ಸಿದ್ದರಾಮಯ್ಯ ಕುರಿತು ಬಯೋಪಿಕ್ … ಮಾಜಿ ಮುಖ್ಯಮಂತ್ರಿಗಳ ಪಾತ್ರದಲ್ಲಿ ವಿಜಯ್​ ಸೇತುಪತಿ?

Siddaramaiah - Vijay Sethupathi
Published on

ಕೊಪ್ಪಳ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರಿತು ಬಯೋಪಿಕ್​ ನಿರ್ಮಾಣ ಮಾಡಲು ಕನ್ನಡ ಚಿತ್ರರಂಗದಲ್ಲಿ ಸದ್ದಿಲ್ಲದೆ ಒಂದು ಪ್ರಯತ್ನ ನಡೆಯುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ಮುಂದಿನ ವರ್ಷ ಸಿದ್ದು ಅವರ ಜೀವನ ಚರಿತ್ರೆ ತೆರೆಯ ಮೇಲೆ ಅಪ್ಪಳಿಸಲಿದೆ.

ಅಂದಹಾಗೆ, ಸಿದ್ದರಾಮಯ್ಯ ಅವರ ಬಯೋಪಿಕ್ ನಿಮಾಧಣ ಮಾಡಲು ಮುಂದಾಗಿರುವುದು ಗಂಗಾವತಿ ಮೂಲದ ಹಯಾತ್ ಪೀರ್ ಸಾಬ್. ಅವರು ತಮ್ಮ ಎಂ.ಎಸ್​. ಕ್ರೀಯೆಷನ್ಸ್​ ಸಂಸ್ಥೆಯಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಮಾಜಿ ಸಚಿವ ಶಿವರಾಜ್ ತಂಗಡಗಿ ಹಾಗೂ ಜಮೀರ್ ಆಹ್ಮಮದ್ ನೇತೃತ್ವದಲ್ಲಿ ಮೊದಲ ಸುತ್ತಿನ ಮಾತುಕತೆ ನಡೆದಿದ್ದು, ಸಿದ್ದರಾಮಯ್ಯ ಅವರಿಂದಲೂ ಬಯೋಪಿಕ್ ಚಿತ್ರಕ್ಕೆ ಗ್ರಿನ್ ಸಿಗ್ನಲ್ ಸಿಕ್ಕಿದೆಯಂತೆ.

ಸುಮಾರು 50 ಕೋಟಿಗೂ ಹೆಚ್ವು ಬಜೆಟ್​ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಸಿದ್ದರಾಮಯ್ಯ ಅವರ ಪಾತ್ರಕ್ಕೆ ತಮಿಳು ನಟ ವಿಜಯ್ ಸೇತುಪತಿ ಅವರ ಕಾಲ್​ಶೀಟ್​ ಕೇಳುವ ಸಾಧ್ಯತೆ ಇದೆ. ಸತ್ಯರತ್ನಂ ಎಂಬುವವರ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರಲಿದೆಯಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net