More

    ಸುಳ್ಳು ಎಷ್ಟೇ ದೊಡ್ಡದಾಗಿದ್ದರೂ, ಸತ್ಯದ ಮುಂದೆ ಯಾವತ್ತೂ ಚಿಕ್ಕದು; ಲ್ಯಾಪಿಡ್​ಗೆ ಖೇರ್​ ತಿರುಗೇಟು

    ಮುಂಬೈ: ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವು ಅಸಭ್ಯವಷ್ಟೇ ಅಲ್ಲ, ಅದೊಂದು ಕೆಟ್ಟ ಚಿತ್ರ ಎಂದ ಇಸ್ರೇಲಿ ನಿರ್ಮಾಪಕ ಮತ್ತು ಎನ್ನುವುದರ ಜತೆಗೆ, ಅದೊಂದು ಕೆಟ್ಟ ಚಿತ್ರ ಎಂದಿರುವ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (IFFI), ಜ್ಯೂರಿ ಮುಖ್ಯಸ್ಥರಾದ ನಾಡವ್ ಲ್ಯಾಪಿಡ್ ಅವರನ್ನು ನಟ ಅನುಪಂ ಖೇರ್​ ತರಾಟೆ ತೆಗೆದುಕೊಂಡಿದ್ದಾರೆ.

    ಇದನ್ನೂ ಓದಿ: ವಿಜಯಾನಂದ ಟ್ರೇಲರ್ ವೈರಲ್; ಯೂಟ್ಯೂಬ್​ನಲ್ಲಿ 2.66 ಕೋಟಿಗೂ ಅಧಿಕ ವೀಕ್ಷಣೆ

    ‘ದಿ ಕಾಶ್ಮೀರ್​ ಫೈಲ್ಸ್​’ ಕುರಿತು ಇತ್ತೀಚೆಗೆ ಮಾತನಾಡಿರುವ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (IFFI), ಜ್ಯೂರಿ ಮುಖ್ಯಸ್ಥರಾದ ನಾಡವ್ ಲ್ಯಾಪಿಡ್, ”ದಿ ಕಾಶ್ಮೀರ್​ ಫೈಲ್ಸ್’ ಚಿತ್ರ ನೋಡಿ ಆಘಾತವಾಯಿತು. ಇಂತಹ ಪ್ರತಿಷ್ಠಿತ ಚಲನಚಿತ್ರೋತ್ಸವದ ಕಲಾತ್ಮಕ, ಸ್ಪರ್ಧಾತ್ಮಕ ವಿಭಾಗಕ್ಕೆ ಇದು ಸೂಕ್ತವಲ್ಲದ ಚಿತ್ರವಾಗಿದೆ. ‘ದಿ ಕಾಶ್ಮೀರ್​ ಫೈಲ್ಸ್​’ ಬರೀ ಅಸಭ್ಯ ಚಿತ್ರವಷ್ಟೇ ಅಲ್ಲ, ಅದೊಂದು ಕೆಟ್ಟ ಚಿತ್ರ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಅನುಪಂ ಖೇರ್​ ಸೋಷಿಯಲ್​ ಮೀಡಿಯಾದಲ್ಲಿ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೈಕಿ ಹಾಲಿವುಡ್​ನ ‘ಶಿಂಡ್ಲರ್ಸ್​ ಲಿಸ್ಟ್​’ ಸಹ ಸೇರಿದೆ. ಈ ಕುರಿತು ಬರೆದುಕೊಂಡಿರುವ ಅವರು, ‘ಸುಳ್ಳು ಎಷ್ಟೇ ಎತ್ತರದಲ್ಲಿದ್ದರೂ, ಅದು ಸತ್ಯದ ಮುಂದೆ ಯಾವತ್ತೂ ಚಿಕ್ಕದು’ ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ‘ದಿ ಕಾಶ್ಮೀರ್​ ಫೈಲ್ಸ್’ ಚಿತ್ರವು ‘ಶಿಂಡ್ಲರ್ಸ್​ ಲಿಸ್ಟ್​’ ಶೈಲಿಯ ಒಂದು ಚಿತ್ರ ಎಂದು ಅದಕ್ಕೆ ಹೋಲಿಸಿದ್ದಾರೆ.

    ಇದನ್ನೂ ಓದಿ: ಮತ್ತೆ ಬಿಡುಗಡೆಯಾಗುತ್ತಿದೆ ರಜನಿಕಾಂತ್​ ಅಭಿನಯದ ‘ಬಾಬಾ’; ಯಾಕೆ ಗೊತ್ತಾ?

    ಅನುಪಂ ಖೇರ್​ ಅಲ್ಲದೆ, ಚಿತ್ರದಲ್ಲಿ ನಟಿಸಿರುವ ದರ್ಶನ್​ ಕುಮಾರ್​ ಸಹ ಲ್ಯಾಪಿಡ್​ ಮಾತುಗಳನ್ನು ಖಂಡಿಸಿದ್ದಾರೆ. ಈ ಚಿತ್ರವು ವಾಸ್ತವಕ್ಕೆ ಹತ್ತಿರವಾದ ಚಿತ್ರ ಎಂದು ಹೇಳಿದ್ದಾರೆ. ‘ಪ್ರತಿಯೊಬ್ಬರಿಗೂ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ಆದರೆ, ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರದಲ್ಲಿ ತೋರಸಿದ್ದನ್ನು ಸುಳ್ಳು ಎನ್ನುವುದಕ್ಕೆ ಸಾಧ್ಯವಿಲ್ಲ. ಆ ಚಿತ್ರದ ಕಾಶ್ಮೀರಿ ಪಂಡಿತರು ಅನುಭವಿಸಿದ ಧಾರುಣ ಕಥೆಗಳಿವೆ. ಭಯೋತ್ಪಾದನೆಯ ವಿರುದ್ಧ ಈಗಲೂ ಹೋರಾಡುತ್ತಿರುವವರ ಸಾಹಸದ ಚಿತ್ರಣವಿದೆ. ಹಾಗಾಗಿ, ಅದೊಂದು ಅಸಭ್ಯ ಚಿತ್ರವಲ್ಲ, ವಾಸ್ತವದ ಚಿತ್ರ’ ಎಂದು ಅವರು ಹೇಳಿದ್ದಾರೆ.

    ‘ದಿ ಕಾಶ್ಮೀರ್​ ಫೈಲ್ಸ್​’ ಅಸಭ್ಯವಷ್ಟೇ ಅಲ್ಲ, ಕೆಟ್ಟ ಸಿನಿಮಾ … ಇಸ್ರೇಲಿ ನಿರ್ಮಾಪಕನ ವಿವಾದಾಸ್ಪದ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts