More

    ಮುಸ್ಲಿಂ ಶಾಸಕಿ ಬಂದು ಹೋದ ಬೆನ್ನಲ್ಲೇ ಗಂಗಾಜಲದಿಂದ ಇಡೀ ದೇವಸ್ಥಾನ ಶುದ್ಧೀಕರಣ!

    ಲಖನೌ: ಸಮಾಜವಾದಿ ಪಕ್ಷದ ಮುಸ್ಲಿಂ ಶಾಸಕಿ ಭೇಟಿ ನೀಡಿ ವಾಪಸ್​ ತೆರಳಿದ ಬೆನ್ನಲ್ಲೇ ಇಡೀ ದೇವಸ್ಥಾನವನ್ನು ಗಂಗಾಜಲದಿಂದ ಶುದ್ಧೀಕರಣಗೊಳಿಸಿದ ಘಟನೆ ಉತ್ತರ ಪ್ರದೇಶದ ಸಿದ್ಧಾರ್ಥ್​ನಗರ ಜಿಲ್ಲೆಯಲ್ಲಿ ನಡೆದಿದೆ.

    ಧೂಮರಿಯಾಗಂಜ್​ ಕ್ಷೇತ್ರದ ಶಾಸಕಿ ಸಯೀದಾ ಖಾತೂನ್, ಸ್ಥಳೀಯರ ಆಹ್ವಾನದ ಮೇರೆಗೆ ಷಟ್ಚಂಡಿ ಮಹಾಯಜ್ಞದಲ್ಲಿ ಪಾಲ್ಗೊಳ್ಳಲು ಭಾನುವಾರ (ನ.26) ಸಮಯ​ ಮಾತಾ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಆಕೆ ವಾಪಸ್​ ತೆರಳಿದ ಬಳಿಕ ಕೆಲವು ಮಂದಿ ಮಂತ್ರಗಳ ಪಠಣೆಯ ನಡುವೆ ಗಂಗಾಜಲದಿಂದ ಇಡೀ ದೇವಸ್ಥಾನವನ್ನು ಶುದ್ಧೀಕರಿಸಿದರು.

    ದೇವಸ್ಥಾನವು ಬಧಾನಿ ಚಫಾ ನಗರ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದ್ದು, ಪಂಚಾಯಿತಿ ಮುಖ್ಯಸ್ಥ ಧರ್ಮರಾಜ್​ ವರ್ಮ ನೇತೃತತ್ವದಲ್ಲೇ ಶುದ್ಧೀಕರಣ ನಡೆದಿದೆ. ಕೆಲವು ಅಧರ್ಮದ ಜನರು ಶಾಸಕಿಯನ್ನು ಆಹ್ವಾನಿಸಿದ್ದರು. ಸಯೀದಾ ಖಾತೂನ್ ಓರ್ವ ಮುಸ್ಲಿಂ ಮತ್ತು ಆಕೆ ಧನದ ಮಾಂಸವನ್ನು ಸೇವಿಸುತ್ತಾಳೆ. ಆಕೆಯ ಭೇಟಿಯಿಂದ ದೇವಸ್ಥಾನ ಅಪವಿತ್ರಗೊಂಡಿತ್ತು. ಶುದ್ಧೀಕರಣದ ಬಳಿಕ ದೇವಸ್ಥಾನ ಇದೀಗ ಪವಿತ್ರಗೊಂಡಿದ್ದು, ಪೂಜೆ ಮಾಡಲು ಯೋಗ್ಯವಾಗಿದೆ. ಇಂತಹ ನಡೆಯನ್ನು ಎಂದಿಗೂ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಧರ್ಮರಾಜ್​ ಹೇಳಿದ್ದಾರೆ.

    ಈ ಬಗ್ಗೆ ಸಯೀದಾ ಖಾತೂನ್ ಅವರು ಪ್ರತಿಕ್ರಿಯೆ ನೀಡಿದ್ದು, ನಾನು ಜನಪ್ರತಿನಿಧಿಯಾಗಿ, ಎಲ್ಲ ಧರ್ಮಗಳು ಮತ್ತು ಪಂಗಡಗಳಿಗೆ ಸಂಬಂಧಿಸಿದ ಸ್ಥಳಗಳಿಗೆ ಭೇಟಿ ನೀಡುವುದನ್ನು ನಾನು ಮುಂದುವರಿಸುತ್ತೇನೆ. ಇಂತಹ ಯಾವುದೇ ಕೃತ್ಯಗಳಿಂದ ನಾನು ಹಿಂಜರಿಯುವುದಿಲ್ಲ. ನಾನಿರುವ ಏರಿಯಾದಲ್ಲಿ ಅನೇಕ ಬ್ರಾಹ್ಮಣರು ಮತ್ತು ಸಂತರು ವಾಸವಿದ್ದಾರೆ. ಕಳೆದ 10 ದಿನಗಳ ಹಿಂದೆಯೇ ಸಮಯ ಮಾತಾ ದೇವಸ್ಥಾನಕ್ಕೆ ನನ್ನನ್ನು ಆಹ್ವಾನಿಸಿದ್ದರು. ನಾನು ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ. ಶಾಸಕಿಯಾಗಿ ನನ್ನನ್ನು ಆಹ್ವಾನಿಸಿದ ಸ್ಥಳಕ್ಕೆ ನಾನು ಹೋಗುತ್ತೇನೆ. ನನ್ನ ವ್ಯಾಪ್ತಿಯ ಅನೇಕ ದೇವಸ್ಥಾನಗಳನ್ನು ನಾನು ನವೀಕರಣಗೊಳಿಸಿದ್ದೇನೆ ಎಂದು ಖಾತೂನ್​ ಹೇಳಿದರು.

    ಚುನಾಯಿತ ಸದಸ್ಯ ಧರ್ಮರಾಜ್​ ವರ್ಮ ಅವರು ಬಿಜೆಪಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಾರಂಭಿಸಿದ ಬಲಪಂಥೀಯ ಗುಂಪು ಹಿಂದೂ ಯುವ ವಾಹಿನಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಖಾತೂನ್​ ಹೇಳಿದರು.

    ದೇವಸ್ಥಾನದ ಪೂಜಾರಿ ಶ್ರೀ ಕೃಷ್ಣ ದತ್ ಶುಕ್ಲಾ ಮಾತನಾಡಿ, ಮಹಾಯಜ್ಞಕ್ಕೆ ಶಾಸಕರನ್ನು ಆಹ್ವಾನಿಸಲಾಗಿತ್ತು. ಹೀಗಾಗಿ ಅವರು ಬಂದಿದ್ದರು. ಅನೇಕ ಸಮಯದವರೆಗೆ ಅಲ್ಲಿಯೇ ಇದ್ದು, ಸಾಮಾಜಿಕ ಮೂಲ ಸೌಕರ್ಯಗಳ ಬಗ್ಗೆ ಮಾತನಾಡಿ, ಆನಂತರ ಸ್ಥಳದಿಂದ ಹೊರಟರು. ಇದಾದ ಮಾರನೇ ದಿನ ವರ್ಮ ಕಡೆಯವರು ಬಂದು ಆಕೆಯನ್ನು ಏಕೆ ಆಹ್ವಾನಿಸಿದಿರಿ ಎಂದು ಗಲಾಟೆ ಮಾಡಿದರು. ಅಲ್ಲದೆ, ಆಕೆಯಿಂದ ದೇವಸ್ಥಾನ ಅಪವಿತ್ರ ಆಯಿತು ಎಂದರು. ಬಳಿಕ ಗಂಗಾಜಲ ಸಿಂಪಡಿಸಿ ಶುದ್ಧೀಕರಣ ಮಾಡಿದರು ಎಂದು ಶುಕ್ಲಾ ಅವರು ತಿಳಿಸಿದರು.

    ಸಮಯ ಮಾತಾ ದೇವಸ್ಥಾನವು ಹಿಂದೂಗಳಿಗೆ ಪೂಜ್ಯ ಧಾರ್ಮಿಕ ಸ್ಥಳವಾಗಿದ್ದು, ಇದು ರಾಪ್ತಿ ನದಿಯ ದಡದಲ್ಲಿರುವ ಸಿದ್ಧಾರ್ಥ್ ನಗರ ಜಿಲ್ಲೆಯಲ್ಲಿದೆ. ನೆರೆಯ ನೇಪಾಳ ಮತ್ತು ಹತ್ತಿರದ ಜಿಲ್ಲೆಗಳಿಂದ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. (ಏಜೆನ್ಸೀಸ್​)

    ಸಿಲ್ಕ್ಯಾರಾ ಸುರಂಗದಿಂದ ರಕ್ಷಿಸಲ್ಪಟ್ಟ 41 ಕಾರ್ಮಿಕರಿಗೆ ತಲಾ ಒಂದು ಲಕ್ಷ ರೂ.ಆರ್ಥಿಕ ನೆರವು ಘೋಷಿಸಿದ ಸಿಎಂ ಧಾಮಿ

    ಊಟದಲ್ಲಿರಲಿ ಹೀರೆಕಾಯಿ: ಇದರ ಆರೋಗ್ಯಕರ ಲಾಭಗಳ ಬಗ್ಗೆ ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts