತ್ತಮ ನಿದ್ರೆಗೂ ಸಹಾಯ ಮಾಡುತ್ತದೆ. ಇದು ಮಾನಸಿಕ ಆರೋಗ್ಯವನ್ನೂ ಸುಧಾರಿಸುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ.

ಹೆಚ್ಚಿನ ಜನರು ದಿನನಿತ್ಯ ಸ್ನಾನ ಮಾಡಿದರೂ ತಪ್ಪಾದ ಕ್ರಮವನ್ನು ಅನುಸರಿಸುತ್ತಾರೆ. ಸ್ನಾನ ಮಾಡುವಾಗ ತಣ್ಣೀರನ್ನು ಮೊದಲು ದೇಹಕ್ಕೆ ಸುರಿಯುವುದರಿಂದ ದೇಹದ ಉಷ್ಣತೆ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ.

ಸ್ನಾನ ( Bathing ) ಮಾಡಲು ಸರಿಯಾದ ಮಾರ್ಗ ಯಾವುದು?

ಮೊದಲು ತಲೆಯ ಮೇಲೆ ನೀರು ಸುರಿದು ಸ್ನಾನ ಪ್ರಾರಂಭಿಸುವುದು ಉತ್ತಮ. ಆದರೆ, ನೀವು ನಿಮ್ಮ ತಲೆಯನ್ನು ತೊಳೆಯಲು ಇಷ್ಟಪಡದಿದ್ದರೆ, ನೀವು ಈ ಕೆಳಗಿನ ವಿಧಾನವನ್ನು ಪ್ರಯತ್ನಿಸಬಹುದು.

* ನಿಮ್ಮ ತಲೆಯ ಮೇಲೆ ನೀರು ಸುರಿಯಲು ನೀವು ಬಯಸದಿದ್ದರೆ, ಕನಿಷ್ಟಪಕ್ಷ ನಿಮ್ಮ ಕೂದಲನ್ನು ಒದ್ದೆ ಮಾಡಿ. ಸ್ವಲ್ಪ ತಣ್ಣೀರು ತೆಗೆದುಕೊಂಡು ತಲೆಯ ಮಧ್ಯ ಭಾಗವನ್ನು ಒದ್ದೆ ಮಾಡಿ.

* ನಿಮ್ಮ ಎರಡೂ ಕಿವಿಗಳ ನಡುವಿನ ರೇಖೆಯನ್ನು ರೂಪಿಸುವ ತಲೆಯ ಮಧ್ಯಭಾಗದಲ್ಲಿರುವ ಭಾಗವನ್ನು ಒದ್ದೆ ಮಾಡಿ.

* ಈ ರೀತಿ ಮಾಡುವುದರಿಂದ ನಿಮ್ಮ ಮನಸ್ಸನ್ನು ತಂಪಾಗಿಸುತ್ತದೆ.

* ಇದಾದ ನಂತರ ಇಡೀ ದೇಹದ ಮೇಲೆ ನೀರನ್ನು ಸುರಿಯಬಹುದು.

Bathing

ಪ್ರತಿದಿನ ಸ್ನಾನ ಮಾಡುವುದು ಒಳ್ಳೆಯದು. ಬೆಚ್ಚಗಿನ ನೀರು ಉತ್ತಮ. ಅತಿಯಾದ ಬಿಸಿನೀರು ಚರ್ಮವನ್ನು ಒಣಗಿಸಬಹುದು. ಸ್ನಾನದ ನಂತರ ದೇಹವನ್ನು ಸಂಪೂರ್ಣವಾಗಿ ಒಣಗಿಸುವುದು ಸಹ ಮುಖ್ಯವಾಗಿದೆ. ಆದರೆ, ಚರ್ಮವು ತುಂಬಾ ಸೂಕ್ಷ್ಮವಾಗಿದ್ದರೆ, ವಾರಕ್ಕೆ 2 ರಿಂದ 3 ಬಾರಿ ಸ್ನಾನ ಮಾಡುವುದು ಉತ್ತಮ ಅಭ್ಯಾಸ.

ಸ್ನಾನದ ಪ್ರಯೋಜನಗಳು

ಸ್ನಾನವು ಕೊಳಕು, ಬೆವರು ಮತ್ತು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುತ್ತದೆ. ಸ್ನಾನವು ದೇಹಕ್ಕೆ ವಿಶ್ರಾಂತಿ ನೀಡುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ಇರುವ ಬ್ಯಾಕ್ಟೀರಿಯಾ ಮತ್ತು ಇತರ ಸೂಕ್ಷ್ಮಾಣುಗಳು ನಾಶವಾಗುತ್ತವೆ ಮತ್ತು ರೋಗಗಳನ್ನು ತಡೆಯುತ್ತವೆ. ರಕ್ತ ಪರಿಚಲನೆಗೆ ಮತ್ತು ಮಾನಸಿಕ ಆರೋಗ್ಯಕ್ಕೂ ಸ್ನಾನ ತುಂಬಾನೇ ಒಳ್ಳೆಯದು.

ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net