More

  ಹಿಂದೂ ಹಬ್ಬಗಳ ರಜೆಗೆ ಕೊಕ್​ ಮುಸ್ಲಿಂ ಹಬ್ಬಗಳಿಗೆ ಬಂಪರ್​: ಶಿಕ್ಷಕರ ಬೇಸಿಗೆ ರಜೆಗೂ ಕತ್ತರಿ

  ಪಟನಾ: ಮುಖ್ಯಮಂತ್ರಿ ನಿತೀಶ್​ ಕುಮಾರ್​ ನೇತೃತ್ವದ ಬಿಹಾರ ಸರ್ಕಾರದ ತೀರ್ಮಾನವೊಂದು ವಿವಾದದ ಬಿರುಗಾಳಿಯನ್ನೇ ಎಬ್ಬಿಸಿದೆ. ಹಿಂದುಗಳ ಹಬ್ಬದ ರಜೆಯನ್ನು ಕಡಿತಗೊಳಿಸಿ, ಮುಸ್ಲಿ ಹಬ್ಬಕ್ಕೆ ರಜೆ ವಿಸ್ತರಣೆ ಮಾಡುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಸರ್ಕಾರ ಗುರಿಯಾಗಿದೆ.

  ಹಿಂದುಗಳ ಹಬ್ಬಗಳಾದ ಶ್ರೀ ಕೃಷ್ಣ ಜನ್ಮಾಷ್ಠಾಮಿ, ಶಿವರಾತ್ರಿ, ಶ್ರೀರಾಮನವಮಿ, ರಕ್ಷಾ ಬಂಧನ, ತೀಜ್​, ವಸಂತ ಪಂಚಮಿ ಮತ್ತು ಜಿವಿತಪುತ್ರಿಕಾ ಹಬ್ಬದ ರಜೆಗಳನ್ನು ರದ್ದು ಮಾಡಿ, ಈದ್​ ಮಿಲಾದ್​ ಮತ್ತು ಬಕ್ರೀದ್​ಗೆ ತಲಾ ಮೂರು ದಿನ ಹೆಚ್ಚುವರಿ ರಜೆಯನ್ನು ನೀಡಲಾಗಿದೆ. ಅಲ್ಲದೆ, ಮೊಹರಂ ಕಡೇ ದಿನಕ್ಕೂ ಎರಡು ದಿನ ರಜೆಯನ್ನು ನೀಡಲಾಗಿದೆ.

  ಇತ್ತೀಚೆಗಷ್ಟೇ ಅಂದರೆ, ನವೆಂಬರ್​ 27ರಂದು ಬಿಡುಗಡೆಯಾದ 2024ನೇ ಸಾಲಿನ ಕ್ಯಾಲೆಂಡರ್​ನಲ್ಲಿ ಈ ಬದಲಾವಣೆಗಳನ್ನು ಮಾಡಲಾಗಿದೆ. ಶಿಕ್ಷಕರ ಬೇಸಿಗೆ ರಜೆಯನ್ನು ಸಹ ರದ್ದು ಮಾಡಲಾಗಿದೆ. ಆದರೆ, ವಿದ್ಯಾರ್ಥಿಗಳಿಗೆ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ. ಒಟ್ಟು 60 ದಿನಗಳ ಬೇಸಿಗೆ ರಜೆಯಲ್ಲಿ ಶಿಕ್ಷಕರು 38 ದಿನ ಶಾಲೆಗೆ ಬರಬೇಕಿದೆ. ಉಳಿದಂತೆ 22 ದಿನಗಳು ಮಾತ್ರ ಅವರಿಗೆ ರಜೆ ಸಿಗಲಿದೆ.

  ಕ್ಯಾಲೆಂಡರ್‌ನಲ್ಲಿ ಏನೇನು ಸೇರಿಸಲಾಗಿದೆ?
  ಮೇ 1ರ ಕಾರ್ಮಿಕರ ದಿನವನ್ನು ರದ್ದು ಮಾಡಲಾಗಿದೆ. ಅ. 2ರಂದು ಮಹಾತ್ಮ ಗಾಂಧಿ ಮತ್ತು ಲಾಲ್​ ಬಹದ್ದೂರ್​ ಶಾಸ್ತ್ರಿ ಅವರ ಜಯಂತಿ ಆಚರಿಸಲಾಗುತ್ತದೆ ಮತ್ತು ಈ ದಿನ ಶಾಲೆಗಳಿಗೆ ರಜೆ ನೀಡುವುದು ಸಾಮಾನ್ಯ. ಆದರೆ, ಈ ರಜೆಯನ್ನು ಬಿಹಾರ ಸರ್ಕಾರ ರದ್ದು ಮಾಡಿದ್ದು, ಶ್ರೇಷ್ಠ ವ್ಯಕ್ತಿಗಳು ಜಯಂತಿಯ ಸಮಯದಲ್ಲೂ ಆಚರಣೆಯ ಬಳಿಕ ತರಗತಿಗಳು ಎಂದಿನಂತೆ ನಡೆಯಲಿವೆ. ಮಹಾನ್ ಪುರುಷರ ಮೌಲ್ಯಗಳು ಮತ್ತು ವ್ಯಕ್ತಿತ್ವದ ಬಗ್ಗೆ ಮಕ್ಕಳಿಗೆ ತಿಳಿಸುವ ಉದ್ದೇಶದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಬಿಹಾರ ಸರ್ಕಾರ ಸಮರ್ಥನೆ ನೀಡಿದೆ.

  ಕೆಲವು ತಿಂಗಳ ಹಿಂದೆ, ಕೆಲವು ಹಿಂದೂ ಹಬ್ಬಗಳ ರಜಾದಿನಗಳನ್ನು ಬಿಹಾರ ಸರ್ಕಾರ ರದ್ದುಗೊಳಿಸಿತು, ಈ ವೇಳೆ ಶಿಕ್ಷಕರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಗೆ ಮಣಿದ ಸರ್ಕಾರ ನಿರ್ಧಾರವನ್ನು ಹಿಂಪಡೆಯಿತು. ಆದರೆ, ಇದೀಗ ಕ್ಯಾಲೆಂಡರ್​ನಲ್ಲೇ ಬಿಗ್​ ಶಾಕ್​ ನೀಡಿದೆ. ಭಾರೀ ರಜೆಗಳನ್ನು ನಿತೀಶ್​ ಕುಮಾರ್​ ಸರ್ಕಾರ ಕಡಿತಗೊಳಿಸಿದೆ.

  ಬಿಜೆಪಿ ವಾಗ್ದಾಳಿ
  ಬಿಹಾರ ಸರ್ಕಾರ ತೀರ್ಮಾನವನ್ನು ಬಿಜೆಪಿ ಖಂಡಿಸಿದ್ದು, ಬಿಹಾರದ ಕುರ್ಸಿ ಕುಮಾರ್, ತುಷ್ಟೀಕರಣದ ನಾಯಕ ಎಂದು ಜರಿದಿದೆ. ಸಮಾಧಾನದ ಸೇನಾಧಿಪತಿ ಬಿಹಾರದ ಕುರ್ಸಿ ಕುಮಾರ್. ಚಿಕ್ಕಪ್ಪ-ಸೋದರಳಿಯ ಸರ್ಕಾರದ ಹಿಂದೂ ವಿರೋಧಿ ಮುಖ ಮತ್ತೊಮ್ಮೆ ಬಯಲಿಗೆ ಬಂದಿದೆ. ಒಂದೆಡೆ ಶಾಲೆಗಳಲ್ಲಿ ಮುಸ್ಲಿಂ ಹಬ್ಬಗಳಿಗೆ ರಜೆ ವಿಸ್ತರಣೆಯಾಗುತ್ತಿದ್ದರೆ, ಹಿಂದೂ ಹಬ್ಬಗಳ ರಜೆಯನ್ನು ರದ್ದುಗೊಳಿಸಲಾಗುತ್ತಿದೆ. ವೋಟ್ ಬ್ಯಾಂಕ್‌ಗಾಗಿ ಸನಾತನ ಸಂಸ್ಥೆಯನ್ನು ದ್ವೇಷಿಸುವ ಸರ್ಕಾರಕ್ಕೆ ನಾಚಿಕೆಯಾಗಬೇಕು” ಎಂದು ಕೇಂದ್ರ ಸಚಿವ ಅಶ್ವಿನಿ ಚೌಬೆ ಅವರು ಎಕ್ಸ್​ ಖಾತೆಯಲ್ಲಿ ಟೀಕಾ ಪ್ರಹಾರ ನಡೆಸಿದ್ದಾರೆ.

  ಸರ್ಕಾರದ ನಿರ್ಧಾರವನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ ನಾಯಕ ಸುಶೀಲ್ ಮೋದಿ, ನಿತೀಶ್ ಕುಮಾರ್ ಅವರ ಆಡಳಿತವು “ಹಿಂದೂ ವಿರೋಧಿ ಮುಖ”ವನ್ನು ಅನಾವರಣಗೊಳಿಸಿದೆ. ಇವರ ನಡೆ ಅಸಂಖ್ಯಾತ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದೆ. ಹಿಂದೂ ಹಬ್ಬಗಳ ರಜಾದಿನಗಳನ್ನು ಕಡಿತಗೊಳಿಸಲಾಗಿದ್ದು, ಮುಸ್ಲಿಂ ಹಬ್ಬಗಳಿಗೆ ರಜೆಯನ್ನು ಹೆಚ್ಚಿಸಲಾಗಿದೆ ಎಂದು ಖಂಡಿಸಿದರು.

  ಜೆಡಿಯು ಸಮರ್ಥನೆ
  ತಮ್ಮ ಸರ್ಕಾರದ ನಡೆಯನ್ನು ಜೆಡಿಯು ಸಮರ್ಥಿಸಿಕೊಂಡಿದ್ದು, ಕೆಲವು ಹಬ್ಬಗಳ ರಜೆ ಹೆಚ್ಚಳದ ಹಿಂದಿನ ಕಾರಣವನ್ನು ಶಿಕ್ಷಣ ಇಲಾಖೆ ವಿವರಿಸುತ್ತದೆ ಎಂದು ಹೇಳಿದೆ. ಎಲ್ಲವನ್ನು ರಾಜಕೀಯ ದೃಷ್ಟಿಯಲ್ಲಿ ನೋಡಬೇಡಿ ಎಂದು ಜೆಡಿಯು ನಾಯಕ ನೀರಜ್ ಕುಮಾರ್ ಇದೇ ಸಂದರ್ಭದಲ್ಲಿ ಕೇಳಿಕೊಂಡರು. ಶಬ್-ಎ-ಬರಾತ್‌ನ ರಜೆಗಳನ್ನು ಕಡಿತಗೊಳಿಸಲಾಗಿದ್ದು, ಅದರ ಬಗ್ಗೆ ಯಾವುದೇ ಚರ್ಚೆ ಮಾಡುತ್ತಿಲ್ಲ. ಮಹಾ ಶಿವರಾತ್ರಿ, ಕೃಷ್ಣ ಜನ್ಮಾಷ್ಟಮಿ, ವಸಂತ್ ಪಂಚಮಿ, ಹೋಳಿ ಮತ್ತು ದಸರಾ ರಜೆಗಳನ್ನು ಉಳಿಸಲಾಗಿದೆ. ಕೆಲವು ರಜೆಗಳನ್ನು ಏಕೆ ಹೆಚ್ಚಿಸಲಾಗಿದೆ ಎಂಬುದಕ್ಕೆ ಶಿಕ್ಷಣ ಇಲಾಖೆಯು ವಿವರಣೆಯನ್ನು ನೀಡಲಿದೆ. ರಾಜಕೀಯ ದೃಷ್ಟಿಯಲ್ಲಿ ನೋಡುವ ಬದಲು ಶಿಕ್ಷಣ ಇಲಾಖೆಯಿಂದ ಸ್ಪಷ್ಟನೆ ನೀಡಿದ ನಂತರ ಬಿಜೆಪಿ ಅಭಿಪ್ರಾಯ ನೀಡಬೇಕು ಎಂದು ಸಲಹೆ ನೀಡಿದರು. (ಏಜೆನ್ಸೀಸ್​)

  ಮುಸ್ಲಿಂ ಶಾಸಕಿ ಬಂದು ಹೋದ ಬೆನ್ನಲ್ಲೇ ಗಂಗಾಜಲದಿಂದ ಇಡೀ ದೇವಸ್ಥಾನ ಶುದ್ಧೀಕರಣ!

  ಊಟದಲ್ಲಿರಲಿ ಹೀರೆಕಾಯಿ: ಇದರ ಆರೋಗ್ಯಕರ ಲಾಭಗಳ ಬಗ್ಗೆ ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ!

  ಸ್ವಂತ ಮಕ್ಕಳೇ ಸೇಲ್​ಗೆ; ಶಿಶು ಮಾರಾಟವೇ ವೃತ್ತಿ: ಬಾಡಿಗೆ ತಾಯ್ತನಕ್ಕೂ ಸೈ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts