

ಬೆಂಗಳೂರು: ಇನ್ಸ್ಟಾಗ್ರಾಂನಲ್ಲಿ ಒಂದು ಮಿಲಿಯನ್ ಫಾಲೋವರ್ಸ್ ಆಗಿದ್ದಕ್ಕೆ ತುಂಬಾ ಖುಷಿಯಲ್ಲಿರುವ ಮಾಜಿ ಬಿಗ್ಬಾಸ್ ಸ್ಪರ್ಧಿ ಹಾಗೂ ಟ್ರೋಲಿಗರ ಫೇವರಿಟ್ ಸೋನು ಶ್ರೀನಿವಾಸ ಗೌಡ ಬಿಕಿನಿ ವಿಡಿಯೋವನ್ನು ಹಂಚಿಕೊಂಡಿದ್ದಾಳೆ.
ಸಾಮಾಜಿಕ ಜಾಲತಾಣವನ್ನು ಹೆಚ್ಚು ಬಳಸುವವರಿಗೆ ಸೋನು ಶ್ರೀನಿವಾಸ ಗೌಡರನ್ನು ಪರಿಚಯಿಸುವ ಅಗತ್ಯವಿಲ್ಲ. ಏಕೆಂದರೆ, ಆಕೆಯ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್ ವಿಡಿಯೋಗಳು ಮತ್ತು ಮೀಮ್ಸ್ ಯಾವಾಗಲೂ ಹರಿದಾಡುತ್ತಲೇ ಇರುತ್ತವೆ. ಪ್ರತಿಭೆಯಿಂದ ಗುರುತಿಸಿಕೊಳ್ಳಲು ಸಾಧ್ಯವಾಗದೇ ವಿವಾದಗಳಿಂದಲೇ ಹೆಚ್ಚು ಸದ್ದು ಮಾಡಿರುವ ಮತ್ತು ಮಾಡುತ್ತಿರುವ ಸೋನು, ವಿವಾದಗಳ ಕಾರಣದಿಂದಲೇ ವಿವಾದಿತ ಬಿಗ್ಬಾಸ್ ಶೋನಲ್ಲೂ ಭಾಗವಹಿಸಿ ಕೆಲವೇ ವಾರಕ್ಕೆ ಹೊರಗಡೆ ಬಂದಿದ್ದು ಅನೇಕರಿಗೆ ತಿಳಿದಿದೆ.
ಪ್ರಸ್ತುತ ಸೋನು ಗೌಡ ಪ್ರವಾಸಿಗರ ಸ್ವರ್ಗ ಮಾಲ್ಡೀವ್ಸ್ನಲ್ಲಿ ಬೀಡುಬಿಟ್ಟಿದ್ದಾರೆ. ಪ್ರಕೃತಿಯ ಸೌಂದರ್ಯವನ್ನು ಸವಿತ್ತಿರುವುದರ ಜತೆಗೆ ಹಾಟ್ ಫೋಟೋ ಮತ್ತು ವಿಡಿಯೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹರಿಬಿಡುವುದರೊಂದಿಗೆ ಪಡ್ಡೆ ಹುಡುಗರ ಮೈ ಬಿಸಿಯೇರಿಸುತ್ತಿದ್ದಾರೆ. ಅವರ ಫೋಟೋ ಮತ್ತು ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಟ್ರೋಲಿಗರನ್ನು ಕೆರಳಿಸುತ್ತಿವೆ. ಹೀಗಾಗಿ ಕಾಮೆಂಟ್ ಬಾಕ್ಸ್ನಲ್ಲಿ ಅಶ್ಲೀಲ ಕಾಮೆಂಟ್ಗಳೇ ತುಂಬಿ ಹೋಗಿವೆ.
ನಿನ್ನೆಯಷ್ಟೇ ಸೋನು ಗೌಡ ಅವರ ಇನ್ಸ್ಟಾಗ್ರಾಂ ಖಾತೆ 1 ಮಿಲಿಯನ್ ಫಾಲೋವರ್ಸ್ ದಾಟಿದ್ದು, ಇದೇ ಖುಷಿಯಲ್ಲಿ ಬಿಕಿನಿ ವಿಡಿಯೋ ಹಂಚಿಕೊಂಡಿರುವ ಸೋನು, ಈ ವಿಡಿಯೋ 1 ಮಿಲಿಯನ್ ಫಾಲೋವರ್ಸ್ ಆಗಿದ್ದಕ್ಕೆ ಎಂದು ಅಡಿಬರಹ ಬರೆದುಕೊಂಡಿದ್ದಾಳೆ. ಬಿಕಿನಿ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, 14 ಲಕ್ಷ ವೀಕ್ಷಣೆ ಮತ್ತು 58 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ.
ಆದರೆ, ಕಾಮೆಂಟ್ನಲ್ಲಿ ಜನರು ಕೆಟ್ಟ ಕಾಮೆಂಟ್ಗಳನ್ನು ಮಾಡುತ್ತಾರೆ ಅಂತ ಕಾಮೆಂಟ್ ಮಾಡುವ ಆಪ್ಸನ್ ಅನ್ನೇ ನಿಖರವಾಗಿ ಬಿಕಿನಿ ವಿಡಿಯೋಗೆ ಆಫ್ ಮಾಡಿದ್ದಾರೆ. ಆದರೂ ಬೇರೆ ವಿಡಿಯೋಗಳಲ್ಲಿ ಸೋನು ಅವರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಹದ್ದು ಮೀರಿದ್ದಾಳೆ ಎಂದು ಟೀಕಾ ಪ್ರಹಾರ ಮಾಡುತ್ತಿದ್ದಾರೆ. ಇನ್ನು ಕೆಲವರು ಸೋನು ಬೆಂಬಲಕ್ಕೆ ನಿಂತಿದ್ದು, ಅವರ ಜೀವನ, ಅವರ ಇಷ್ಟ. ನೀವು ಎಂಜಾಯ್ ಮಾಡಿ, ಕೆಟ್ಟ ಕಾಮೆಂಟ್ಗಳಿಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಸಲಹೆ ನೀಡಿದ್ದಾರೆ.
ವಿವಾದಗಳು ಹಾಗೂ ಬಿಗ್ಬಾಸ್ ಸ್ಪರ್ಧೆಯಿಂದ ಪಡೆದ ಖ್ಯಾತಿಯಿಂದ ಸೋನು ಶ್ರೀನಿವಾಸ್ ಗೌಡ ಅವರಿಗೆ ಸಿನಿಮಾ ಆಫರ್ಗಳು ಬರುತ್ತಿವೆ. ಬರೀ ಸಿನಿಮಾ ಮಾತ್ರವಲ್ಲ, ವೆಬ್ ಸಿರೀಸ್ ಮತ್ತು ಶಾರ್ಟ್ ಸಿನಿಮಾಗಳಲ್ಲೂ ಈಕೆ ಬಣ್ಣ ಹಚ್ಚಿದ್ದಾರಂತೆ. ಟಿಕ್ಟಾಕ್ ಮಾಡಿದಷ್ಟು ಸುಲಭವಲ್ಲ ಈ ಸಿನಿಮಾವೆಂದು ಆಕೆ ಈ ಹಿಂದೆ ಹೇಳಿಕೊಂಡಿದ್ದಾಳೆ. ಕ್ಯಾಡ್ಬರೀಸ್ ಜತೆಗೆ ಅನೇಕ ಸಿನಿಮಾಗಳಲ್ಲಿ ಅವಕಾಶ ಸಿಗುತ್ತಿದೆ. ಎಲ್ಲ ಸಿನಿಮಾಗಳಲ್ಲೂ ಬೋಲ್ಡ್ ಪಾತ್ರವನ್ನೇ ಮಾಡುವಂತೆ ಕೇಳುತ್ತಿದ್ದಾರೆ. ಆದರೆ ಈಗ ಅದರಿಂದಲೇ ಆರಂಭಿಸಿದರೆ ಮುಂದೆ ಬೇರೆ ಪಾತ್ರಗಳಿಗೆ ಅವಕಾಶ ಸಿಗುವುದಿಲ್ಲವೆಂದು ನಾನೇ ಸುಮ್ಮನಾಗಿದ್ದೇನೆ. ಬೇರೆ ರೀತಿಯ ಪಾತ್ರಗಳನ್ನು ಮಾಡುತ್ತೇನೆ ಎಂದು ಆಕೆ ಈ ಹಿಂದೆ ಹೇಳಿಕೊಂಡಿದ್ದರು.