More

    ಮನೆ ಮುಂದೆ ನಿಲ್ಲಿಸಿರುವ ಬೈಕ್​ಗಳೇ ಇವರ ಟಾರ್ಗೆಟ್​; ಮೋಜು ಮಸ್ತಿಗಾಗಿ ಕಳ್ಳತನ ಮಾಡುತ್ತಿದ್ದ ಗ್ಯಾಂಗ್​ ಅರೆಸ್ಟ್​

    ಬೆಂಗಳೂರು: ಮೋಜು ಮಸ್ತಿಗಾಗಿ ಮನೆಗಳ ಮುಂದೆ ನಿಲ್ಲಿಸಿದ್ದ ಬೈಕ್‌ಗಳನ್ನು ಟಾರ್ಗೆಟ್​ ಮಾಡಿ ಕಳ್ಳತನ ಮಾಡುತ್ತಿದ್ದ ಗ್ಯಾಂಗ್​ ಒಂದನ್ನು ಪೊಲೀಸರು ಬಂಧಿಸಿದ್ದಾರೆ.

    ತಮಿಳುನಾಡಿನಿಂದ ಬಂದು ಬೆಂಗಳೂರಲ್ಲಿ ಕೈ ಚಳಕ ತೋರುತ್ತಿದ್ದ 5 ಮಂದಿಯ ಹೆಡೆಮುರಿ ಕಟ್ಟುವಲ್ಲಿ ಬೊಮ್ಮನಹಳ್ಳಿ ಪೊಲೀಸರು 72 ಬೈಕ್​ಗಳನ್ನು ವಶಕ್ಕೆ ಪಡೆದಿದ್ಧಾರೆ.

    ನಗರದ ವಿವಿಧೆಡೆ ಕಳ್ಳತನ

    ಆರೋಪಿಗಳು ನಗರದ ವಿವಿಧೆಡೆ ತಿರುಗಾಡಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್​ಗಳನ್ನು ಗಮನಿಸುತ್ತಿದ್ದರು. ಬಳಿಕ ರಾತ್ರಿ ವೇಳೆ ವಾಹನಗಳನ್ನು ಕದ್ದು ಅದನ್ನ ತಮಿಳುನಾಡಿನಲ್ಲಿ ಮಾರಾಟ ಮಾಡುತ್ತಿದ್ದರು.

    ಈವರೆಗೆ ಪೊಲೀಸರು ಆರೋಪಿಗಳಿಂದ ಒಟ್ಟು 72 ಬೈಕ್​ಗಳನ್ನು ವಶಕ್ಕೆ ಪಡೆದಿದ್ದು ಮಾಹಿತಿ ದೊರೆತ ನಂತರ ಇನ್ನಷ್ಟು ವಾಹನಗಳನ್ನು ಸುಪರ್ದಿಗೆ ಪಡೆಯಬಹುದು ಎಂದು ಹೇಳಲಾಗಿದೆ.

    Accused arrested
    ಬಂಧಿತ ಆರೋಪಿಗಳು

    ಕಡಿಮೆ ಬೆಲೆಗೆ ಮಾರಾಟ

    ಬಂಧಿತ ಆರೋಪಿಗಳು ಬೆಂಗಳೂರಿನಲ್ಲಿ ಕದ್ದ ಬೈಕ್​ಗಳನ್ನು ತಮಿಳುನಾಡಿನಲ್ಲಿ ಕಡಿಮೆ ಬೆಲೆಗೆ ನಂಬರ್​ ಪ್ಲೇಟ್​ ಬದಲಾಯಿಸಿ ಮಾರಾಟ ಮಾಡುತ್ತಿದ್ದರು. 2 ಲಕ್ಷ ಮೌಲ್ಯದ ಬೈಕ್​ಗಳನ್ನ 10-25 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದರು ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.

    ಕಡಿಮೆ ಬೆಲೆಗೆ ಬೈಲ್​ ಸಿಕ್ಕಿದ ಖುಷಿಗೆ ಜನರು ಯಾವುದೇ ಡಾಕ್ಯೂಮೆಂಟ್​ಗಳನ್ನು ಕೇಳುತ್ತಿರಲಿಲ್ಲ. ಒಂದು ವೇಳೆ ಕೇಳಿದ್ದಲ್ಲಿ ಲೋನ್​ ಕ್ಲಿಯರ್​ ಆಗದ ಕಾರಣ ಇನ್ನು ದೊರೆತ್ತಿಲ್ಲ ಸಾಲ ತೀರಿದ ನಂತರ ದೊರೆಯುತ್ತದೆ ಎಂದು ಹೇಳುತ್ತಿದ್ದರು.

    ಬಂಧಿತ ಆರೋಪಿಗಳು ತಮಿಳುನಾಡಿನ ವಾನಂಬಾಡಿ, ಹುಡುಗತ್ತೂರು, ಅಳಂಗಾಯಂ, ಜಮುನಾ, ಮತ್ತೂರಿನಲ್ಲಿ ವಾಹನಗಳನ್ನು ಮಾರಾಟ ಮಾಡಿದ್ದಾರೆ ಎಂದು ಹಿರಿಯ ಪೊಲೀಸ್​ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts