More

    ವಿಜಯಾನಂದ ಟ್ರೇಲರ್ ವೈರಲ್; ಯೂಟ್ಯೂಬ್​ನಲ್ಲಿ 2.66 ಕೋಟಿಗೂ ಅಧಿಕ ವೀಕ್ಷಣೆ

    ಬೆಂಗಳೂರು: ಕನ್ನಡಿಗರು, ಕನ್ನಡದ ಸಾಧಕನ ಕುರಿತು ನಿರ್ವಿುಸಿರುವ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಎಂಬ ಹೆಗ್ಗಳಿಕೆ ‘ವಿಜಯಾನಂದ’ ಚಿತ್ರಕ್ಕೆ ಸಲ್ಲುತ್ತದೆ. ವಿಆರ್​ಎಲ್ ಸಮೂಹ ಸಂಸ್ಥೆಯ ಚೇರ್ಮನ್ ಡಾ. ವಿಜಯ ಸಂಕೇಶ್ವರ ಜೀವನಾಧಾರಿತ ಚಿತ್ರ ‘ವಿಜಯಾನಂದ’. ‘ಟ್ರಂಕ್’ ಚಿತ್ರವನ್ನು ನಿರ್ದೇಶಿಸಿದ್ದ ರಿಷಿಕಾ ಶರ್ಮಾ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಹೆಸರಾಂತ ಸಂಗೀತ ನಿರ್ದೇಶಕ ಗೋಪಿಸುಂದರ್ ಸಂಗೀತ ನೀಡಿದ್ದಾರೆ.

    ವಿಆರ್​ಎಲ್ ಫಿಲಂ ಪ್ರೊಡಕ್ಷನ್ಸ್ ಬ್ಯಾನರ್​ನಲ್ಲಿ ಡಾ. ಆನಂದ ಸಂಕೇಶ್ವರ ‘ವಿಜಯಾನಂದ’ ನಿರ್ವಿುಸಿದ್ದಾರೆ. ಈಗಾಗಲೇ ಚಿತ್ರದ ಟೀಸರ್, ಟ್ರೇಲರ್ ಮತ್ತು ಹಾಡು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ನ. 19ರಂದು ಬಿಡುಗಡೆಯಾದ ‘ವಿಜಯಾನಂದ’ಚಿತ್ರದ ಟ್ರೇಲರ್​ಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆನಂದ್ ಆಡಿಯೋ ಯೂಟ್ಯೂಬ್ ಚಾನಲ್​ನಲ್ಲಿ ಐದೂ ಭಾಷೆಗಳಲ್ಲಿ ರಿಲೀಸ್ ಆಗಿರುವ ಟ್ರೇಲರ್, ಕೇವಲ ಒಂದೇ ವಾರದಲ್ಲಿ ಎರಡು ಕೋಟಿಗೂ ಅಧಿಕ ಬಾರಿ ವೀಕ್ಷಣೆಗೊಂಡಿದೆ. ಕನ್ನಡ ಟ್ರೇಲರ್ 95 ಲಕ್ಷ ವ್ಯೂವ್ಸ್, ಹಿಂದಿ ಭಾಷೆಯ ಟ್ರೇಲರ್

    56 ಲಕ್ಷ ವ್ಯೂವ್ಸ್, ತೆಲುಗು ಭಾಷೆಯಲ್ಲಿ 49 ಲಕ್ಷ, ತಮಿಳಿನಲ್ಲಿ 40 ಲಕ್ಷ ಹಾಗೂ ಮಲಯಾಳಂ ಟ್ರೇಲರ್ 26 ಲಕ್ಷ ವ್ಯೂವ್ಸ್ ಪಡೆದಿದೆ. ಆ ಮೂಲಕ ಐದು ಭಾಷೆಗಳಿಂದ 2.66 ಕೋಟಿಗೂ ಅಧಿಕ ಮಂದಿ ‘ವಿಜಯಾನಂದ’ ಚಿತ್ರದ ಟ್ರೇಲರ್ ವೀಕ್ಷಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಚಿತ್ರದಲ್ಲಿ ಡಾ. ವಿಜಯ ಸಂಕೇಶ್ವರ ಪಾತ್ರದಲ್ಲಿ ನಿಹಾಲ್ ರಜಪೂತ್ ನಟಿಸಿದ್ದು, ಶ್ರೀಮತಿ ಲಲಿತಾ ಸಂಕೇಶ್ವರ ಪಾತ್ರದಲ್ಲಿ ಸಿರಿ ಪ್ರಹ್ಲಾದ್ ಅಭಿನಯಿಸಿದ್ದಾರೆ. ಉಳಿದಂತೆ ಅನಂತ್ ನಾಗ್, ರವಿಚಂದ್ರನ್, ವಿನಯ ಪ್ರಸಾದ್, ಭರತ್ ಬೋಪಣ್ಣ, ಅರ್ಚನಾ ಕೊಟ್ಟಿಗೆ ಪ್ರಮುಖ ತಾರಾಗಣದಲ್ಲಿದ್ದಾರೆ. ಬಹುನಿರೀಕ್ಷಿತ ‘ವಿಜಯಾನಂದ’ ಚಿತ್ರ ಇದೇ ಡಿ. 9ರಂದು ವಿಶ್ವಾದ್ಯಂತ 1600ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ಬಿಡುಗಡೆಯಾಗಲಿದೆ.

    ಮಗಳ ಮದುವೆಗೆ ಕೆಲವು ಗಂಟೆಗಳು ಬಾಕಿ ಇರುವಾಗ ನೇಣು ಹಾಕಿಕೊಂಡ ತಂದೆ; ಮದ್ಯಪಾನ ಮಾಡಿದ್ದಕ್ಕೆ ಬೈದಿದ್ದೇ ಕಾರಣ?

    ರಾಜ್ಯದಲ್ಲಿ ಒಂದೇ ದಿನ 108 ಇನ್​ಸ್ಪೆಕ್ಟರ್​ಗಳ ವರ್ಗಾವಣೆ; ನಿಮ್ಮೂರಿಗೆ ಯಾರು ಇನ್​ಸ್ಪೆಕ್ಟರ್? ಇಲ್ಲಿದೆ ಪೂರ್ತಿ ಪಟ್ಟಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts