More

    ಊಟದಲ್ಲಿರಲಿ ಹೀರೆಕಾಯಿ: ಇದರ ಆರೋಗ್ಯಕರ ಲಾಭಗಳ ಬಗ್ಗೆ ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ!

    ಕೆಲವು ಊಟದಲ್ಲಿ ಹೀರೆಕಾಯಿ ತಿನ್ನಲು ಹಿಂದೇಟು ಹಾಕುತ್ತಾರೆ. ಆದರೆ, ಅದರಲ್ಲಿ ಆರೋಗ್ಯಕರ ಗುಣಗಳ ತಿಳಿದರೆ ಯಾರೊಬ್ಬರು ಕೂಡ ಹೀರೆಕಾಯಿ ಮಿಸ್​ ಮಾಡುವುದಿಲ್ಲ. ಈ ಹೀರೆಕಾಯಿಯಲ್ಲಿ ಕ್ಯಾಲರಿ ಕಡಿಮೆ ಮತ್ತು ನಾರಿನಂಶ ಹೆಚ್ಚಾಗಿರುತ್ತದೆ. ಇದರಲ್ಲಿ ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಖನಿಜಗಳು ಹೇರಳವಾಗಿವೆ. ಈ ಪೋಷಕಾಂಶಗಳು ನಮ್ಮ ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತವೆ.

    ಹೀರೆಕಾಯಿಯಲ್ಲಿರುವ ಅಂಶಗಳು ನಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಮಧುಮೇಹದಿಂದ ಬಳಲುತ್ತಿರುವ ಅಥವಾ ಸಕ್ಕರೆ ಕಾಯಿಲೆ ಬರುವ ಅಪಾಯದಲ್ಲಿರುವವರು ಇದನ್ನು ಹೆಚ್ಚಾಗಿ ತೆಗೆದುಕೊಳ್ಳುತ್ತಾರೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಡೆಗಟ್ಟುವಲ್ಲಿ ಈ ತರಕಾರಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸತು, ಕಬ್ಬಿಣ, ಪೊಟ್ಯಾಸಿಯಮ್ ಸೇರಿದಂತೆ ಇತರ ಜೀವಸತ್ವಗಳು ಮತ್ತು ಖನಿಜಗಳು ಅವಶ್ಯಕ. ಅವು ಈ ಹೀರೆಜಕಾಯಿಯಲ್ಲಿ ಹೇರಳವಾಗಿದೆ.

    ಹೀರೆಕಾಯಿಯು ಸಿಲಿಕಾವನ್ನು ಹೊಂದಿದ್ದು, ಇದು ಚರ್ಮವನ್ನು ಮಾತ್ರವಲ್ಲದೆ ಕೂದಲು ಮತ್ತು ಉಗುರುಗಳ ನಿರ್ವಹಣೆಗೆ ಅಗತ್ಯವಾದ ಖನಿಜವಾಗಿದೆ. ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಸಹ ಇದು ಉಪಯುಕ್ತವಾಗಿದೆ.

    ಹೀರೆಕಾಯಿಯು ತೂಕ ನಿಯಂತ್ರಣಕ್ಕೂ ಸಹಕಾರಿ. ಈ ತರಕಾರಿಯಲ್ಲಿ ವಿಟಮಿನ್ ಸಿ, ಕಬ್ಬಿಣ, ಮೆಗ್ನೀಸಿಯಮ್, ರೈಬೋಫ್ಲಾವಿನ್, ಥಯಾಮಿನ್ ಮತ್ತು ಸತು ಸೇರಿದಂತೆ ಮುಂತಾದ ಬಹುಮುಖ್ಯ ಅಂಶಗಳಿವೆ. ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಇವು ಉಪಯುಕ್ತವಾಗಿವೆ. ಇದು ಯಕೃತ್ತಿನ ಆರೋಗ್ಯವನ್ನೂ ಸುಧಾರಿಸುತ್ತದೆ. ಇದು ಹೃದಯಕ್ಕೂ ಒಳ್ಳೆಯದು. ಹೀರೆಕಾಯಿಯು ನಿಮ್ಮನ್ನು ಅಪಾಯಕಾರಿ ಕಾಯಿಲೆಗಳಿಂದ ರಕ್ಷಿಸಲು ಸ್ವತಂತ್ರ ರಾಡಿಕಲ್​ಗಳೊಂದಿಗೆ ಹೋರಾಡುತ್ತದೆ.

    ಹೀರೆಕಾಯಿಯನ್ನು ಸಾಂಬರ್​ ರೂಪದಲ್ಲಿ ಮಾತ್ರವಲ್ಲದೆ ಇತರ ವಿಧಾನಗಳಲ್ಲಿಯೂ ತೆಗೆದುಕೊಳ್ಳಬಹುದು. ಇದನ್ನು ಮೇಲೋಗರ ಮತ್ತು ಬೇಳೆಕಾಳುಗಳಂತೆಯೂ ಬೇಯಿಸಬಹುದು. ಆದರೆ, ಹೀರೆಕಾಯಿ ಬೇಯಿಸುವಾಗ ಒಂದು ವಿಷಯವನ್ನು ನೆನಪಿನಲ್ಲಿಡಬೇಕು, ಇದನ್ನು ಹೆಚ್ಚು ನೀರು ಬಳಸಿ ಬೇಯಿಸಬಾರದು ಮತ್ತು ಹೆಚ್ಚು ಬೇಯಿಸಬಾರದು. ಏಕೆಂದರೆ ಕೆಲವು ನೀರಿನಲ್ಲಿ ಕರಗುವ ವಿಟಮಿನ್​​ಗಳು ನಷ್ಟವಾಗಬಹುದು. (ಏಜೆನ್ಸೀಸ್​)

    ಸಾವು ಗೆದ್ದು ಬಂದ ಶ್ರಮಿಕರ ಜತೆ ಫೋನ್​ನಲ್ಲಿ ಮಾತನಾಡಿ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ

    ಭಾರತದ ವಿರುದ್ಧದ ಟಿ20 ಸರಣಿಯ ಮಧ್ಯದಲ್ಲಿಯೇ ತವರಿಗೆ ಹೊರಟ ವಿಶ್ವಕಪ್ ವಿಜೇತ ಆಸೀಸ್ ಕ್ರಿಕೆಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts