More

    ಬಿಗ್​ ಬಾಸ್ ಕನ್ನಡ ಸೀಸನ್-10: ಹಾರದ ಡ್ರೋನ್​, ಹೋಲ್ಡ್​ನಲ್ಲಿ ಪ್ರತಾಪ!

    ಬೆಂಗಳೂರು: ಕನ್ನಡದ ಬೃಹತ್ ರಿಯಾಲಿಟಿ ಶೋ ಬಿಗ್​ ಬಾಸ್​ ಕನ್ನಡ ಹತ್ತನೇ ಆವೃತ್ತಿಯ ಹದಿನಾರು ಸ್ಪರ್ಧಿಗಳ ಪೈಕಿ ಈಗಾಗಲೇ ಆರು ಸ್ಪರ್ಧಿಗಳ ಅಧಿಕೃತ ಘೋಷಣೆ ಮಾಡಲಾಗಿದೆ. ಆದರೆ ಈ ಮಧ್ಯೆ ಸ್ಪರ್ಧೆಗೆ ಆಕಾಂಕ್ಷಿ ಆಗಿದ್ದವರೊಬ್ಬರ ಪರಿಸ್ಥಿತಿ ‘ಹಾರದ ಡ್ರೋನ್​ ಹೋಲ್ಡ್​ನಲ್ಲಿ ಪ್ರತಾಪ’ ಎಂಬಂತಾಗಿದೆ.

    ಹೌದು.. ಬಿಗ್​ಬಾಸ್​ ರಿಯಾಲಿಟಿ ಶೋಗೆ ಸಂಭಾವ್ಯ ಸ್ಪರ್ಧಿಗಳ ಪೈಕಿ ಒಬ್ಬರಾಗಿರುವ ಡ್ರೋನ್ ಪ್ರತಾಪ್ ಆರಂಭಿಕ ಹಂತದಲ್ಲಿ ಬಿಗ್ ಬಾಸ್​ ಮನೆಯೊಳಕ್ಕೆ ಪ್ರವೇಶ ಮಾಡುವಲ್ಲಿ ವಿಫಲರಾಗಿದ್ದಾರೆ. ಬಿಗ್​​ ಬಾಸ್​ ಮನೆಯೊಳಕ್ಕೆ ಪ್ರವೇಶ ನಿಗದಿ ಮಾಡುವ ನಿಟ್ಟಿನಲ್ಲಿ ಪ್ರೇಕ್ಷಕರ ಸಮ್ಮುಖದಲ್ಲಿ ನಡೆಸಲಾದ ವೋಟಿಂಗ್​ನಲ್ಲಿ ಪ್ರತಾಪ್ ಅಗತ್ಯ ಸಂಖ್ಯೆಯ ಮತ ಗಳಿಸದ್ದರಿಂದ ಬಿಗ್ ಬಾಸ್ ಮನೆ ಪ್ರವೇಶ ಸದ್ಯಕ್ಕೆ ತಪ್ಪಿಹೋಗಿದೆ.

    ಡ್ರೋನ್ ಪ್ರತಾಪ್​ಗೆ ಪ್ರೇಕ್ಷಕರಿಂದ ಶೇ. 41 ಮತಗಳಷ್ಟೇ ಸಿಕ್ಕಿರುವುದರಿಂದ ಅವರ ಬಿಗ್​ ಬಾಸ್ ಮನೆ ಪ್ರವೇಶವನ್ನು ಸದ್ಯ ಹೋಲ್ಡ್​ನಲ್ಲಿ ಇಡಲಾಗಿದೆ. ಹಾಗಂತ ಇದೇ ಅಂತಿಮ ಅಂತೇನಲ್ಲ. ಹೋಲ್ಡ್​ನಲ್ಲಿ ಇಡಲಾದ ಸಂಭಾವ್ಯ ಸ್ಪರ್ಧಿಗಳಿಗೆ ಬಿಗ್​ ಬಾಸ್ ಮನೆ ಪ್ರವೇಶಕ್ಕೆ ಇನ್ನೊಂದು ಅವಕಾಶ ಸಿಗುವ ಸಾಧ್ಯತೆ ಇರುತ್ತದೆ.

    ಇದನ್ನೂ ಓದಿ: ನಮಸ್ಕಾರ ದೇವ್ರು.. ಇಲ್ಲಿ ದೇವ್ರದ್ದೇ ಬ್ಯಾಟಿಂಗ್​-ಫೀಲ್ಡಿಂಗ್​!; ಡಾ.ಬ್ರೋ ಭೇಟಿ ನೀಡಿರುವ ಈ ಕ್ರಿಕೆಟ್ ದೇವಸ್ಥಾನ ಎಲ್ಲಿದೆ?

    ಅಂದರೆ, ಹೋಲ್ಡ್​ನಲ್ಲಿರುವ ಸಂಭಾವ್ಯರ ಪೈಕಿ ಗರಿಷ್ಠ ಅಂಕ ಪಡೆದ ಒಬ್ಬರಿಗೆ ಸ್ಪರ್ಧಿಯಾಗುವ ಅವಕಾಶ ಇರುತ್ತದೆ. ಸದ್ಯ 777 ಚಾರ್ಲಿ ಖ್ಯಾತಿಯ ನಟಿ ಸಂಗೀತಾ ಶೃಂಗೇರಿ, ನಟ ಬುಲೆಟ್ ಪ್ರಕಾಶ್ ಪುತ್ರ ರಕ್ಷತ್ ಬುಲೆಟ್, ನಟಿ ತನಿಷಾ ಕುಪ್ಪಂಡ ಕೂಡ ಹೋಲ್ಡ್​ನಲ್ಲಿದ್ದಾರೆ. ಸುರಸುಂದರ ಅವಿನಾಶ್​ ಕಡಿಮೆ ಅಂಕ ಬಂದಿದ್ದರಿಂದ ಸ್ಪರ್ಧಿ ಆಗುವ ಅವಕಾಶ ಕಳೆದುಕೊಂಡಿದ್ದಾರೆ.

    ಬಿಗ್​ ಬಾಸ್ ಕನ್ನಡ ಸೀಸನ್ 10 ಮೊದಲ ಸ್ಪರ್ಧಿಯಾಗಿ ಕಿರುತೆರೆ ನಟಿ ನಮ್ರತಾ ಗೌಡ ಆಯ್ಕೆ ಆಗಿದ್ದಾರೆ. ಬಿಗ್​ ಬಾಸ್ ನಿರೂಪಕ ಕಿಚ್ಚ ಸುದೀಪ್ ನೀಡಿದ ಟಾಸ್ಕ್​​ನಂತೆ ಈಕೆಯೇ ಬಿಗ್​ ಬಾಸ್ ಮನೆಯ ಹಾಲು ಉಕ್ಕಿಸಿದ್ದಾರೆ. ಉಳಿದಂತೆ ಸ್ನೇಹಿತ್ ಗೌಡ, ಈಶಾನಿ, ಸಂತೋಷ್​ ಕುಮಾರ್​, ನೀತು ವನಜಾಕ್ಷಿ, ಸಿರಿ, ವಿನಯ್ ಗೌಡ ಸ್ಪರ್ಧಿಗಳಾಗಿ ಆಯ್ಕೆ ಆಗಿದ್ದಾರೆ.

    ಖಿನ್ನತೆ ತಲೆಯ ಸಮಸ್ಯೆ, ಅದಾಗ್ಯೂ ಪರಿಹಾರ ಕಾಲುಗಳಲ್ಲಿದೆ!; ಅಧ್ಯಯನದಲ್ಲಿ ಬಹಿರಂಗ

    ಇವರೆಲ್ಲ ದುಡಿಯದೇ ಕೋಟ್ಯಧಿಪತಿಗಳು; ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿದ್ರೆ ಕೋಟಿಗಟ್ಟಲೆ ಹಣ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts