Birth of Stars : ಹುಟ್ಟಿದ ತಕ್ಷಣ ಜನ್ಮ ದಿನಾಂಕ ಹಾಗೂ ಹುಟ್ಟಿದ ಗಳಿಗೆಯನ್ನು ಬರೆದಿಡಲಾಗುತ್ತದೆ. ಹಿಂದು ಧರ್ಮದಲ್ಲಿ ಈ ಜನ್ಮ ದಿನಾಂಕ ಮತ್ತು ಹುಟ್ಟಿದ ಗಳಿಗೆಯು ವ್ಯಕ್ತಿಯ ಜೀವನದ ಮೇಲೆ ಬಹಳ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ. ಹುಟ್ಟಿದ ದಿನ ಮತ್ತು ಗಳಿಗೆಯ ಆಧಾರದ ಮೇಲೆ ವ್ಯಕ್ತಿಯ ರಾಶಿ ಮತ್ತು ನಕ್ಷತ್ರಗಳನ್ನು ನಿರ್ಧರಿಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಒಬ್ಬ ವ್ಯಕ್ತಿಯ ಹುಟ್ಟಿದ ರಾಶಿಚಕ್ರ ಚಿಹ್ನೆ ಮತ್ತು ನಕ್ಷತ್ರವು ಆತನ ಭವಿಷ್ಯದ ಜೀವನ ಮತ್ತು ವ್ಯಕ್ತಿತ್ವದ ಮೇಲೆ ಮಹತ್ವದ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ.
ಅಂದಹಾಗೆ ಒಬ್ಬ ವ್ಯಕ್ತಿಯ ಗುಣ, ನಡತೆ, ವರ್ತನೆ ಹಾಗೂ ಆತನ ಆಗು ಹೋಗುಗಳ ಹಿಂದೆ ಜನ್ಮ ನಕ್ಷತ್ರಗಳು ಕಾರಣವಾಗಿರುತ್ತದೆ. ಜನ್ಮ ನಕ್ಷತ್ರದ ಪ್ರಕಾರವಾಗಿ ಜೀವನದಲ್ಲಿ ಏನು ನಡೆಯಬೇಕೋ ಅದು ನಡದೇ ನಡೆಯುತ್ತದೆ ಎಂದು ಹಿರಿಯರು ಹೇಳುತ್ತಿರುತ್ತಾರೆ. ನಿಮ್ಮ ಜನ್ಮ ನಕ್ಷತ್ರದ ಪ್ರಕಾರ ನಿಮ್ಮ ವ್ಯಕ್ತಿತ್ವ ಮತ್ತು ಭವಿಷ್ಯವನ್ನು ತಿಳಿದುಕೊಳ್ಳಬಹುದು. ಈ ಜನ್ಮ ನಕ್ಷತ್ರಗಳು ಪ್ರಭಾವ ಒಂದೇ ರೀತಿ ಇರುವುದಿಲ್ಲ. ಗ್ರಹಗಳ ಚಲನೆಯಿಂದಾಗಿ ಅವುಗಳ ಪ್ರಭಾವವೂ ಕೂಡ ಬದಲಾಗುತ್ತಿರುತ್ತದೆ. ಒಂದು ಸಮಯದಲ್ಲಿ ನೋವು ಅನುಭವಿಸಿದ್ದರೆ, ಇನ್ನೊಂದು ಸಮಯದಲ್ಲಿ ಸಂತೋಷದ ಕ್ಷಣಗಳನ್ನು ಅನುಭವಿಸುತ್ತೀರಿ.
ಅದೇ ರೀತಿ ಕೆಲವು ನಕ್ಷತ್ರಗಳಲ್ಲಿ ಜನಿಸಿದ ಪುರುಷರು ಮದುವೆಯ ನಂತರ ತಮ್ಮ ಹೆಂಡತಿಯರನ್ನು ರಾಣಿಯಂತೆ ನೋಡಿಕೊಳ್ಳುತ್ತಾರೆ. ತಮ್ಮ ಪತ್ನಿಯರ ಪ್ರತಿಯೊಂದು ಅಗತ್ಯ, ಆಸೆ ಮತ್ತು ಭಾವನೆಗಳನ್ನು ಗೌರವಿಸುವ ಉದಾತ್ತ ಗುಣವನ್ನು ಹೊಂದಿರುವ ಪುರುಷರು ಯಾವ ನಕ್ಷತ್ರಗಳಲ್ಲಿ ಜನಿಸುತ್ತಾರೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಕೃತಿಕಾ ನಕ್ಷತ್ರ
ಈ ನಕ್ಷತ್ರದಲ್ಲಿ ಜನಿಸಿದ ಪುರುಷರು ಪ್ರೀತಿ ಮತ್ತು ವೈವಾಹಿಕ ಸಂಬಂಧಗಳ ಬಗ್ಗೆ ಅತಿಯಾದ ಉತ್ಸಾಹ ಮತ್ತು ಮೌಲ್ಯವನ್ನು ಹೊಂದಿರುತ್ತಾರೆ. ಅವರು ಮದುವೆಯ ನಂತರ ತಮ್ಮ ಹೆಂಡತಿಯನ್ನು ತಮ್ಮ ಪ್ರಪಂಚವೆಂದು ಭಾವಿಸುತ್ತಾರೆ. ತಮ್ಮ ಹೆಂಡತಿಯ ಆಸೆಗಳನ್ನು ಪೂರೈಸಲು ಯಾವುದೇ ಮಟ್ಟಕ್ಕೆ ಹೋಗಲು ಸಿದ್ಧರಿರುತ್ತಾರೆ. ತಮ್ಮ ಹೆಂಡತಿಯರನ್ನು ಟೀಕಿಸಲು ಅಥವಾ ಬೈಯಲು ಯಾರಿಗೂ ಅವಕಾಶ ನೀಡುವುದಿಲ್ಲ. ಮಾನಸಿಕವಾಗಿ ಮಾತ್ರವಲ್ಲದೆ ದೈಹಿಕವಾಗಿಯೂ ರಾಜಕುಮಾರಿಯಂತೆ ನೋಡಿಕೊಳ್ಳುತ್ತಾರೆ.
ಉತ್ತರ ನಕ್ಷತ್ರ
ಈ ನಕ್ಷತ್ರದಲ್ಲಿ ಜನಿಸಿದ ಪುರುಷರು ಸ್ವಾಭಾವಿಕವಾಗಿ ದಯಾಳುಗಳಾಗಿದ್ದು, ಪ್ರಾಮಾಣಿಕತೆ ಮತ್ತು ಸತ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಇವರು ತಮ್ಮ ಜೀವನಕ್ಕಿಂತ ಹೆಚ್ಚಾಗಿ ತಮ್ಮ ಜೀವನ ಸಂಗಾತಿಯನ್ನು ಪ್ರೀತಿಸುವ ಗುಣವನ್ನು ಹೊಂದಿರುತ್ತಾರೆ ಮತ್ತು ಸ್ವಾಭಾವಿಕವಾಗಿಯೇ ವಿವಾಹದ ಬಂಧಕ್ಕೆ ಹೆಚ್ಚಿನ ಗೌರವವನ್ನು ಹೊಂದಿರುತ್ತಾರೆ. ಇವರು ಖಂಡಿತವಾಗಿಯೂ ತಮ್ಮ ಹೆಂಡತಿಯರಿಗೆ ಏನನ್ನೂ ಮುಚ್ಚಿಡದೆ ಹೇಳುವ ಗುಣವನ್ನು ಹೊಂದಿರುತ್ತಾರೆ. ತಮ್ಮ ಹೆಂಡತಿಯರ ಸಣ್ಣ ಆಸೆಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ.
ವಿಶಾಖ ನಕ್ಷತ್ರ
ಈ ನಕ್ಷತ್ರದಲ್ಲಿ ಜನಿಸಿದ ಪುರುಷರು ತಮ್ಮ ಹೆಂಡತಿಯರ ಮೇಲೆ ಬಲವಾದ ಪ್ರೀತಿಯನ್ನು ಹೊಂದಿರುತ್ತಾರೆ. ತಮ್ಮ ಸಂಗಾತಿಯೊಂದಿಗೆ ಜೀವನದಲ್ಲಿ ಎಲ್ಲವನ್ನೂ ಹಂಚಿಕೊಳ್ಳುತ್ತಾರೆ. ತಮ್ಮ ಹೆಂಡತಿಯರನ್ನು ತುಂಬಾ ಸಂತೋಷವಾಗಿಡಲು ದೃಢನಿಶ್ಚಯವನ್ನು ಹೊಂದಿರುತ್ತಾರೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.
ಹುಟ್ಟುಹಬ್ಬದಂದೇ 7 ಕೋಟಿ ಹಣದೊಂದಿಗೆ ತಮಿಳುನಾಡು ವ್ಯಕ್ತಿಯ ಮನೆಗೆ ಎಂಟ್ರಿ ಕೊಟ್ಟ ಅದೃಷ್ಟ ಲಕ್ಷ್ಮೀ! Luck
11 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯವಾಡಿದ ಖ್ಯಾತ ಮಾಜಿ ಕ್ರಿಕೆಟಿಗ ಜೆಪಿ ಡುಮಿನಿ! JP Duminy